Apr 05, 2021 at 9:48 am
*
*ಆಲಸ್ಯದ ತ್ಯಾಗ*
ಮಳೆ ಸುರಿಸುವ ಕಾಲಕೆ ಹದವಾಗದ ಧರೆಯಿಂದು
ಕಳೆ ಬೆಳೆದು ಕವಲೊಡೆದು
ನಿಂತಿಹದಿಂದು
ಕರ್ಮವ ಮರೆತು ಕಾಲದ ತುತ್ತಿಗೆ ಶರಣಾಗಿಂದು
ಆಗಿಹರು ಯುವ ರೈತರು ಆಲಸ್ಯದ ಗುಲಾಮರಿಂದು
ಬಿತ್ತುವ ಹೊತ್ತಲಿ ಶಾಸ್ತ್ರವ ಮರೆತು
ಹೊತ್ತಿಸಿ ಅಗ್ನಿಯ ಮಾಂಸವ ಬೇಯಿಸಿ
ಚೆಲ್ಲಿಸಿ ರಕ್ತವ ಸೇವಿಸಿ ಮಧ್ಯವ
ಫಲವನು ಕೊಡಲು ಧರೆಯ ಕೇಳುತಿಹರು
ಸೊರಗುತಿದೆ ಧರೆಯು ಕಾಲ ಗತಿಸಿದಂತೆ
ಕೊರಗುತಿದೆ ಮೇಲ್ಪದರ ರಸಾಯನಿಕ ವಿಷವನುಂಡು
ನಶಿಸುತಿದೆ ಪೂರ್ವಜರ ಊಳುವ ಬಗೆಯು
ಕಳೆಯುತಿದೆ ಧರೆಯ ಫಲವತ್ತತೆಯ ಫಲವು
ಉದಯ ಪೂರ್ವದಲಿ ನಿನ್ನೊಡೆಯನ ನೀ ನೆನೆದು
ಬಸವನ ಕಾಲ್ ಕಸ ಕಣ ಕಣವ ನೀ ತೆಗೆದು
ಅದರೊಡಲವ ತುಂಬಿಸಿ ನೀರಡಿಕೆಯ ನೀಗಿಸಿ
ನಿನ್ನಷ್ಟೇ ಶುಚಿಯಾಗಿಡು ಧರೆ ಊಳುವ ಧನಿಯನ ನೀ
ಕದಡಿದ ಕಡ್ಡಿಗಳ ಒಗ್ಗೂಡಿಸಿ ಕಟ್ಟಿ
ಮುದಡಿದ ಎಲೆಗಳ ಗೂಡಿಸಿ ಇಟ್ಟು
ಹರಡಿದ ಸಗಣಿಯ ಅದರ ಮೇಲೊಟ್ಟಿ
ಸಾವಯವ ಗೊಬ್ಬರವ ಮಾಡು ನೀ ಸೃಷ್ಠಿ
ವ್ಯಯಿಸದಿರು ಕಾಲವ ಹರಟೆ ಕಟ್ಟೆಯನೇರಿ
ಸವಿಸು ಅಮೂಲ್ಯ ಹೊತ್ತನು ಅನುಭವಿಗಳ ಸಂಗಡ
ಮನಬಿಚ್ಚಿ ಕೇಳು ಧರೆಯನೊಲಿಸುವ ಪರಿಯನ
ಸುರಿಸುವರು ನಿನಗೆ ಸಾಗರದಷ್ಟು ಅರಿವನ್ನ
ಹಿಂಡು ನೀ ಬೆವರ ಹನಿಗಳ ಹೊಳೆಯ
ಒದ್ದೆಯಾಗಿ ಒಡೆಯಲಿ ರಾಶಿ ರಾಶಿ ಹೆಂಟೆಯ
ಚಿಗುರೊಡೆದು ಪುಟಿದೆದ್ದು ಬರುವುದು
ಮನ ಮನೆ ತುಂಬುವ ನಗ ನಾಣ್ಯ ರಾಶಿಯು
ಆಕಳಿಕೆಯ ಅಳಿಸಿ ಆಲಸ್ಯವಾ ತೊರೆದು
ಬಿಕ್ಕಳಿಕೆಗೆ ನೀರುಣಿಸಿ ಪುಟಿದೆದ್ದು ನೀನಿಂತು
ಕುಲಕಸಬನು ಹೊತ್ತು ಗರ್ವದಿಂ ಸಾಗಿಂದು ನೀ
ಒಲಿದಪ್ಪಿಕೊಳ್ಳುವುದು ಧರೆಯು ನಿನ್ನ
ಶ್ರೀ ಎಂ ಎಚ್ ಲಷ್ಕರಿ
ಶಿಕ್ಷಕರು ನಿಡಗುಂದಿ
Apr 05, 2021 at 9:48 am
Apr 05, 2021 at 9:48 am
Apr 05, 2021 at 9:48 am
Apr 05, 2021 at 9:48 am
Apr 05, 2021 at 9:48 am
ಐದು ದಶಕಗಳಿಂದ ಅರಿವಿನ ಜ್ಯೋತಿಯಾಗಿ ಬೆಳಗುತ್ತಾ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಅನುಪಮಾ ಸೇವೆ ಸಲ್ಲಿಸುತ್ತಿರುವ ಪಟ್ಟಣದ ನಾಯಕ ಶಿಕ್ಷಣ ಸಂಸ್ಥೆಯ ನ್ಯೂ ಇಂಗ್ಲಿಷ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 50ನೇ ಸುವರ್ಣ ಮಹೋತ್ಸವದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸ್ಥಳೀಯ ಶಿಕ್ಷಣ ಸಂಸ್ಥೆಯಾದ ನಾಯಕ್ ಶಿಕ್ಷಣ ಸಂಸ್ಥೆಯ ನ್ಯೂ ಇಂಗ್ಲಿಷ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 50ನೇ ಸುವರ್ಣ ಮಹೋತ್ಸವದ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು , 1973ರ ಜುಲೈ 14ರಂದು 42 ವಿದ್ಯಾರ್ಥಿಗಳನ್ನು ಒಳಗೊಂಡು 9 ಜನ ಶಿಕ್ಷಕರಿಂದ ಒಂದು ಬಾಡಿಗೆ ಕೋಣೆಯಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ ತದನಂತರ 1995 ರಲ್ಲಿ ತನ್ನದೇ ಆದ ಹೊಸ ಕಟ್ಟಡವನ್ನ ನಿರ್ಮಿಸಲಾಯಿತು ಆ ಸಮಯದಿಂದ ಈ ಸಮಯದವರೆಗೆ ಐದು ದಶಕಗಳನ್ನ ಯಶಸ್ವಿಯಾಗಿ ಪೂರೈಸಿದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿ 50ರ ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತ್ತು.ಈ ಒಂದು ಕಾರ್ಯಕ್ರಮವನ್ನು ಶಾಂತಿಯ ಸಂಕೇತವಾದ ಪಾರಿವಾಳವನ್ನು ಹಾರಿಬಿಡುವುದರ ಜೊತೆಗೆ ಸಸಿಗೆ ನೀರುಣಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಸಿ ಎಸ್ ರಾಠೋಡ ವಹಿಸಿಕೊಂಡಿದ್ದರು . ಮುಖ್ಯ ಅತಿಥಿಗಳಾಗಿ ಶ್ರೀ ಬಿ ಎಸ್ ಪಠಾಣ ಮುಖ್ಯ ಆಡಳಿತ ಅಧಿಕಾರಿಗಳು ನಾಯಕ ಶಿಕ್ಷಣ ಸಂಸ್ಥೆ ವಿಜಯಪುರ. ಶ್ರೀ ಎಸ್ ಎಲ್ ಚಿಂತಾಮಣಿ . ಶ್ರೀ ವಿರೂಪಯ್ಯ ಬಾನಾಳಮಠ. ಶ್ರೀ ಆರ್ ಪಿ ಲಮಾಣಿ . ಶ್ರೀ ಚಂದ್ರಶೇಖರ ಹಡಪದ. ಮತ್ತು ಶಿಕ್ಷಣ ಸಂಸ್ಥೆಯ ಕಾಲೇಜು . ಪ್ರೌಢ ವಿಭಾಗ . ಪ್ರಾಥಮಿಕ ವಿಭಾಗದ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Apr 05, 2021 at 9:48 am
Apr 05, 2021 at 9:48 am
Apr 05, 2021 at 9:48 am
Apr 05, 2021 at 9:48 am
ಸ್ಪರ್ದೆಗಳು
ಚಿತ್ರಕಲೆ
ಶಿಲ್ಪಕಲೆ
ನಾಟಕ
ಲೇಖನಗಳು
ಸ್ಪರ್ದೆಗಳು
ಚಿತ್ರಕಲೆ
ಶಿಲ್ಪಕಲೆ
ನಾಟಕ
ಲೇಖನಗಳು