logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

Advanced Search

ಹಾವೇರಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಲಂಚ ಸ್ವೀಕಾರ ಹಾವೇರಿ ಜಿಲ್ಲಾ ಆಸ್ಪತ್ರೆಯ ವೈದ್ಯ ಹಾಗೂ ಆಶಾ ಕಾರ್ಯಕರ್ತೆಯರ ಬಂಧನ.
ಹಾವೇರಿ -: ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಹಾವೇರಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಲಂಚ ಸ್ವೀಕಾರ ಹಾವೇರಿ ಜಿಲ್ಲಾ ಆಸ್ಪತ್ರೆಯ ವೈದ್ಯ ಹಾಗೂ ಆಶಾ ಕಾರ್ಯಕರ್ತೆಯರ ಬಂಧನ. ಮಹಿಳೆಯರಿಬ್ಬರ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಆಸ್ಪತ್ರೆ ವೈದ್ಯ ಮತ್ತು ಆಶಾ ಕಾರ್ಯಕರ್ತೆಯ ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಗುರುವಾರ ನಡೆದಿದೆ ...ಡಾಕ್ಟರ್ ಉಮೇಶ್. ಎಂ. ಕೆಳಗಿನಮನಿ ಮತ್ತು ಆಶಾ ಕಾರ್ಯಕರ್ತೆ ದ್ರಾಕ್ಷಾಯಿಣಿ ಪಿ ಚಿಕ್ಕನಂದಿ ಬಂಧನಕೊಳಗಾದವರು . ಮಹಿಳೆಯ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ತಲಾ 2000 ಗಳಂತೆ 4000 ಲಂಚ ಕೇಳಿದ್ದರು 2000 ಸಾವಿರ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕ ಬಿದ್ದಿದ್ದಾರೆ ಪೊಲೀಸ್ ಬಂಧಿಸಿದ್ದಾರೆ ಹೊಸರಿತ್ತಿ ಗ್ರಾಮದಲ್ಲಿರುವ ವೈದ್ಯರ ಮನೆಯನ್ನು ಶೋಧಿಸಲಾಗಿದೆ ಮತ್ತು ತನಿಖೆಗೆ ಮುಂದುವರಿಸಲಾಗಿದೆ .

Apr 05, 2021 at 9:48 am

ಅಕ್ರಮ ಮದ್ಯ ಸಾಗಿಸುತ್ತಿದ್ದ ವ್ಯಕ್ತಿ ಬಂಧನ.
ಇಂಡಿ - : ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿದ ಅಬಕಾರಿ ಪೊಲೀಸರು. ಇಂಡಿ ತಾಲೂಕಿನ ಚಿಕ್ಕಬೇವನೂರ ಗ್ರಾಮದಿಂದ 2 ಕಿ.ಮೀ ಅಂತರದಲ್ಲಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ರಾಜು ರೇವಣಸಿದ್ಧ ಹೊನ್ನಕೊರೆ (36) ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು, ದಾಳಿ ನಡೆಸಿ 17,280 ಲೀ, ಮದ್ಯ ವಶಪಡಿಸಿಕೊಂಡಿದ್ದಾರೆ. ಅಬಕಾರಿ ನಿರೀಕ್ಷಕ ಪಡಸಲಗಿ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕ ವಾದಿರಾಜ ಆಶ್ರಿತ್ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರ ಪಡಿಸಲಾಯಿತು. ದಾಳಿಯಲ್ಲಿ ಶಿವರುದ್ರ ದಳವಾಯಿ, ಮಂಜುನಾಥ ಬಡಿಗೇರ, ಭೀಮರಾಯ ತಳವಾರ ಪಾಲ್ಗೊಂಡಿದ್ದರು.

Apr 05, 2021 at 9:48 am

ಪ್ರೀತಿಸಿದವಳನ್ನು ಮದುವೆಯಾಗಲು ಅಪರಾಧಿಯನ್ನ ಪೆರೋಲ್ ಮೇಲೆ ಬಿಡುಗಡೆಗೆ ಹೈಕೋರ್ಟ್ ಸೂಚನೆ.
ಕೊಲೆ ಪ್ರಕರಣದಲ್ಲಿ 10 ವರ್ಷಗಳವರೆಗೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ವಿವಾಹವಾಗಲು 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್, ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಬೆಂಗಳೂರು: ಕೊಲೆ ಪ್ರಕರಣದಲ್ಲಿ 10 ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ವಿವಾಹವಾಗುವುದಕ್ಕಾಗಿ 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. 9 ವರ್ಷಗಳಿಂದ ಪ್ರೀತಿಸುತ್ತಿದ್ದ ಅಪರಾಧಿ: ಅಪರಾಧಿ ಯುವತಿಯೊಬ್ಬಳನ್ನ ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದ, ಹೀಗಾಗಿ ಅವಳನ್ನೇ ವಿವಾಹವಾಗಲು ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿ ಆತನ ಪ್ರಿಯತಮೆ ಮತ್ತು ಆತನ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪಪೀಠ ಈ ಸೂಚನೆ ನೀಡಿದೆ. ಅಪರಾಧಿಗೆ (ಕೈದಿ ಸಂಖ್ಯೆ 11699) ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿ ಇದೇ ಏಪ್ರೀಲ್ 5ರ ಮಧ್ಯಾಹ್ನದ ಒಳಗೆ, 15 ದಿನಗಳ ಅವಧಿವರೆಗೆ ಬಿಡುಗಡೆ ಮಾಡಬೇಕು ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಂಧಿಖಾನೆ ಡಿಐಜಿ ಹಾಗೂ ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಅವರಿಗೆ ಆದೇಶಿಸಲಾಗಿದೆ. ಅಲ್ಲದೇ, ಜೈಲು ಕೈಪಿಡಿಯ ಸಕ್ಷನ್ 636ರ ಸಬ್ ಸೆಕ್ಷನ್ 12ರ ಪ್ರಕಾರ ಅಸಾಧಾರಣ ಸಂದರ್ಭಗಳಲ್ಲಿ ಕೈದಿಗಳಿಗೆ ಪೆರೋಲ್ ನೀಡಲು ಸಂಸ್ಥೆಯ ಮುಖ್ಯಸ್ಥರಿಗೆ ವಿವೇಚನಾಧಿಕಾರವಿದೆ. ಹೀಗಾಗಿ ಅತ್ಯಂತ ಅಪರೂಪದ ಪ್ರಕರಣ ಎಂಬುದಾಗಿ ಪರಿಗಣಿಸಿ ಪೆರೋಲ್ ನೀಡಬಹುದು ಎಂದು ನ್ಯಾಯಪೀಠ ತನ್ನ ಆದೇಶಲ್ಲಿ ತಿಳಿಸಿದೆ. ಅರ್ಜಿದಾರರ ಪರ ವಕೀಲರು ಹೇಳಿದ್ದೇನು?: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಪರಾಧಿ 21 ವರ್ಷವಿದ್ದಾಗ ಜೈಲು ಶಿಕ್ಷೆಗೆ ಗುರಿಯಾಗಿದ್ದು, 10 ವರ್ಷ ಶಿಕ್ಷೆ ನಿಗದಿಯಾಗಿದೆ. ಅರ್ಜಿದಾರ ಹೆಣ್ಣು ಮಗಳು ಅಪರಾಧಿಯನ್ನು ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದು, ಪೆರೋಲ್ ನೀಡದಿದ್ದಲ್ಲಿ ಅವರ ಜೀವನದ ಪ್ರೀತಿಯನ್ನು ಕಳೆದುಕೊಂಡಂತಾಗಲಿದೆ. ಅರ್ಜಿದಾರರು ಜೈಲಿನಲ್ಲಿರುವ ಕೈದಿಯನ್ನು ಹೊರತುಪಡಿಸಿ ಬೇರೊಬ್ಬರನ್ನು ಒಲ್ಲದ ಮನಸ್ಸಿನಿಂದ ವಿವಾಹವಾಗಬೇಕಾಗುತ್ತದೆ. ಹೀಗಾಗಿ ಕೈದಿಗೆ ಷರತ್ತುಗಳನ್ನು ವಿಧಿಸಿ ತುರ್ತಾಗಿ ಪೆರೋಲ್ ನೀಡಬೇಕು ಎಂದು ಕೋರಿದ್ದರು. ಪೆರೋಲ್ ಮೇಲೆ ಬಿಡುಗಡೆಗೆ ಸೂಚನೆ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ಜೈಲು ಕೈಪಿಡಿಯಲ್ಲಿ ವಿವಾಹವಾಗಲು ಪೆರೋಲ್ ನೀಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಬೇಡುವಿಕೆಯನ್ನು ಪುಷ್ಟೀಕರಿಸಬಹುದಾದ ಬಾಂಬೆ ಹೈಕೋರ್ಟ್, ರಾಜಸ್ಥಾನ ಹೈಕೋರ್ಟ್ ಮತ್ತು ರಾಜ್ಯ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠಗಳ ಹಲವು ಆದೇಶಗಳನ್ನು ಉಲ್ಲೇಖಿಸಿ, 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆಗೆ ಸೂಚನೆ ನೀಡಿದ್ದಾರೆ. ಪ್ರಕರಣದ ಹಿನ್ನೆಲೆ ಏನು?: ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ 2015ರ ಆಗಸ್ಟ್ 16ರಂದು ಮಾಸ್ತಿ ಹೋಬಳಿಯ ನಾಗದೇನಹಳ್ಳಿಯಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ (ಘಟನೆ ನಡೆದಾಗ 21ವರ್ಷ) ಅವರನ್ನು ಮಾಸ್ತಿ ಠಾಣೆ ಪೊಲೀಸರು 2015ರ ಆಗಸ್ಟ್ 17ರಂದು ಬಂಧಿಸಿದ್ದರು. ನಂತರ ಸೆಷನ್ಸ್ ನ್ಯಾಯಾಲಯ 2019ರಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಲಾದ ಮೇಲ್ಮನವಿಯಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳಿಗೆ ಇಳಿಸಿತ್ತು. ಈ ನಡುವೆ ಅಪರಾಧಿಯ ಪ್ರಿಯತಮೆ ವಿವಾಹವಾಗಲು 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧಿಕರಿಗಳಿಗೆ ಸೂಚನೆ ನೀಡಲು ಕೋರಿ ಅರ್ಜಿ ಸಲ್ಲಿಸಲಿದ್ದರು.

Apr 05, 2021 at 9:48 am

ಚುನಾವಣಾ ಆಯೋಗದಿಂದ ಭರ್ಜರಿ ಬೇಟೆ : ರಾಜ್ಯಾದ್ಯಂತ ಆರೇ ದಿನಗಳಲ್ಲಿ 47 ಕೋಟಿ ರೂ.ಜಪ್ತಿ!
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ರಾಜ್ಯಾದ್ಯಂತ ನಗದು, ಮದ್ಯ, ಉಡುಗೊರೆ, ಮಾದಕವಸ್ತುಗಳು ಸೇರಿದಂತೆ ಒಟ್ಟು 47.43 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿವೆ.
ಮಾರ್ಚ್ 29 ರಿಂದ ಪೊಲೀಸ್, ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಜಾಗೃತ ದಳಗಳು ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿ 12.82 ಕೋಓಇ ರೂ. ನಗದು, 16.02 ಕೋಟಿ ರೂ.ಮೌಲ್ಯದ 2.78 ಲಕ್ಷ ಲಕ್ಷ ಲೀಟರ್ ಮದ್ಯ, 41.26 ಲಕ್ಷ ರೂ.ಮೌಲ್ಯದ 79.44 ಕೆ.ಜಿ.ಮಾದಕವಸ್ತುಗಳು. 6.72 ಕೋಓಟಿ ರೂ. ಮೌಲ್ಯದ 13.575 ಕೆ.ಜಿ. ತೂಕದ ಚಿನ್ನ, 63.98 ಲಕ್ಷ ರೂ. ಮೌಲ್ಯದ 88.763 ಕೆ.ಜಿ.ತೂಕದ ಬೆಳ್ಳಿ ಹಾಗೂ 10.79 ಕೋಟಿ ರೂ. ಮೌಲ್ಯದ ವಿವಿಧ ಕೊಡುಗೆ ಸೇರಿದಂತೆ ಒಟ್ಟು 47.43 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ ಮಾಡಿವೆ.
ಚುನಾವಣಾ ವೇಳಾಪಟ್ಟಿ ಘೋಷಣೆಗೂ ಮುನ್ನ ರಾಜ್ಯಾದ್ಯಂತ 80 ಕೋಟಿ ರೂ. ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಬಕಾರಿ ಇಲಾಖೆಯು 450 ಗಂಭೀರ ಪ್ರಕರಣಗಳು, ಮದ್ಯದ ಪರವಾನಗಿ ನಿಯಮ ಉಲ್ಲಂಘನೆ ಅಡಿ 305 ಪ್ರಕರಣಗಳು,16 ಎನ್ ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆಯಡಿ ಒಟ್ಟು 1,238 ಪಪ್ರಕಗಳನ್ನು ದಾಖಲಿಸಿದು. 270 ವಾಹನಗಳನ್ನು ಜಪ್ತಿ ಮಾಡಿದೆ. ಜಪ್ತಿ ಸಂಬಂಧಿಸಿದಂತೆ  ಕಲಂ  316 ಎಫ್ ಐಆರ್ ದಾಖಲಾಗಿದೆ.

Apr 05, 2021 at 9:48 am

ಕಳೆದುಕೊಂಡ ಮೊಬೈಲ್ ಫೋನ್ ಗಳು ಮತ್ತೆ ಕಳೆದುಕೊಂಡವರ ಕೈಗೆ ಸೇರಿವೆ.
ಹಳಿಯಾಳ -: 2023 ಮಾರ್ಚ್ ತಿಂಗಳಲ್ಲಿ ಒಟ್ಟು ಆರು ಮೊಬೈಲ್ ಹಳಿಯಾಳ ತಾಲೂಕ ಪೊಲೀಸ್ ಸ್ಟೇಷನ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಈ ದಿವಸ Ceir portal ಮೂಲಕ ಕಾಣೆಯಾದ ಮೊಬೈ ಗಳು ಪತ್ತೆ ಹಚ್ಚಿವಲಿ ಯಶಸ್ವಿಯಾದ ಪೊಲೀಸ್ ಪೇದೆ ಶ್ರೀಶೈಲ್ ಹಾಗೂ ಸ್ಟೇಷನ್ ಅಧಿಕಾರಿ ವಾರಸುದಾರರಿಗೆ ಸ್ಟೇಷನ್ ನಲ್ಲಿ ಕರಿಕಳಿಸಿ ಮೊಬೈಲ್ ಕೊಟ್ಟಿರುತ್ತಾರೆ.

Apr 05, 2021 at 9:48 am

ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಇಬ್ಬರ ಬಂದನ , ನಗದು ವಶಕ್ಕೆ.
ವಿರಾಜಪೇಟೆ - : ಮಾ 31 : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇರ್ವರು ಯುವಕರನ್ನು ಬಂದಿಸುವಲ್ಲಿ ವಿರಾಜಪೇಟೆ ನಗರ ಠಾಣೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಇಂಜಿಲಗೆರೆ ಗ್ರಾಮದ ಕಲ್ಲುಕೊರೆ ನಿವಾಸಿ ಪ್ರವೀಣ ಪ್ರಾಯ ೩೧ ವರ್ಷ ಮತ್ತು ಇ ಹಿಂದೆ ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ಬಂದ ವಿರಾಜಪೇಟೆ ಗಾಂಧಿನಗರ ನಿವಾಸಿ ಇಮ್ರಾನ್ ಅಲಿಯಾಸ್ ಸೊನು ಪ್ರಾಯ ೨೨ ವರ್ಷ ಗಾಂಜಾ ಪ್ರಕರಣದಲ್ಲಿ ಬಂದಿತ ಆರೋಪಿಗಳು. ಘಟನೆಯ ವಿವರ: ಪ್ರಕರಣದ ಎರಡನೇ ಆರೋಪಿಯಾಗಿರುವ ಸೊನು ೨೦೨೦ ರಲ್ಲಿ ಗಾಂಜಾ ಪ್ರಕರಣದಲ್ಲಿ ಬಂದಿತನಾಗಿ ಜೈಲುವಾಸ ಅನುಭವಿಸಿ ಹಿಂದಿರುಗಿದ್ದಾನೆ. ಜೈಲುವಾಸ ಅನೇಕ ಮಂದಿ ಪರಿಚಯವು ಅಗಿದೆ. ಗಾಂಜಾ ಖರೀದಿ ಮತ್ತು ದೊರಕುವ ಸ್ಥಳದ ಬಗ್ಗೆ ಈತನಿಗೆ ಮಾಹಿತಿ ಇತ್ತು ಎನ್ನಲಾಗಿದೆ. ತನ್ನ ಸ್ನೇಹಿತನಾದ ಪ್ರವೀಣ್ ಗೂ ಮಾಹಿತಿ ತಿಳಿಸಿ ಹಣ ಹೊಂದಿಸಿಕೊಂಡು ಮೈಸೂರು ವಿಗೆ ತೆರಳಿದ್ದಾನೆ ಸೂನು. ದಿನಾಂಕ 30-03-2023 ರ ರಾತ್ರಿ ವೇಳೆಯಲ್ಲಿ ಮೈಸೂರು ಹೊರವಲದಲ್ಲಿ ಗಾಂಜಾ ಖರೀದಿ ಸಿ ವಿರಾಜಪೇಟೆ ನಗರಕ್ಕೆ ಆಗಮಿಸಿದ್ದಾನೆ. ಇಂದು ಬೆಳಿಗ್ಗೆ ಸುಮಾರು 11 ರ ವೇಳೆಯಲ್ಲಿ ಸೊನು ಮತ್ತು ಪ್ರಕರಣದ ಪ್ರಥಮ ಆರೋಪಿ ಪ್ರವೀಣ ತಮ್ಮ ಬಳಿಯಿದ್ದ ಗಾಂಜಾವನ್ನು ಮಾರಾಟ ಮಾಡಲು ಗಿರಾಕಿಗಳಿಗೆ ಹೊಂಚು ಹಾಕಿಕೊಂಡಿದ್ದರು. ಪೊಲೀಸ್ ಸಿಬ್ಬಂದಿಗೆ ಬಂದ ನಿಖರ ಮಾಹಿತಿ ಅನ್ವಯ ನಗರದ ಕೆ.ಎಸ್.ಅರ್.ಟಿ.ಸಿ. ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಸಂಶಯಾಸ್ಪದ ರೀತಿಯಲ್ಲಿ ವರ್ತನೆ ಮಾಡುತಿದ್ದ ಯುವಕರ ಮೇಲೆ ಧಾಳಿ ನಡೆಸಿದ್ದಾರೆ. ಇ ವೇಳೆ ಸೋನು ಮತ್ತು ಪ್ರವೀಣನ ಬಳಿಯಿದ್ದ ಪ್ಲಾಸ್ಟಿಕ್ ಕೈಚೀಲ ಒಂದರಲ್ಲಿ ಮಾರಾಟಕ್ಕೆ ಸಿದ್ದಗೊಂಡಿದ್ದ 01. ಕೆ.ಜಿ. 222 ಗ್ರಾಂ ಗಾಂಜಾ ಮತ್ತು 770 ರೂ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆಯಲಾಗಿರುವ ಗಾಂಜಾ ಮಾರುಕಟ್ಟೆಯಲ್ಲಿ 30,000 ರೂಗಳು ಅಂದಾಜು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂದಿಸಿದಂತೆ ಇರ್ವರು ಯುವಕರ ಮೇಲೆ ವಿರಾಜಪೇಟೆ ನಗರ ಠಾಣೆಯಲ್ಲಿ ಎನ್.ಡಿ.ಪಿ.ಎಸ್ 20/B ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್,ಸಹ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಮತ್ತು ವಿರಾಜಪೇಟೆ ಉಪ ವಿಭಾಗ ಡಿ.ವೈಎಸ್ಪಿ ಮೋಹನ್ ಕುಮಾರ್ ಅವರುಗಳ ಮಾರ್ಗದರ್ಶನದಲ್ಲಿ ವಿರಾಜಪೇಟೆ ನಗರ ವೃತ ನಿರೀಕ್ಷಕರಾದ ಶಿವರುದ್ರ ನಿರ್ದೇಶನದ ಮೇರೆಗೆ ವಿರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿ ಮಧನ್ ಕುಮಾರ್ ಎ.ಎಸ್.ಐ. ಮೊಹಮ್ಮದ್ ಎಂ.ಎಂ. ಸಿಬ್ಬಂದಿಗಳಾದ ಗಿರೀಶ್, ಮಲ್ಲಿಕಾರ್ಜುನ, ಧರ್ಮ ಮತ್ತು ಸತೀಶ್ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Apr 05, 2021 at 9:48 am

ಚಡಚಣ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ಮೌಲ್ಯದ ಚಿನ್ನ, ಹಣ ಜಪ್ತಿ...
ಚಡಚಣ : ದಾಖಲಾತಿ ಇಲ್ಲದೇ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 480 ಗ್ರಾಂ ಚಿನ್ನಾಭರಣ 6 ಲಕ್ಷ ನಗದನ್ನು ಪೊಲೀಸರು ಜಪ್ತಿಗೈದಿರುವ ಘಟನೆ ತಾಲೂಕಿನ ದೇವರನಿಂಬರಗಿ ಕ್ರಾಸ್ ಬಳಿ ಗುರುವಾರ ನಡೆದಿದೆ. MH 13- AZ 4201 ನಂಬರಿನ ಕಾರಿನಲ್ಲಿ ವಸ್ತುಗಳನ್ನು ಜಪ್ತಿಗೈದಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿ ವಿಜಯ ಪಡೋಳಕರ ವಶಕ್ಕೆ ಪಡೆಯಲಾಗಿದೆ. ಡಿವೈಎಸ್ಪಿ‌ ಚಂದ್ರಕಾಂತ ನಂದರೆಡ್ಡಿ ನೇತೃತ್ವದಲ್ಲಿ ಜಪ್ತಿಗೈದಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Apr 05, 2021 at 9:48 am

ಕಳೆದು ಹೋದ ಮೊಬೈಲ್ ಮತ್ತೆ Ceir portal ಮೂಲಕ ಕಂಡುಹಿಡಿದ ಪೊಲೀಸ್ ಅಧಿಕಾರಿಗಳು.
ದಿನಾಂಕ -: 29 -: ಹಳಿಯಾಳ ತಾಲೂಕ ಪೊಲೀಸ್ ಸ್ಟೇಷನ್ ಸಿಬ್ಬಂದಿಗಳು ಈ ದಿವಸ Ceir portal ಮೂಲಕ ಕಾಣೆಯಾದ relame ಕಂಪನಿಯ ಮೊಬೈಲ್ ಪತ್ತೆ ಹಚ್ಚಿವಲಿ ಯಶಸ್ವಿಯಾದ ಪೊಲೀಸ್ ಪೇದೆ ಶ್ರೀಶೈಲ್ ಎಂಬುವರು ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ ಸ್ಟೇಷನ್ ನಲ್ಲಿ ಕರಿಸಿಕೊಂಡು ಕಳೆದುಕೊಂಡ ಮೊಬೈಲ್ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದು ಕೇಂದ್ರ ಸರ್ಕಾರ ಹೊರಡಿಸಿರುವ ಒಂದು ವಿನೂತನ ಮಾದರಿಯ ಕಳೆದುಹೋದ ಮೊಬೈಲ್ ಫೋನ್ ಗಳನ್ನು ಮತ್ತೆ ಪತ್ತೆ ಹಚ್ಚುವಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿಯ ಅಧಿಕೃತ ವಿಳಾಸ ಒಂದನ್ನು ಹೊರಡಿಸಿದ್ದು ಅದರ ಮೂಲಕ ಕಳೆದು ಹೋದ ಮೊಬೈಲ್ ಫೋನನ್ನು ಬೇಗನೆ ಪತ್ತೆಹಚ್ಚಲು ಸಹಾಯಕಾರಿಯಾಗುತ್ತದೆ ಇಂತಹ ಘಟನೆ ಒಂದು ಹಳಿಯಾಳ ನಡೆದಿದ್ದು ಈ ಘಟನೆ ಬಗ್ಗೆ ವಾರಸದಾರರು ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಾಗ ಪೊಲೀಸ್ ಸಿಬ್ಬಂದಿಗಳು ಈ ವಿಳಾಸದ ಮೂಲಕ ಕಳೆದು ಹೋದ ಫೋನನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ ನಂತರ ಫೋನ್ ಕಳೆದುಕೊಂಡ ವ್ಯಕ್ತಿಯನ್ನು ಕರೆಸಿ ಆತನಿಗೆ ಮರಳಿ ಕೊಟ್ಟಿರುತ್ತಾರೆ.

Apr 05, 2021 at 9:48 am

ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೆ 62.90 ಲಕ್ಷ ರೂ ಹಣವನ್ನು ಝಳಕಿ ಪೊಲೀಸ್ ಠಾಣೆ ಪೊಲೀಸರು ನಸುಕಿನ ವೇಳೆ ವಶಪಡಿಸಿಕೊಂಡಿರುವದು.
ವಿಜಯಪುರ - : ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೆ 62.90 ಲಕ್ಷ ರೂ ಹಣವನ್ನು ಝಳಕಿ ಪೊಲೀಸ್ ಠಾಣೆ ಪೊಲೀಸರು ನಸುಕಿನ ವೇಳೆ ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಔರಂಗಾಬಾದ್ ಕಡೆ ಹೊರಟಿದ್ದ 2 ಲಾರಿಗಳಲ್ಲಿ ದಾಖಲೆ ಇಲ್ಲದೆ ಇದ್ದ ಕ್ರಮವಾಗಿ 46.75 ಲಕ್ಷ ರೂ ಹಾಗೂ 7.74 ಲಕ್ಷ ರೂ ಸೇರಿ 54.49 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಮೂಲದ ಸೈಯದ್, ಜಮಿಲ್ ಹಾಗೂ ರಂಗಸ್ವಾಮಿ ಬಂದಿತರು. ಮೂವರಿಗೆ ನೋಟಿಸ್ ನೀಡಿ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಮತ್ತೊಂದು ಪ್ರಕಣದಲ್ಲಿ ಸೊಲ್ಲಾಪುರದಿಂದ ವಿಜಯಪುರಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 8.50 ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿದ್ದಾಗಿ ಪೋಲೀಸರು ತಿಳಿಸಿದ್ದಾರೆ ಈ ಕುರಿತು ಝಳಕಿ ಪೊಲೀಸ್ ಠಾಣೆ ದಾಖಲಾಗಿದೆ.

Apr 05, 2021 at 9:48 am

ಕುಡಿದ ನಿಶೆಯಲ್ಲಿ ವ್ಯಾಮೋಹಕ್ಕೆ ಒಳಗಾಗಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ .
ರಾಮದುರ್ಗ -: ತಾಲೂಕಿನ ಸುನ್ನಾಳ ಗ್ರಾಮದಲ್ಲಿ ಒಬ್ಬ ವ್ಯಕ್ತಿಯು ಮೇಲೆ ಹಲ್ಲೆ ನಡೆಸಿದ್ದಾನೆ . ಅಸ್ಲಾಂ ಮುಲ್ಲಾ. ವಯಸ್ಸು (30) ಇತನು ಮೂಲತಃ ರಾಮದುರ್ಗ ನಗರದ ನಿವಾಸಿಯಾಗಿದ್ದು. ಸುನ್ನಾಳ ಗ್ರಾಮದಲ್ಲಿ ನೀರಿನ ಟ್ಯಾಂಕಿನ ಕೆಲಸವನ್ನು ಮಾಡುತ್ತಿದ್ದನು. ಈಗ ಎರಡು ಮೂರು ದಿನಗಳಿಂದ ಅಲ್ಲಿರುವ ಸಿಮೆಂಟನ್ನು ಯಾರಿಗೂ ತಿಳಿಯದ ಹಾಗೆ ಮಾರಾಟ ಮಾಡುತ್ತಿದ್ದನು ಮತ್ತು ಇಂದು ಮುಂಜಾನೆ 12:30 ಗಂಟೆಗೆ ಒರ್ವ ವಿದ್ಯಾರ್ಥಿನಿಯ ಮೇಲೆ ಹಲ್ಲೇಯನ್ನು ನಡೆಸಿದ್ದಾನೆ. ಸುನ್ನಾಳ ಗ್ರಾಮದ ವಿದ್ಯಾರ್ಥಿನಿಯು ತನ್ನ ಶಾಲಾ ವೇಳೆ ಮುಗಿಸಿಕೊಂಡು ಮರಳಿ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಹೋಗುವ ದಾರಿಯಲ್ಲಿ ಇತನು ಮಧ್ಯಪಾನವನ್ನು ಸೇವಿಸಿ ಆ ವಿದ್ಯಾರ್ಥಿಯನ್ನು ಕಂಡು ಕೂಡಲೇ ವ್ಯಾಮೋಹದಿಂದ ಆ ವಿದ್ಯಾರ್ಥಿನಿಯ ಕೈಯನ್ನು ಹಿಡಿದು ಹಿಂಸಾತ್ಮಕವಾಗಿ ವರ್ತಿಸಿದ್ದಾನೆ. ಅದನ್ನು ಕಂಡು ವಿದ್ಯಾರ್ಥಿನಿಯು ಹೆದರಿ ಗಾಬರಿಯಿಂದ ಊರಿನೊಳಗಡೆ ಓಡಿಬಂದು ಅಲ್ಲಿನ ಜನರಿಗೆ ತಿಳಿಸಿದಳು. ನಂತರ ಊರಿನ ಜನರು ಅವನನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗ ತಳಿಸಿದರು. ನಂತರ ಕಡಕೋಳ ಪೊಲೀಸ್ ಠಾಣೆ, ಪೊಲೀಸ್ ಸಿಬ್ಬಂದಿಯು ಆ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆಯನ್ನು ನಡೆಸಿದರು. ನಂತರ ಅವನನ್ನು ಕಡಕೋಳ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋದರು.

Apr 05, 2021 at 9:48 am


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img