ಕುಡಿದ ನಿಶೆಯಲ್ಲಿ ವ್ಯಾಮೋಹಕ್ಕೆ ಒಳಗಾಗಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ .
Published By: ಹಸನ್ ನದಾಫ್ ಯರಗಟ್ಟಿ ತಾಲೂಕ ರಿಪೋರ್ಟರ್
Last Updated Date: 29-Mar-2023
ರಾಮದುರ್ಗ -: ತಾಲೂಕಿನ ಸುನ್ನಾಳ ಗ್ರಾಮದಲ್ಲಿ ಒಬ್ಬ ವ್ಯಕ್ತಿಯು ಮೇಲೆ ಹಲ್ಲೆ ನಡೆಸಿದ್ದಾನೆ . ಅಸ್ಲಾಂ ಮುಲ್ಲಾ. ವಯಸ್ಸು (30) ಇತನು ಮೂಲತಃ ರಾಮದುರ್ಗ ನಗರದ ನಿವಾಸಿಯಾಗಿದ್ದು. ಸುನ್ನಾಳ ಗ್ರಾಮದಲ್ಲಿ ನೀರಿನ ಟ್ಯಾಂಕಿನ ಕೆಲಸವನ್ನು ಮಾಡುತ್ತಿದ್ದನು. ಈಗ ಎರಡು ಮೂರು ದಿನಗಳಿಂದ ಅಲ್ಲಿರುವ ಸಿಮೆಂಟನ್ನು ಯಾರಿಗೂ ತಿಳಿಯದ ಹಾಗೆ ಮಾರಾಟ ಮಾಡುತ್ತಿದ್ದನು ಮತ್ತು ಇಂದು ಮುಂಜಾನೆ 12:30 ಗಂಟೆಗೆ ಒರ್ವ ವಿದ್ಯಾರ್ಥಿನಿಯ ಮೇಲೆ ಹಲ್ಲೇಯನ್ನು ನಡೆಸಿದ್ದಾನೆ. ಸುನ್ನಾಳ ಗ್ರಾಮದ ವಿದ್ಯಾರ್ಥಿನಿಯು ತನ್ನ ಶಾಲಾ ವೇಳೆ ಮುಗಿಸಿಕೊಂಡು ಮರಳಿ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಹೋಗುವ ದಾರಿಯಲ್ಲಿ ಇತನು ಮಧ್ಯಪಾನವನ್ನು ಸೇವಿಸಿ ಆ ವಿದ್ಯಾರ್ಥಿಯನ್ನು ಕಂಡು ಕೂಡಲೇ ವ್ಯಾಮೋಹದಿಂದ ಆ ವಿದ್ಯಾರ್ಥಿನಿಯ ಕೈಯನ್ನು ಹಿಡಿದು ಹಿಂಸಾತ್ಮಕವಾಗಿ ವರ್ತಿಸಿದ್ದಾನೆ. ಅದನ್ನು ಕಂಡು ವಿದ್ಯಾರ್ಥಿನಿಯು ಹೆದರಿ ಗಾಬರಿಯಿಂದ ಊರಿನೊಳಗಡೆ ಓಡಿಬಂದು ಅಲ್ಲಿನ ಜನರಿಗೆ ತಿಳಿಸಿದಳು. ನಂತರ ಊರಿನ ಜನರು ಅವನನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗ ತಳಿಸಿದರು. ನಂತರ ಕಡಕೋಳ ಪೊಲೀಸ್ ಠಾಣೆ, ಪೊಲೀಸ್ ಸಿಬ್ಬಂದಿಯು ಆ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆಯನ್ನು ನಡೆಸಿದರು. ನಂತರ ಅವನನ್ನು ಕಡಕೋಳ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋದರು.