ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ .
ರಾಷ್ಟ್ರೀಯ ಸೇವಾ ಯೋಜನೆ ನಾಯಕತ್ವ ಜವಾಬ್ದಾರಿ ಗೆ ಪ್ರೇರಣೆ - ಪ್ರೊಫೆಸರ್ ಶ್ರೀ ಎಸ್ ಆರ್ ಬಿರಾದಾರ
Published By: ಅಶೋಕ ಗುಂಡಿನಮನಿ.ನಿಡಗುಂದಿ ತಾಲೂಕ ರಿಪೋರ್ಟರ್
Last Updated Date: 22-Jun-2023

ರಾಷ್ಟ್ರೀಯ ಸೇವಾ ಯೋಜನೆ ನಾಯಕತ್ವ ಜವಾಬ್ದಾರಿ ಗೆ ಪ್ರೇರಣೆ ( ಪ್ರೊಫೆಸರ್ ಶ್ರೀ ಎಸ್ ಆರ್ ಬಿರಾದಾರ) ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ . ನಿಡಗುಂದಿ :- ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ಗ್ರಾಮೀಣ ವಿದ್ಯಾವರ್ಧಕ ಸಂಘದ ಶ್ರೀ ಎಂ ವ್ಹಿ ನಾಗಠಾಣ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ನಿಡಗುಂದಿ ಸರಕಾರಿ ಪ್ರೌಢಶಾಲೆ ಕಮದಾಳ ಇವರ ಸಂಯೋಗದಲ್ಲಿ ಪುನರ್ವಸತಿ ಕೇಂದ್ರವಾದ ಕಮದಾಳ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ನೆರವೇರಿತು.ಈ ಒಂದು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.ಈ ಒಂದು ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಎಸ್ ಜಿ ನಾಗಠಾಣ ಅಧ್ಯಕ್ಷರು ಗ್ರಾಮೀಣ ವಿದ್ಯಾವರ್ಧಕ ಸಂಘ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಾ ಎಮ್ ಎಲ್ ಉಗಲವಾಟ ಪ್ರಾಚಾರ್ಯ ಎಂ ವಿ ನಾಗಠಾಣ ಕಾಲೇಜು ನಿಡಗುಂದಿ.ಮುಖ್ಯ ಅತಿಥಿಗಳಾಗಿ ಶ್ರೀ ಪ್ರಭು ಸಿಂದಗಿ ಎಸ್ ಡಿ ಎಂ ಸಿ ಅಧ್ಯಕ್ಷರು ಕಮದಾಳ , ಅತಿಥಿಗಳಾಗಿ ಬಸವರಾಜ ವಂದಾಲ ಪಟ್ಟಣ ಪಂಚಾಯತಿಯ ಸದಸ್ಯರು, ಶ್ರೀ ಎಸ್ ಎಸ್ ಹೊಸಮನಿ ಸಹ ಶಿಕ್ಷಕರು ಜಿ ಎಚ್ಎಸ್ ಕಮದಾಳ, ಪಿ ಬಿ ಕೂಚಬಾಳ, ಶ್ರೀ ಎಸ್ ಆರ್ ಬಿರಾದಾರ, ಶ್ರೀ ಎನ್ ಎಸ್ ಕೂಚಬಾಳ, ಎ ಎಚ್ ಗುಂಡಿನಮನಿ,ಇನ್ನಿತರರು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.ಈ ಒಂದು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕಾಗಿ ಮಾತನಾಡಿದ ಉಪನ್ಯಾಸಕರಾದ ಶ್ರೀ ಎಸ್ ಆರ್ ಬಿರಾದಾರ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಹಾಗೂ ಕರ್ತವ್ಯಗಳ ಬಗ್ಗೆ ಮತ್ತು ಸಮಾಜದ ಸುಧಾರಣೆ ಮೇಲೆ ಯಾವ ರೀತಿ ಕಾರ್ಯಯೋಜನೆಗಳನ್ನ ಮಾಡಬೇಕು ಮತ್ತು ಸೇವೆಯ ಸಂದರ್ಭದಲ್ಲಿ ಯಾವುದೇ ರೀತಿ ಫಲ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವನೆಯಿಂದ ಪ್ರತಿಯೊಂದು ಕಾರ್ಯಗಳಲ್ಲಿ ತಮ್ಮನ್ನ ತಾವು ಸ್ವಯಂ ಪ್ರೇರಿತವಾಗಿ ತೊಡಗಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಹೇಳಿದರು ಅನಂತರ ಈ ಯೋಜನೆಯ ಇತಿಹಾಸವನ್ನು ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು , ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಸಾರ್ವಜನಿಕ ಸೇವಾ ಸಂಸ್ಥೆ. ಇದನ್ನು ನಡೆಸುವವರು ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ , ಗಾಂಧೀಜಿಯವರ ಶತವರ್ಷವಾದ ೧೯೬೯ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂಸ್ಥೆಯ ಮುಖ್ಯ ಉದ್ದೇಶವು ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ. ಈ ಸ್ವಯಂಪ್ರೇರಿತ ಸಂಸ್ಥೆಯ ಮೂಲ ತತ್ವವು ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ತ್ರನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡಂತಹ ಅನುಭವವನ್ನು ನೀಡುವುದು, ಹಾಗೂ ಇದರೊಂದಿಗೆ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳೆಸುವುದಾಗಿದೆ.ಎಂದು ತಮ್ಮ ಪ್ರಾಸ್ತಾವಿಕ ಮಾತುಗಳನ್ನು ನಾಡಿದರು.ಈ ಒಂದು ಕಾರ್ಯಕ್ರಮದ ನಿರೂಪಣೆಯನ್ನು ಕುಮಾರ ಆನಂದ ಹಾವೇಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಲು ಶ್ರೀ ಪ್ರೊಫೆಸರ್ ಎನ್ ಎಸ್ ಕೂಚಬಾಳ ಸ್ವಾಗತಿಸಿದರು ವಂದನಾರ್ಪಣೆಯನ್ನು ಕುಮಾರಿ ಸಾವಿತ್ರಿ ಕಡೂರು ಕಾರ್ಯಕ್ರಮವನ್ನು ವಂದಿಸಿದರು.
