logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

Advanced Search

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.
ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯು ದಿನಾಂಕ :19-09-2023 ರಂದು ರಾಣೇಬೆನ್ನೂರ್ ತಾಲ್ಲೂಕಿನ ಮಾಕನೂರ್ ಗ್ರಾಮದಲ್ಲಿ ನಡೆಯಿತು. ಕಾರ್ಯದಲ್ಲಿ ರಾಣೇಬೆನ್ನೂರ್ ನ ಶಾಸಕರಾದ ಶ್ರೀ ಮಾನ್ಯ ಪ್ರಕಾಶ ಕೋಳಿವಾಡ್ ರವರು ಮತ್ತು ಜಿಲ್ಲಾ ಹಂತದ ಅಧಿಕಾರಿಗಳು ಭಾಗವಸಿದ್ದರು. ಉದ್ಘಾಟನೆ ಅದ್ದೂರಿಯಾಗಿ ನಡೆಯಿತು. ಆದರೆ ಹೆಚ್ಚಿನ ಖೋ ಖೋ ಪಂದ್ಯಗಳಲ್ಲಿ ಜಗಳಗಳೇ ಸಂಭವಿಸಿದ್ದು ದುರದೃಷ್ಟಕರ. ಕಷ್ಟ ಪಟ್ಟು ಮಕ್ಜಳನ್ನು ಆಟಕ್ಕೆ ಅಣಿಗೊಳಿಸಿ ಕರೆದುಕೊಂಡು ಬಂದರೆ, ಇಲ್ಲಿ ನಡೆದುದೆ ಬೇರೆಯಾಗಿತ್ತು. ಇವು ಇಲಾಖೆಯ ಕ್ರೀಡಾಕೂಟ ದ ಬದಲಾಗಿ ಸ್ವಂತ ಗ್ರಾಮದಲ್ಲಿ ನಡೆದ ಕ್ರೀಡಾಕೂಟದಂತೆ ಭಾಸವಾಗಿತ್ತು. ಇಲಾಖೆಯ ನಿಯಮಾವಳಿಗಳಿಗೆ ತಕ್ಕಂತೆ ನಡೆಯದೆ ಅವ್ಯವಸ್ಥೆ ಯ ಆಗರವಾಗಿತ್ತು. ಈಗಾಗಲೇ ಇದರ ಬಗ್ಗೆ ಜಿಲ್ಲೆಯ 2 or 3 ತಾಲೂಕಿನವರು ಹಾವೇರಿ ಜಿಲ್ಲಾ ಉಪನಿರ್ದೇಶಕರಿಗೆ ದೂರನ್ನು ನೀಡಲಾಗಿದೆ ಎಂಬ ಮಾಹಿತಿಯ ಜಾಡು ಹಿಡಿದಾಗ ಹಾನಗಲ್ ಶಿಗ್ಗಾಂವ್ ಮತ್ತು ಬ್ಯಾಡಗಿ ತಂಡಗಳ ಊರಿನವರು ದೂರು ದಾಖಲಿಸಿದ್ದು ತಿಳಿದುಬಂದಿದೆ. ದೂರು ಕೊಟ್ಟ ಹಾನಗಲ್ ತಾಲೂಕಿನ ಬ್ಯಾತನಾಳ ಗ್ರಾಮದವರನ್ನು ಸಂಪರ್ಕಿಸಿದಾಗ ನಮಗೆ ಅಂಪೈರ್ ರವರನ್ನು ಇಲಾಖೆಯವರಿಗೆ ಆಧ್ಯತೆ ಕೊಡದೆ ಹೊರಗಿನವರಿಂದ ಆಟ ಆಡಿಸಲಾಯಿತು. ಮಾಕನೂರ್ ಹಾಗೂ ಅಂಗರಗಟ್ಟಿ ತಂಡದ ನಡುವೆ ಹಣಾಹಣಿ ನಡೆದಾಗ ಅವರುಗಳು ಸಂಪೂರ್ಣ ಏಕಮುಖವಾಗಿ ತೀರ್ಪು ನೀಡಲಾಗಿದೆ. ನಮ್ಮ ತಂಡ ವಿಜಯಶಾಲಿ ಯಾಗುವಂತಿದ್ದರು ನಿರ್ಣಾಯಕರ ವ್ಯವಸ್ಥಿತ ಪಿತೂರಿಯಿಂದ ಸೋಲುವಂತಾಯಿತು. ಅದಕ್ಕೆ ಸಂಬಂಧಿಸಿದ video ಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಶಿಗ್ಗಾಂವ್ ಹಾಗೂ ಬ್ಯಾಡಗಿ ತಂಡದವರನ್ನು ಕೇಳಿದಾಗ ಅವರು ಸಹಿತ ಮೇಲಿನಂತೆ ದೂರು ಹೇಳಿದ್ದಲ್ಲದೆ. ಸವಣೂರ ತಾಲೂಕಿನ ತಂಡದಲ್ಲಿ ವಯಸ್ಸಿಗೆ ಮೀರಿದ ಮತ್ತು ಶಾಲೆಯಲ್ಲಿ ಇಲ್ಲದ ಮಕ್ಕಳನ್ನು ಹಾಕಿಕೊಂಡು ಆಡಿಸಿದ್ದು ಮುಂದಿನ ಪಂದ್ಯದಲ್ಲಿ ದೃಢಪಟ್ಟರೂ ಆ ತಂಡದ ವಿರುದ್ಧ ಕ್ರಮಕೈಗೊಳ್ಳದೆ ಬ್ಯಾಡಗಿ ತಾಲೂಕಿನ ತಂಡದಲ್ಲಿ ಆಡಿದ ಸುಮಾರು 4 ವಿದ್ಯಾರ್ಥಿಗಳನ್ನು ತೆಗೆಸಿ ಆಡಿಸಲಾಯಿತು. ಇದರಬಗ್ಗೆ ನ್ಯಾಯ ಕೇಳಿದರೆ, ನೀವು ಮೊದಲೇ ಅಬ್ಜೆಕ್ಷನ್ ಮಾಡಬೇಕಿತ್ತು. ಎಂದು ಪೊಲೀಸ್ ಪಿಎಸ್ಐ ರವರನ್ನು ಕರೆಯಿಸಿ ನಮ್ಮ ಹುಡುಗರ ಮೇಲೆ ದಬ್ಬಾಳಿಕೆ ಮಾಡಿಸಿರುತ್ತಾರೆ. ಬಂದ ಪಿಎಸ್ ಐ ನಮ್ಮನ್ಯಾಯಯುತವಾದ ಹೋರಾಟಕ್ಕೆ ಅಡ್ಡಿಪಡಿಸಿ ಗ್ರಾಮದ ಮಕ್ಕಳಿಗೆ ಬಾಯಿಗೆ ಬಂದಂತೆ ಬೈದುದಲ್ಲದೆ ಒಬ್ಬ ವಿದ್ಯಾರ್ಥಿಗೆ ಹೊಡೆದು ಶಿಕ್ಷಕರಿಗೆ ಬಾಯಿಗೆ ಬಂದಂತೆ ಮಾತನಾಡಿ ದೌರ್ಜನ್ಯದಿಂದ ನಮ್ಮನ್ನು ಮೈದಾನದ ಹೊರಗೆ ಹಾಕಿದ್ದಾರೆ ಎಂದು ತಿಳಿಸಿದರು. ಪಿಎಸ್ ಐ ಬಾಲಕನಿಗೆ ಹೊಡೆದಾಗ ಮಕ್ಕಳ ತಾಯಂದಿರು ಪ್ರತಿಭಟಿಸಿದಾಗ ತಾಯಂದಿರಿಗೂ ಮಹಿಳೆಯರನ್ನದೇ ಬಾಯಿಗೆ ಬಂದಂತೆ ಬೈದಿದ್ದಾರೆ. ಎಂದು ಊರ ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೆ ಶಿಗ್ಗಾಂ ವ್ ತಂಡದವರದು ನಿರ್ಣಾಯಕರ ತಪ್ಪಿನಿಂದ ನಮ್ಮ ತಂಡ ಸೋತಿದೆ ಎಂದು ದೂರಿದ್ದಾರೆ. ಅಲ್ಲದೆ ಬಾಲಕಿಯರ ಆಟದಲ್ಲೂ ಕೈ ಕೈ ಮಿಲಾಯಿಸಿ, ಹೊಡೆದಾಡಿದಂತಹ ಜಗಳಗಳು ನಡೆದಿವೆ. ಹೀಗಾಗಿ ದೂರುಗಾರರ ಪ್ರಮುಖ ಬೇಡಿಕೆ ಏನೆಂದರೆ ಜಿಲ್ಲಾ ಮಟ್ಟದ ಖೋ ಖೋ ಆಟಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಡಿಸದೆ, ತಂಡ ಗೆದ್ದಂತಹ ಊರಿನಲ್ಲಿ ಇಟ್ಟಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಲೋಕಲ್ ಪ್ರಭಾವದಿಂದ ನಮ್ಮ ತಂಡಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ಈ ಆಟಗಳನ್ನು ರದ್ದುಪಡಿಸಿ ಜಿಲ್ಲಾ ಹಂತದಲ್ಲಿ ನಡೆಸಿಕೊಡಬೇಕೆಂದು ವಿನಂತಿ ಮಾಡಿಕೊಂಡಿರುತ್ತಾರೆ. ಅಲ್ಲದೆ ಅಂದು ಹಾಜರಿದ್ದ ಪಿಎಸ್ ಐ ಮೇಲೆ ದೌರ್ಜನ್ಯ ಕೇಸು ದಾಖಲಿಸಬೇಕೆಂದು ಕೇಳಿಕೊಂಡಿರುತ್ತಾರೆ. ನ್ಯಾಯಯುತವಾಗಿ ಆಟ ಆಡಿಸಿದಾಗ ಮಾತ್ರ ಮತ್ತೆ ಮುಂದಿನವರ್ಷ್ ಪ್ರಯತ್ನ ಮಾಡಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ತಮಗೆ ಬೇಕಾದವರಿಗೆ ನಿರ್ಣಯ ಕೊಡುವಂತಿದ್ದರೆ ಮಕ್ಕಳಿಗೆ ಅನ್ಯಾಯ ಮಾ ಡಿದಂತಾಗುತ್ತದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ ಮಾನ್ಯ ಜಿಲ್ಲಾ ಉಪನಿರ್ದೇಶಕರು ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು ಸೂಕ್ತ ಕ್ರಮ ಕೈಗೊಂಡು ಮಕ್ಕಳಿಗೆ ನ್ಯಾಯ ಕೊಡಿದಸಬೇಕೆಂಬುದು ಶಿಕ್ಷಕರ ಕ್ರೀಡಾಭಿಮಾನಿಗಳ ಮಾನವೀಯಗಿದೆ.

Apr 05, 2021 at 9:48 am

47 ವರ್ಷಗಳ ಬಳಿಕ ಸಂತೋಷ್ ಟ್ರೋಫಿ ಫೈನಲ್‌ಗೆ ಕರ್ನಾಟಕ- ಫೈನಲ್ ಗೆಲ್ಲುವ ವಿಶ್ವಾಸ: ಸಚಿವ ಡಾ.ನಾರಾಯಣಗೌಡ.
ಬೆಂಗಳೂರು - : ಹೀರೋ ಸಂತೋಷ್ ಟ್ರೋಫಿ' ಟೂರ್ನಿಯಲ್ಲಿ 47 ವರ್ಷಗಳ ನಂತರ ಫೈನಲ್ ಪ್ರವೇಶಿಸಿರುವ ಕರ್ನಾಟಕ ತಂಡಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ. 1975-76ರಲ್ಲಿ ನಡೆದ ಟೂರ್ನಿಯಲ್ಲಿ ಕರ್ನಾಟಕ ತಂಡ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಇದೀಗ ಮತ್ತೊಮ್ಮೆ ಫೈನಲ್ ಪ್ರವೇಶಿಸಿರುವ ಕರ್ನಾಟಕ ಪುಟ್ಬಾಲ್ ತಂಡ, ಮಾರ್ಚ್ 4 ರಂದು ಮೇಘಾಲಯ ವಿರುದ್ಧ ಟ್ರೋಫಿ ಗೆಲ್ಲುವ ವಿಶ್ವಾಸವಿದೆ. 1968-69 ರಲ್ಲಿ ನಡೆದ ಸಂತೋಷ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದ ಕರ್ನಾಟಕ ಪುಟ್ಬಾಲ್ ತಂಡ, ಮೇಘಾಲಯವನ್ನು ಮಣಿಸುವ 54 ವರ್ಷಗಳ ಕಾಯುವಿಕೆಯನ್ನು ದೂರವಾಗಿಸಿ ಮತ್ತೊಮ್ಮೆ ಟ್ರೋಫಿ ಗೆಲ್ಲಲಿ ಎಂದು ಸಚಿವ ಡಾ.ನಾರಾಯಣಗೌಡ ಅವರು ಕರ್ನಾಟಕ ತಂಡಕ್ಕೆ ಶುಭ ಹಾರೈಸಿದ್ದಾರೆ‌‌

Apr 05, 2021 at 9:48 am

ರಾಷ್ಟ್ರೀಯ ಜೂನಿಯರ್ ಟೆನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್ಶಿಪ್ ಗೆ ಆಯ್ಕೆಯಾದ ಗ್ರಾಮೀಣ ವಿದ್ಯಾರ್ಥಿ(ನಿಯರಿಗೆ) ಸಮವಸ್ತ್ರ ವಿತರಣೆ.
ರಾಷ್ಟ್ರೀಯ ಜೂನಿಯರ್ ಟೆನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್ಶಿಪ್ ಗೆ ಆಯ್ಕೆಯಾದ ಗ್ರಾಮೀಣ ವಿದ್ಯಾರ್ಥಿ(ನಿಯರಿಗೆ) ಸಮವಸ್ತ್ರ ವಿತರಣೆ. ರಾಷ್ಟ್ರೀಯ ಜೂನಿಯರ್ ಟೆನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್ಶಿಪ್ ಗೆ ಬಿಹಾರದ ಭೋಜಪುರ್ ಜಿಲ್ಲೆಯ ಆಗ್ರಾದಲ್ಲಿ ನಡೆಯಲಿರುವ ಜ್ಯೂನಿಯರ್ ಟೆನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ಬಾಲಕರ ತಂಡ, ಮತ್ತು ಬಾಲಕಿಯರ ತಂಡ ಹಾಗೂ ಉತ್ತರ ಕರ್ನಾಟಕ ಬಾಲಕರ ತಂಡಗಳಿಗೆ ಸಮವಸ್ತ್ರವನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿತರಿಸಲಾಯಿತು. ಕರ್ನಾಟಕ ರಾಜ್ಯ ತಂಡಕ್ಕೆ ನಗರ ಶಾಸಕರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್, ಬಾಲಕಿಯರ ತಂಡಕ್ಕೆ ಅಬ್ದುಲ್ ಹಮೀದ್ ಮುಶ್ರೀಫ್, ಹಾಗೂ ಉತ್ತರ ಕರ್ನಾಟಕದ ಬಾಲಕರ ತಂಡಕ್ಕೆ ರಾಜಶೇಖರ ಕವಲಗಿಯವರು ಸಮವಸ್ತ್ರ ಕೊಡುಗೆ ನೀಡಿದರು. ಈ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ನಗರ ಶಾಸಕರ ಧರ್ಮಪತ್ನಿ ಶ್ರೀಮತಿ ಶೈಲಾ.ಬಿ.ಪಾಟೀಲ್ ಯತ್ನಾಳ್ ಅವರು ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದ ಅವರು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಟ್ಟ ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆ, ಹಾಗೂ ವಿಜಯಪುರ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ ನಮ್ಮ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ, ಸಮಾಜದ ಏಳಿಗೆಗಾಗಿ ನಾವೆಲ್ಲರೂ ಶ್ರಮಿಸೋಣ ಎಂದರು. ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷರಾದ ಬಸನಗೌಡ ಹರನಾಳ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಕ್ರೀಡೆಯಲ್ಲಿ ಸಾಧನೆ ಮಾಡಿರಲಿ ಅಂತಹ ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣದೊಂದಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಿದ್ದೇವೆ, ಇದರ ಸದುಪಯೋಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ವೇದಿಕೆ ಮೇಲೆ ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾಹೀದಾಬೇಗಂ ಹಕೀಂ ನಮ್ಮ ತಂಡಗಳು ಗೆದ್ದು ಚಾಂಪಿಯನ್ ಆಗುವುದು ಖಚಿತ ಈಗಾಗಲೇ ರಾಜ್ಯ ತಂಡದಲ್ಲಿ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ, ನಾವು ನಮ್ಮ ಸಂಸ್ಥೆಯ ಪರವಾಗಿ ಎಲ್ಲ ವಿವಿಧ ತರಬೇತಿ ಹಾಗೂ ಸೌಲಭ್ಯ ಕಲ್ಪಿಸಿದ್ದೇವೆ ಎಂದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಎಸ್ ಜಿ ಲೋಣಿಯವರು ಕ್ರೀಡಾ ಇಲಾಖೆಯಿಂದ ಹಲವು ಯೋಜನೆಗಳು ಇವೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಅಶೋಕ್ ಕುಮಾರ್ ಜಾದವ್, ಶ್ರೀಮತಿ ಶೈಲಾ ಬಸನಗೌಡ ಪಾಟೀಲ್ ಯತ್ನಾಳ್, ಶಾಹೀದಬೇಗಂ ಹಕೀಂ, ಡಾ. ಬಾಬು ರಾಜೇಂದ್ರ ನಾಯಕ್, ಬಸನಗೌಡ ಹರನಾಳ, ರಾಜೇಶ್ವರಿ ಜುಗತಿ, ರಾಜಶೇಖರ ಕವಲಗಿ, ಉಪಸ್ಥಿತರಿದ್ದರು.

Apr 05, 2021 at 9:48 am

ಮಹಿಳಾ ಪ್ರೀಮಿಯರ್ ಲೀಗ್ | RCB ತಂಡದ ಸಲಹೆಗಾರರಾಗಿ ಸಾನಿಯಾ ಮಿರ್ಜಾ ನೇಮಕ.
ನವದೆಹಲಿ - : ಮಹಿಳಾ ಪ್ರೀಮಿಯರ್ ಲೀಗ್‌’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಲಹೆಗಾರರಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ನೇಮಕಗೊಂಡಿದ್ದಾರೆ.ಈ ಕುರಿತು RCB (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಸಾನಿಯಾ ಜೊತೆಗಿನ ಸಂದರ್ಶನವನ್ನೂ ಕೂಡ ಟ್ವೀಟ್ ನಲ್ಲಿ RCB ಹಂಚಿಕೊಂಡಿದೆ. ಮಂಗಳವಾರ ನಡೆದ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಆರ್‌’ಸಿಬಿ ಅತ್ಯುತ್ತಮ ಆಟಗಾರರನ್ನು ತನ್ನದಾಗಿಸಿಕೊಂಡಿದೆ. ಭಾರತ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಅವರನ್ನು RCB ತಂಡ ಹರಾಜಿನಲ್ಲಿ 3.40 ಕೋಟಿಗೆ ಖರೀದಿಸಿದೆ. ಸ್ಮೃತಿ ಅವರದ್ದು ಹರಾಜಿನಲ್ಲಿ ಆಟಗಾರ್ತಿಯೊಬ್ಬರು ಪಡೆದ ಅತಿ ಹೆಚ್ಚಿನ ಮೊತ್ತವಾಗಿದೆ.

Apr 05, 2021 at 9:48 am

ಕ್ರಿಕೆಟ್ ಗೆ ವಿದಾಯ ಘೋಷಿಸಿದ ಇಂಗ್ಲೆಂಡ್ ಕ್ರಿಕೆಟಿಗ ಇಯಾನ್ ಮಾರ್ಗನ್.
ಲಂಡನ್ - : ಇಂಗ್ಲೆಂಡ್ ನ ಏಕದಿನ ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್, ಎಲ್ಲ ಮಾದರಿಯ ಕ್ರಿಕೆಟ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 126 ಏಕದಿನ ಮತ್ತು 72 ಟಿ20 ಪಂದ್ಯಗಳಲ್ಲಿ ಮಾರ್ಗನ್, ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರು. ಇಯಾನ್ ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್, 2019ರ ಏಕದಿನ ವಿಶ್ವಕಪ್ ಜಯಿಸಿದ್ದು, ಮತ್ತು ಕಪ್ತಾನರಾಗಿ ಎರಡು ಮಾದರಿಗಳಲ್ಲಾಗಿ 118 ಗೆಲುವು ಸಾಧಿಸಿರುವುದು ಕೂಡಾ ಮಾರ್ಗನ್ ದಾಖಲೆಯಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಇಯಾನ್ ಮಾರ್ಗನ್, ಎಲ್ಲ ಕ್ರೀಡಾಪಟುಗಳಂತೆ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದೇನೆ. ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ಕ್ರಿಕೆಟ್ ಬಿಟ್ಟು ಹೋಗಲು ಇದು ಸೂಕ್ತ ಸಮಯವಾಗಿದೆ. ಪತ್ನಿ, ಕುಟುಂಬ, ಸ್ನೇಹಿತರು, ಕೋಚ್, ಸಹ ಆಟಗಾರರು, ಅಭಿಮಾನಿಗಳಿಗೆ ಈ ಸಂದರ್ಭದಲ್ಲಿ ನನ್ನ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

Apr 05, 2021 at 9:48 am

ಗದಗ ಜಿಲ್ಲೆಯ ನರಗುಂದದಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾಕೂಟ
ಗದಗ ಜಿಲ್ಲೆಯ ನರಗುಂದದಲ್ಲಿ  ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾಕೂಟ/ ಯೋಗ ವನ್ನು ಒಳಗೊಂಡ ಏಕೈಕ ದೇಶೀ ಆಟ ಕಬಡ್ಡಿ -ಸಚಿವ ಸಿ ಸಿ ಪಾಟೀಲ್ ಅಭಿಮತ .     ಇಂದಿನ  ದಿನಮಾನಗಳಲ್ಲಿ ಯುವಕರು ವಾಟ್ಸ್ಸಫ್, ಫೇಸ್ಬುಕ್, ಟ್ವಿಟ್ಟರ್ ಇವೆ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ  ಹೆಚ್ಚಿನ ಆಸಕ್ತಿ ಹೊಂದಿದ್ದು ದೇಶಿಯ ಆಟಗಳಲ್ಲಿ ಆಸಕ್ತಿ ಇಲ್ಲದೆ ಇರುವುದು ನಿಜಕ್ಕೂ ವಿಷಾದನೀಯ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಗದಗ ಜಿಲ್ಲೆಯ ನರಗುಂದ್ ಪಟ್ಟನದಲ್ಲಿ ನೆಡೆದ ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾ ಕೂಟ ಉದ್ದೇಶಿಸಿ ಅಭಿಪ್ರಾಯ ವ್ಯಕ್ತ ಪಡಿಸಿದರು.      ನರಗುಂದ ತಾಲೂಕ ಕ್ರೀಡಾಗನದಲ್ಲಿ ಆಯೋಜಿದ್ದ ಕರ್ನಾಟಕ ಆಮೇಚೂರ್ ಕಬಡ್ಡಿ ಅಶೋಸಸಿಯೇಷನ್, ಭಾರತೀಯ ಜನತಾ ಪಾರ್ಟಿ ವಿಧಾನ ಸಭಾ ಮತಕ್ಷೇತ್ರ, ಲಾಯೆನ್ಸ್ ಕ್ಲಬ್, ಹಾಗೂ ಸಿ. ಸಿ ಪಾಟೀಲ್ ಅಭಿಮಾನಿ ಬಳಗ ಇವರ ಆಶ್ರಯದಲ್ಲಿ ನೆಡೆದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ಯಶಸ್ವಿ ಆಗಲು ಹಗಲಿರುಳು ಶ್ರಮಿಸಿದ ಸಂಘಟಕರಿಗೆ ಹಾಗೂ ಬಿಜೆಪಿ ಕಾರ್ಯ ಕರ್ತರಿಗೆ ಅಭಿನಂದನೆಗಳು ಸಲ್ಲಿಸಿದರು. ಈ ಒಂದು ಕಬಡ್ಡಿ ಕ್ರೀಡಾ ಕೂಟ ವನ್ನು ರೋಣ ಶಾಸಕ ಕಳಕಪ್ಪ ಬಂಡಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇವರನ್ನು ಸನ್ಮಾನ ಮಾಡಲಾಯಿತು. ಅರ್ಜುನ್ ಪ್ರಶಸ್ತಿ ವಿಜೇತ ಸಿ ಹೊನ್ನಪ್ಪಗೌಡ, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಎಸ್ ವಿ ಸಂಕನೂರ್,ಸೇರಿದಂತೆ 10 ಸಾವಿರ ಕ್ಕಿಂತ ಹೆಚ್ಚು ಕ್ರೀಡಾ ಅಭಿಮಾನಿಗಳು ಭಾಗವಸಿದ್ದರು. ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ಪುರುಷರ ವಿಭಾಗದಲ್ಲಿ 35 ತಂಡಗಳು ಭಾಗವಹಿಸಿದ್ದಾರೆ ಹಾಗೇ ಮಹಿಳಾ ವಿಭಾಗದಲ್ಲಿ 30 ತಂಡಗಳು ಭಾಗವಹಿಸಿದ್ದವು. ಕರ್ನಾಟಕ ಅಷ್ಟೇ ಅಲ್ಲದೆ ನೆರೆಯ ಗುಜರಾತ್, ಹರಿಯಾಣ, ದೆಹಲಿ, ಹಿಮಾಚಲ್ ಪ್ರದೇಶ, ತಮಿಳುನಾಡು, ಮಹರಾಷ್ಟ್ರ, ಆಂಧ್ರಪ್ರದೇಶ, ಸೇರಿದಂತೆ  ಭಾರತೀಯ ಸೇನಾ ತಂಡ ಹಾಗೂ ರೈಲ್ವೆ ತಂಡಗಳು ಭಾಗವಹಿಸದ್ದವು.ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಹಿಮಾಚಲ್ ಪ್ರದೇಶ, ದ್ವಿತೀಯ ಸ್ಥಾನ ರೆಡ್ ಆರ್ಮಿ ದೆಹಲಿ,ತೃತೀಯ ಸ್ಥಾನ ಹರಿಯಾಣ ಹಾಗೂ ಚತುರ್ಥ ಸ್ಥಾನ ಚೆನ್ನೈ ತಂಡ ಪಡೆದುಕೊಂಡವು.  ಹಾಗೇ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಹರಿಯಾಣ, ದ್ವಿತೀಯ ಸ್ಥಾನ ಹರಿಯಾಣ, ತೃತೀಯ ಸ್ಥಾನ ಹಿಮಾಚಲ್ ಪ್ರದೇಶ ಹಾಗೂ ಚತುರ್ಥ ಸ್ಥಾನ ಹರಿಯಾಣ ತಂಡ ಪಡೆದುಕೊಂಡವು.                ವಿಶೇಷ ವರದಿ - ಬಸವರಾಜ ಆರ್ ಪಾಟೀಲ್ ಗದಗ

Apr 05, 2021 at 9:48 am

ಬಾಗಲಕೋಟೆ:- ನಗರದಲ್ಲಿ ಸಕ್ರಿ ಪ್ರೆಂಡ್ಸ್ ಕ್ಲಬ್ ತಂಡದಿಂದ ಆಯೋಜನೆಯಾಗಿದ್ದ ಕ್ರಿಕೆಟ್
ಬಾಗಲಕೋಟೆ:- ನಗರದಲ್ಲಿ ಸಕ್ರಿ ಪ್ರೆಂಡ್ಸ್ ಕ್ಲಬ್ ತಂಡದಿಂದ ಆಯೋಜನೆಯಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಾಯಕ ಮಲ್ಲು ಹೊಸಮನಿ ಅವರ ನೇತೃತ್ವದ ಸಕ್ರಿ ಪ್ರೆಂಡ್ಸ್ ಕ್ರಿಕೆಟ್ ತಂಡ ಮೊದಲ ಸ್ಥಾನ ಗಳಿಸುವ ಮೂಲಕ ಟ್ರೋಫಿ ತನ್ನದಾಗಿಸಿಕೊಂಡರೆ, ಇತ್ತ ರನ್ನರ್ ಅಪ್ ಆಗಿ ಇಲಕಲ್ ಕ್ರಿಕೆಟ್  ತಂಡ ಹೊರ ಹೊಮ್ಮಿತು. 
ನಗರದ ಸಕ್ರಿ ಮೈದಾನದಲ್ಲಿ ನಿರಂತರ 6 ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ 16 ಟೀಮ್ ಗಳು ಪಾಲ್ಗೊಂಡಿದ್ದವು. ಇದರಲ್ಲಿ ಒಂದು ಟೀಮ್ ನಲ್ಲಿ ಒಂದೇ ತಾಲೂಕಿನ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಮುದ್ದೇಬಿಹಾಳ, ಬಸವನ ಬಾಗೇವಾಡಿ, ಗುಳೇದಗುಡ್ಡ, ಇಲಕಲ್, ಬೇವಿನಮಟ್ಟಿ, ಶಿರಗುಂಪಿ, ನವನಗರ, ಬಾಗಲಕೋಟೆ, ಬೀಳಗಿ ಸೇರಿದಂತೆ 16 ತಂಡಗಳು ಭಾಗವಹಿಸಿದ್ದವು. ಸಕ್ರಿ ಕ್ರಿಕೆಟ್ ಟೂನ೯ಮೆಂಟ್ ಆಯೋಜನೆ ಮಾಡಿದ ಪ್ರಮುಖರಾದ ಸಂಗಮೇಶ ಕೋಮಾರ, ಮುತ್ತು ಅರಗಿನಿಶೆಟ್ಟಿ, ರಾಜು ಬಂಡಿ, ಯಲ್ಲಪ್ಪ ಕುರಕಳ್ಳಿ, ಸುಶೀಲ ರಟ್ಟಿಹಳ್ಳಿ, ಅಮೀರ ಭೋವಿ, ಗಿರೀಶ ರಾಠೋಡ, ಬಳ್ಳೇಶ, ಭರತ ಚವ್ಹಾಣ, ಮಹಾಂತೇಶ ರಾಠೋಡ ಇವರ ನೇತೃತ್ವದಲ್ಲಿ 6 ದಿನಗಳ ಕಾಲ ಕ್ರಿಕೆಟ್ ಯಶಸ್ವಿಯಾಯಿತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೈನಲ್ ಪಂದ್ಯದಲ್ಲಿ ಮ್ಯಾನ ಆಫ್ ದಿ ಮ್ಯಾಚ್ ಮುತ್ತು ಬೇವಿನಮಟ್ಟಿ ಪಡೆದರೆ, ಮ್ಯಾನ್ ಆಫ್ ದಿ ಸಿರೀಸ್  ಇಲಕಲ್ ತಂಡದ ಹರೀಶ ಅವರ ಪಾಲಾಯಿತು.‌

Apr 05, 2021 at 9:48 am

ಬಾಗಲಕೋಟೆಯಲ್ಲಿ ಮೇ 4 ರಿಂದ ಸ್ಯಾಂಡಲ್‍ವುಡ್ ಕ್ರಿಕೆಟ್ ಕಪ್
ಬಾಗಲಕೋಟೆ : ಮೇ 4 ರಿಂದ 8ರವರೆಗೆ ಐದು ದಿನಗಳ ಕಾಲ ಸ್ಯಾಂಡ್ ಲ್ವುಡ್ ಕ್ರಿಕೆಟ್ ಕಪ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದೆ. ಇದರಲ್ಲಿ ಪ್ರಮುಖ ನಟ-ನಟಿಯರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಸ್ಥಳೀಯರಿಗೆ ಮನರಂಜನೆ ನೀಡಲಿದ್ದಾರೆ ಎಂದು ನಟಿ ಮಯೂರಿ ಶಾ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದನಕೊಳ್ಳದ ಡಾ.ಶಿವಕುಮಾರ್ ಸ್ವಾಮೀಜಿ ಅವರ ಆಶೀರ್ವಾದದಿಂದ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಸಿದ್ದನಕೊಳ್ಳ ಕಲಾಪೋಷಕರ ಮಠ, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ಪಿ. ದೀಕ್ಷಿತ ಫೌಂಡೇಶನ್, ಎ.ಬಿ.ನೆಟ್ವಕ್ರ್ಸ್ ಬೆಂಗಳೂರು, ಬ್ಲೂಪಿಂಚ್ ಇವೆನಟ್ಸ್, ಪಿಯೋನಿಕ್ಸ್ ನೆಟವರ್ಕ ಹಾಗೂ ನವ ಕರ್ನಾಟಕ ಚಲನಚಿತ್ರ ಅಕ್ಯಾಡೆಮಿ, ಸಲ್ಯೂಟ್ ಗ್ರಾಮೀಣ ಅಭಿವೃದ್ದಿ ಯುವ ಸಂಸ್ಥೆ ಕರ್ನಾಟಕ ವತಿಯ ಸಹಯೋಗದಲ್ಲಿ ನಡೆಯಲಿದ್ದು, ಎಂಟು ತಂಡಗಳು ಪಂದ್ಯವಾಳಿಯಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.ನಿರ್ದೇಶಕರಾದ ಅದತ್ ಖಾನ ಎಂಬುವರು ಮಾತನಾಡಿ, 150ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಉಪೇಂದ್ರ, ಸುದೀಪ್, ಜಗ್ಗೇಶ್, ರಾಗಿಣಿ, ಹರಿಪ್ರಿಯಾ, ಥ್ಲಿಲ್ಲರ್ ಮಂಜು, ಕಾಮಿಡಿ ಕಲಾವಿದರು ಸೇರಿದಂತೆ ಇನ್ನೂ ಪ್ರಮುಖ ನಟ-ನಟಿಯರು ಆಗಮಿಸುವ ನಿರೀಕ್ಷೆಯಿದೆ ಎಂದರು.ಪಂದ್ಯಾವಳಿಯಲ್ಲಿ ಕಪ್ ಗೆದ್ದವರಿಗೆ 1 ಲಕ್ಷ ರೂ. ರನ್ನರ್​ಅಪ್ 50 ಸಾವಿರ ರೂ. ನಂತರ ಮೂರನೇ ಸ್ಥಾನಕ್ಕೆ 25 ಸಾವಿರ ರೂ. ಬಹುಮಾನ ನೀಡಲಾಗುತ್ತದೆ. ಈ ಪಂದ್ಯಾವಳಿಗೆ ಬಂದಂತಹ ಹಣವನ್ನು ಸಿದ್ದನಕೊಳ್ಳದಲ್ಲಿ ನಿರ್ಮಾಣವಾಗಲಿರುವ ಕಲಾವಿದರ ಭವನಕ್ಕೆ ನೀಡಲಾಗುವುದು ಎಂದರು.ಮೇ 8ರಂದು ಚಿತ್ರ ನಟಿಯರ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಜೊತೆಗೆ ಸಮಾರೋಪ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಗಳ ಸಂಗೀತ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.
 ಸುದ್ದಿಗೋಷ್ಠಿಯಲ್ಲಿ ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ, ಪ್ರೇಮ ಚಿರಗೋಲ್, ರವಿ ಕುಮಟಗಿ, ಪ್ರವೀಣ ಪತ್ರಿ, ಮಹೇಶ ಹೊಸಗೌಡ್ರ ಸೇರಿದಂತೆ ಮತ್ತಿತರರು ಉಪಸ್ಥಿತಿರಿದ್ದರು.

Apr 05, 2021 at 9:48 am

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್​ನಲ್ಲೂ ಟೀಂ ಇಂಡಿಯಾ ಗೆದ್ದು ಬೀಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್​ನಲ್ಲೂ ಟೀಂ ಇಂಡಿಯಾ ಗೆದ್ದು ಬೀಗಿದೆ. ಸುಮಾರು 238 ರನ್​​ಗಳ ಅಂತರದಿಂದ ಶ್ರೀಲಂಕಾ ತಂಡವನ್ನು ಭಾರತ ಸೋಲಿಸಿದೆ. ಈ ಮೂಲಕ ಟೆಸ್ಟ್​ ಸರಣಿ ವೈಟ್​​ ವಾಶ್​ ಮಾಡಿದೆ.

ಮೊದಲ ಟೆಸ್ಟ್​ ಪಂದ್ಯದಲ್ಲೂ ಕ್ಯಾಪ್ಟನ್​​ ರೋಹಿತ್​ ಶರ್ಮಾ ನೇತೃತ್ವದ ಟೀಂ ಇಂಡಿಯಾ ಗೆದ್ದು ಬೀಗಿತ್ತು.ಎರಡನೇ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ ಅಂತ್ಯಕ್ಕೆ ಭಾರತ ಶ್ರೀಲಂಕಾಗೆ 446 ರನ್​ ಟಾರ್ಗೆಟ್​​ ನೀಡಿತ್ತು.

143 ರನ್​ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ, ಉತ್ತಮ ಆರಂಭದಲ್ಲಿ ಪಡೆದುಕೊಳ್ಳಲಿಲ್ಲ. ತವರಿನಂಗಳದಲ್ಲಿ ಸಿಕ್ಕ 2ನೇ ಅವಕಾಶವನ್ನೂ ಕನ್ನಡಿಗ ಮಯಾಂಕ್​ ಅಗರ್​ವಾಲ್​ ಕೈ ಚೆಲ್ಲಿದ್ರು. 22 ರನ್​ಗಳಿಸಿ ಮಯಾಂಕ್​ ಔಟಾದ್ರೆ, ನಾಯಕ ರೋಹಿತ್​ ಶರ್ಮಾ ಅರ್ಧಶತಕದ ಅಂಚಿನಲ್ಲಿ ಎಡವಿದ್ರು. ಟೆಸ್ಟ್​​​ ಸ್ಪೆಷಲಿಸ್ಟ್​​ ಹನುಮ ವಿಹಾರಿ ಆಟ 35 ರನ್​ಗಳಿಗೆ ಅಂತ್ಯವಾಯ್ತು.

2ನೇ ತವರು ಬೆಂಗಳೂರಿನಲ್ಲೂ ವಿರಾಟ್​ ಕೊಹ್ಲಿಯ ಶತಕದ ಬರ ನೀಗಲಿಲ್ಲ. 2ನೇ ಇನ್ನಿಂಗ್ಸ್​ನಲ್ಲೂ 13 ರನ್​ಗಳಿಸಿ ಔಟಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು. ಇನ್ನೊಂದೆಡೆ ಅಬ್ಬರದ ಆಟವಾಡಿದ ರಿಷಭ್​ ಪಂತ್​ ಅರ್ಧಶತಕ ಸಿಡಿಸಿದ್ರು. 31 ಎಸೆತಗಳಲ್ಲೇ 50 ರನ್​ ಸಿಡಿಸಿ ಔಟಾದ್ರು. ಬಳಿಕ ಕಣಕ್ಕಿಳಿದ ಶ್ರೇಯಸ್​​ ಅಯ್ಯರ್​ ಕೂಡ ಲಂಕಾ ಬೌಲರ್​​​ಗಳ ಬೆವರಿಳಿಸಿ ಹಾಫ್​​ ಸೆಂಚುರಿ ಇನ್ನಿಂಗ್ಸ್​ ಕಟ್ಟಿದ್ರು.

ಬಳಿಕ ಕಣಕ್ಕಿಳಿದ ರವಿಚಂದ್ರನ್​ ಅಶ್ವಿನ್​, ರವೀಂದ್ರ ಜಡೇಜಾ ಅಲ್ಪ ಮೊತ್ತದ ಕಾಣಿಕೆ ನೀಡಿದ್ರು. ಅಕ್ಷರ್​ ಪಟೇಲ್​ ವಿಕೆಟ್​ ಪತನದೊಂದಿಗೆ ಟೀಮ್​ ಇಂಡಿಯಾ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಳ್ತು. 2ನೇ ಇನ್ನಿಂಗ್ಸ್​ನಲ್ಲಿ 9 ವಿಕೆಟ್​​ ಕಳೆದು ಕೊಂಡು 303 ರನ್​ಗಳಿಸಿದ ಭಾರತ, 446 ರನ್​ಗಳ ಬೃಹತ್​ ಟಾರ್ಗೆಟ್​ ನೀಡಿತು. ಈ ರನ್​​ಗಳ ಬೆನ್ನತ್ತಿದ ಶ್ರೀಲಂಕಾ ಎರಡನೇ ಇನ್ನಿಂಗ್ಸ್​ನಲ್ಲೂ 208ಕ್ಕೆ ಆಲ್​​ ಔಟ್​ ಆಗಿದೆ.

Apr 05, 2021 at 9:48 am


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img