ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಶ್ರಮ
2025ರ ವೇಳೆಗೆ ಭಾರತವನ್ನು ಕ್ಷಯ ಮುಕ್ತ ರಾಷ್ಟ್ರವನ್ನಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಶ್ರೀ ಎಸ್ ಎಸ್ ಮೇಟಿ ಆರೋಗ್ಯ ಶಿಕ್ಷಣಾಧಿಕಾರಿಗಳು ಬಸವನ ಬಾಗೇವಾಡಿ.
Published By: ಅಶೋಕ ಗುಂಡಿನಮನಿ.ನಿಡಗುಂದಿ ತಾಲೂಕ ರಿಪೋರ್ಟರ್
Last Updated Date: 17-Jul-2023

ನಿಡಗುಂದಿ -: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸ್ಥಳೀಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಡಗುಂದಿ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸೋಣ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು . ಈ ಒಂದು ಕಾರ್ಯಕ್ರಮಕ್ಕೆ ಶ್ರೀ ಬಿ ಟಿ ಗೌಡರ ನಿಕಟ ಪೂರ್ವ ಜಿಲ್ಲಾ ಅಧ್ಯಕ್ಷರು KSPSTA ವಿಜಯಪುರ ಮತ್ತು ಶ್ರೀ ಪ್ರಕಾಶ ಗೋಡಖಂಡಿಕಿ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ನಿಡಗುಂದಿ.ಇವರು ಹಸಿರು ನಿಶಾ ನೆ ತೋರಿಸಿ ಜಾತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಘಟಕದಿಂದ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಕ್ಷಯರೋಗ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಎಸ್ ಎಸ್ ಮೇಟಿ ಆರೋಗ್ಯ ಶಿಕ್ಷಣಾಧಿಕಾರಿಗಳು ಬಸವನ ಬಾಗೇವಾಡಿ ಇವರು ಸರ್ಕಾರದ ಉದ್ದೇಶ ಈಡೇರಿಸಲು ಶ್ರಮಿಸುವ ಆಡಳಿತ ವರ್ಗದ ಕಾರ್ಯಕ್ಕೆ ಜನರ ಸಹಕಾರ ಅಗತ್ಯ ಎಂದರು. ಎರಡು ವಾರಕ್ಕೂ ಹೆಚ್ಚು ಕಾಲ ಕೆಮ್ಮು, ಜ್ವರ, ಹಸಿವು ಆಗದಿರುವುದು, ಕಫದಲ್ಲಿ ರಕ್ತ ಬೀಳುವುದು, ಎದೆನೋವು ಕಾಣಿಸಿಕೊಳ್ಳುವುದು ರೋಗದ ಲಕ್ಷಣಗಳು. ಈ ಬಗ್ಗೆ ಎಚ್ಚರ ವಹಿಸಬೇಕು. ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಈ ಕಾಯಿಲೆ ಏಡ್ಸ್-ಮಧುಮೇಹ ಇರುವವರಿಗೆ ಬಹುಬೇಗ ಹರಡುತ್ತದೆ ಎಂದು ತಿಳಿಸಿದರು. ನಂತರ ಶ್ರೀ ಬಿ ಟಿ ಗೌಡರ ನಿಕಟ ಪೂರ್ವ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಜಯಪುರ ಮಾತನಾಡಿ, ಕ್ಷಯ ಟ್ಯೂಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಇದು ಸೋಂಕಿದ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಉಗುಳಿದಾಗ ಹಾಗೂ ಗಾಳಿ ಮೂಲಕ ಬೇರೊಬ್ಬರಿಗೆ ಹರಡುತ್ತದೆ. ಸಕಾಲಕ್ಕೆ ಚಿಕಿತ್ಸೆ ಪಡೆಯದಿದ್ದರೆ ವರ್ಷದಲ್ಲಿ 10-15 ಜನರಿಗೆ ರೋಗ ಹರಡುತ್ತದೆ ಎಂದು ಹೇಳಿದರು. ಕ್ಷಯದ ಬಗ್ಗೆ ಜನರಿಗೆ ತಿಳಿಸಲಿಕ್ಕಾಗಿ ಪ್ರತಿ ಹಳ್ಳಿಗಳಲ್ಲೂ ಜಾಗೃತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಬಿ ಟಿ ಗೌಡರ.ಶ್ರೀ ಎಸ್ ಎಸ್ ಮೇಟಿ.ಶ್ರೀ ಎಂ ಎನ್ ಪೂಜಾರಿ.ಶ್ರೀ ಆರ್ ಜಿ ಬುಲಾತಿ.ಶ್ರೀ ಎ ಜಿ ಮುಕಾರ್ಥಿಹಾಳ. ಜಿ ವಿ ಹೂಗಾರ. ಶ್ರೀ ಎಸ್ ಕೆ ದೊಡ್ಡಮನಿ. ಬಸವರಾಜ ಚಿಕ್ಕಬೆವೂನೂರ. ಜಗದೀಶ್ ಮುಚ್ಚಂಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
