ಹಳಿಯಾಳ ಪೊಲೀಸ್ ಠಾಣಾ ಪ್ರಕಟಣೆ.
Published By: ರಮೇಶ್ ವಿ ಯ
Last Updated Date: 12-May-2023
ಹಳಿಯಾಳ -: ಕರ್ನಾಟಕ ವಿಧಾನಸಭೆ ಚುನಾವಣೆ-2023ರ್ ಮತ ಎಣಿಕೆಯು ದಿನಾಂಕ 13.05.2023 ರಂದು ನಡೆಯಲಿದ್ದು. ಈ ವೇಳೆ ಹಳಿಯಾಳ ಪೊಲೀಸ್ ಠಾಣೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಮತ ಎಣಿಕೆಯ ದಿನನೆಂದು ಜಿಲ್ಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿರುತ್ತದೆ. ದಿನಾಂಕ.13/05/2023ರ್ ಬೆಳಿಗ್ಗೆ 05.00 ಗಂಟೆಯಿಂದ ಆ ದಿನ ಮಧ್ಯರಾತ್ರಿ12.00 ರವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ. 05 ಕಿಂತ ಹೆಚ್ಚು ಜನರು ಒಂದೇ ಜಾಗದಲ್ಲಿ ಗುಂಪು ಸೇರುವುದು. ಮೆರವಣಿಗೆ. ಸಾರ್ವಜನಿಕ ಸಭೆ ಸಮಾರಂಭ. ವಿಜಯೋತ್ಸವ ಆಚರಣೆ. ಬಹಿರಂಗ ಘೋಷಣೆ. ಕೂಗುವುದು. ಪಟಾಕಿ ಸಿಡಿಸುವುದು ಹಾಗೂ ಯಾವುದೇ ಪ್ರತಿಭಟನೆಗಳಿಗೆ ಅವಕಾಶವಿರುವುದಿಲ್ಲ. ನಿಷೇಧಾಜ್ಞೆಯ್ ಅವಧಿಯಲ್ಲಿ ಯಾವುದೇ ಆಯುಧಗಳು. ದೇಹಕ್ಕೆ ಅಪಾಯವುಂಟು ಮಾಡುವ ಬಡಿಗೆ. ಲಾರಿ. ಖಡ್ಗ. ಚೂರಿ. ಸಹಿತ ಯಾವುದೇ ಮಾರಕಾಸ್ತ್ರಗಳು. ಸ್ಪೋಟಕ ವಸ್ತುಗಳು ಸಾರ್ವಜನಿಕರು ಇಟ್ಟುಕೊಳ್ಳುವುದು ಅಪಹಾಧವಾಗಿರುತ್ತದೆ ಹಾಗೂ ನಿಷೇಧಾಜ್ಞೆಯ ಅವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಮಧ್ಯ ಮಾರಾಟಕ್ಕೆ ಅವಕಾಶವಿರುವುದಿಲ್ಲ. ಇಂದು ಹಳಿಯಾಳ ಪೊಲೀಸ್ ಠಾಣೆಯ ಪ್ರಕಟಣೆಯಾಗಿದೆ.