logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

Advanced Search

ನೊಂದ ರೈತರಿಗೆ ಮತ್ತೆ ಕಣ್ಣು ತೆರೆದ ರಾಜ್ಯ ಸರ್ಕಾರ
ಉತ್ತರ ಕನ್ನಡ -: ವೀಕ್ಷಕರೇ 2022 ಇಸ್ವಿಯಲ್ಲಿ ಅನೇಕ ರೋಗದಿಂದ ಮತ್ತು ಹವಾಮಾನದಿಂದ ಮಾವು ಬೆಳೆಗೆ ಏನು ಕೂಡ ಲಾಭವಿಲ್ಲದೆ ರೈತರು ನಂದು ಹೋಗಿದ್ದರು ಈಗ ಮತ್ತೆ ತೋಟಗಾರಿ ಇಲಾಖೆಯಿಂದ ಸಿಹಿ ಸುದ್ದಿ. 2023 ಮುಂಗಾರು  ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರದಿಂದ ಮಂಜೂರಾತಿ ನೀಡಲಾಗಿದ್ದು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳ ಗ್ರಾಮ ಪಂಚಾಯತಿಗಳನ್ನು. (Insurance Unit-IU) ಮಾವು ಬೆಳೆ ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿರುತ್ತದೆ. ನೊಂದಣಿಗೆ ಅಗತ್ಯ ದಾಖಲೆಗಳು 1) ನಿಗದಿತ ಅರ್ಜಿ ನಮೂನೆ 2) ಜಮೀನಿನ ಪಹಣಿ ( ಬೆಳೆ ನೊಂದಾವಣೆ ಇರುವ ) 3) ಬ್ಯಾಂಕ್ ಉಳಿತಾಯ ಖಾತೆ 4) ಆಧಾರ್ ಕಾರ್ಡ್ 5) ನಿಗದಿತ ಸ್ವಯಂ ಘೋಷಣೆ 6) ನಾಮಿನಿ ಇವರಣೆ, ಬೆಳೆ ಸಾಲ ಪಡೆಯುವ (Loanee) ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ನೋಂದಾವಣೆಗೆ. 31/07/2023 ಅಂತಿಮ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿ. ಗ್ರಾಮ ಒನ್ ಕೇಂದ್ರ ಹಾಗೂ ಸಹಾಯಕ ತೋಟಗಾರಿಕೆ ಹಾಗೂ ರೈತ ಸಂಪರ್ಕ ಕೇಂದ್ರ ಹಳಿಯಾಳ. ಮುರಕವಾಡ. ಸಾಮ್ರಾಣಿ ದಾಂಡೇಲಿ ರೈತರು ಸಂಪರ್ಕಿಸಬಹುದು ಬೆಳೆವಾರು ವಿಮಾ ಮೊತ್ತ. ಕಂತು ಮತ್ತು. ರೈತರ ಬೆಳೆದ ಮಾವುಗೆ. ಒಟ್ಟು ವಿಮಾ ಮೊತ್ತ ಒಂದು ಎಕರೆಗೆ 32.000 ಸಾವಿರ ಆದರೆ ರೈತರು ಪಾವ ಪಾವತಿಸಬೇಕಾದ ವಿಮಾ ಕಂತಿನ ದರ 5% ಅಂದ್ರೆ ರೈತರು ಪಾವತಿಸಬೇಕಾದ ಒಟ್ಟು ವಿಮಾಕಂತೂ ಪ್ರತಿ ಎಕರೆಗೆ ಎಕ್ಕರೆಗೆ 1600 ನೂರು ರೂಪಾಯಿ ಇದೊಂದು ನಾವು ಬೆಳೆದ ರೈತರಿಗೆ ಭವಿಷ್ಯ ಬದಲಾವಣೆ ಆಗಬಹುದು.

Apr 05, 2021 at 9:48 am

ರೈತರ ಸಾಲ ತುಂಬುವುದು ಎರಡು ತಿಂಗಳು ಮುಂದೊಡಿಕೆ ಮಾಡಿ ಎಂದು ಸರ್ಕಾರಕ್ಕೆ ಮನವಿ.
ರೈತರ ಸಾಲ ತುಂಬುವುದು ಎರಡು ತಿಂಗಳು ಮುಂದೊಡಿಕೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ ಎಂದು ಆರ್ ವಿ ದೇಶಪಾಂಡೆ ಇವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ . ಹೌದು ವೀಕ್ಷಕರೇ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ್ ಆರ್ ವಿ ದೇಶಪಾಂಡೆ ಇವರ ಗೃಹ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಇವರು ಅಲ್ಲಿನ ಸುತ್ತಮುತ್ತಲಿನ ರೈತರ ಸಮಸ್ಯೆಯನ್ನ ನೋಡಿ ಹಾಗೂ ಅನೇಕ ಊರುಗಳಲ್ಲಿ ಜಾತ್ರಾ ಮಹೋತ್ಸವ ಇಟ್ಕೊಂಡಿರುವ ರೈತರು. ಅವರ ಕಷ್ಟ ದುಃಖಗಳನ್ನು ನೋಡಿ ಸರ್ಕಾರಕ್ಕೆ ಎರಡು ತಿಂಗಳ ಕಾಲ ಅವರು ತೆಗೆದುಕೊಂಡ ಸಾಲವನ್ನು ತೀರಿಸಲು ಆರ್ ವಿ ದೇಶಪಾಂಡೆ ಇವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Apr 05, 2021 at 9:48 am

ರೈತರಿಗೆ ಭರ್ಜರಿ ಗುಡ್ ನ್ಯೂಸ್; ನಿಮಗೆ 10000ರೂ..!
ಚಿತ್ರದುರ್ಗ- : ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಭೂ ಸಿರಿ ಯೋಜನೆ ಜಾರಿಗೆ ತರಲಾಗುತ್ತಿದ್ದು, ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವಂತೆ ರೂ.10000/- ಗಳನ್ನು ರೈತರ ಖಾತೆ ಜಮೆ ಮಾಡಲಾಗುವುದು. ಬಿತ್ತನೆ ಬೀಜ, ಗೊಬ್ಬರ ಖರೀದಿಗಾಗಿ ರೈತರು ಸಾಲ ಮಾಡದಂತೆ ತಡೆಯುಲು ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.ಈ ಕುರಿತು ಚಿತ್ರದುರ್ಗದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಭೂ ಸಿರಿ ಯೋಜನೆ ಜಾರಿಗೆ ತರಲಾಗುತ್ತಿದ್ದು, ರೈತರಿಗೆ ಅನುಕೂಲವಾಗುವಂತೆ ರೂ.10000/- ಗಳನ್ನು ರೈತರ ಖಾತೆ ಜಮೆ ಮಾಡಲಾಗುವುದು ಎಂದು ಹೇಳಿದರು.

Apr 05, 2021 at 9:48 am

ರಾಜ್ಯಮಟ್ಟದ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಕುಮಾರ್ ನಾಗೇಶ್ ಪ್ರಭು ಕೋಲಕಾರ ರಾಜ್ಯಕ್ಕೆ ಪ್ರಥಮ ಸ್ಥಾನ .
ನಿಡಗುಂದಿ : - ರಾಜ್ಯಮಟ್ಟದ ವಿಶೇಷ ಚೇತನರ ಕ್ರೀಡಾಕೂಟ 2022 - 23 ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರ ಕಛೇರಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕೊರಟಗೇರಿ ಯಲ್ಲಿ ನಡೆದ 2022 - 23 ನೇ ಸಾಲಿನ ದಿನಾಂಕ 11 ಮತ್ತು 12 - 2- 2023 ರಂದು ನಡೆದ ರಾಜ್ಯಮಟ್ಟದ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಗ್ರಾಮೀಣ ವಿದ್ಯಾವರ್ಧಕ ಸಂಘ ಪ್ರೌಢಶಾಲೆ ನಿಡಗುಂದಿ. ವಿದ್ಯಾರ್ಥಿಯಾದ ಕುಮಾರ ನಾಗೇಶ್ .ಪ್ರಭು.ಕೋಲಕಾರ ಉದ್ದ ಜಿಗಿತದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ ಮತ್ತು ವಿಜಯಪುರ ಜಿಲ್ಲೆಯ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾನೆ ಈ ಹಳ್ಳಿ ಹೈದನ ಸಾಧನಿ ಕಂಡು ಸಂಸ್ಥೆಯ ಚೇರಮನ್ನರಾದ ಶ್ರೀ ಎಸ್ ಜಿ ನಾಗಠಾಣ, ಕಾರ್ಯದರ್ಶಿಗಳಾದ ಶ್ರೀ ಬಿ ಎಸ್ ಮುಚ್ಚಂಡಿ, ನಿರ್ದೇಶಕರಾದ ಡಾ. ಅನೂಪ ಎಸ್.ನಾಗಠಾಣ, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಸಂಸ್ಥೆಯ ಚೇರಮನ್ನರು ಈ ವಿದ್ಯಾರ್ಥಿಗೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ತನಕ ಉಚಿತ ಶಿಕ್ಷಣ ನೀಡವ ಭರವಸೆ ನೀಡಿದ್ದಾರೆ.

Apr 05, 2021 at 9:48 am

ಸರಕಾರ ಮತ್ತು ರೈತರ ನಡುವಿನ ಕೊಂಡಿಯಾಗಿ ಭಾರತೀಯ ಕಿಸಾನ್ ಸಂಘ ಉತ್ತಮವಾಗಿ ಕಾರ್ಯನಿರ್ವಹಣೆ , ಸಚಿವ ವಿ. ಸುನಿಲ್ ಕುಮಾರ್
ಉಡುಪಿ - : ಸರ್ಕಾರ ಮತ್ತು ರೈತರ ನಡುವೆ ಕೊಂಡಿಯಾಗಿ ಭಾರತೀಯ ಕಿಸಾನ್ ಸಂಘ ಕೆಲಸ ಮಾಡುತ್ತಿದೆ. ಸರ್ಕಾರದ ಯಾವುದೇ ಯೋಜನೆಯನ್ನು ರೈತರ ತನಕ ತಲುಪಿಸುವ ಕಾರ್ಯ ಮಾಡಿ ರೈತರಿಗೆ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.ಈಗ ಆಯೋಜಿಸಿದ ಕಾರ್ಯ ಕ್ರಮ ರೈತರ ಬೆಳೆ ಬಗ್ಗೆ ಅಲ್ಲದೆ ಕರಕುಶಲ ವಸ್ತುಗಳ, ಕಾಡುತ್ಪನ್ನ ಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಹಾಗೂ ರೈತರಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತದೆ ಎಂದು ಇಂಧನ ಸಂಸ್ಕ್ರತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು. ಅವರು ಭಾರತೀಯ ಕಿಸಾನ್ ಸಂಘ,ಕರ್ನಾಟಕ ಪ್ರದೇಶ ಉಡುಪಿ ಜಿಲ್ಲೆ ವತಿಯಿಂದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಶ್ರೀಮತಿ ಶಾಲಿನಿ ಜಿ ಶಂಕರ್ ತೆರೆದ ಸಭಾಂಗಣದಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ರೈತ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಮಾತನಾಡಿ ನಮ್ಮ ರೈತರು ದೇಶದ ಬೆನ್ನೆಲುಬು ಎನ್ನುವುದರಲ್ಲಿ ಎರಡು ಮಾತಿಲ್ಲ ಮಾತ್ರವಲ್ಲದೆ ಮಾನವನ ಜೀವನಕ್ಕೆ ಅತ್ಯಗತ್ಯ ವಾದ ಉತ್ಪನ್ನಗಳ ಉತ್ಪಾದಕರು. ದ.ಕ ಜಿಲ್ಲೆಯ ಹಲವು ಕಡೆ ಅಡಿಕೆ ಬೆಳೆ ಕೊರೊನಾ ನಂತರ ಇಳಿಮುಖವಾಗಿದೆ ಎಂದರು. ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ,ಸೀತಾರಾಮ ಗಾಣಿಗ ವಾಸುದೇವ ಭಟ್ ರಾಮಾಚಂದ್ರ ಶ್ರೀಮತಿ ನಿರ್ಮಲ ನವೀನ್ ಚಂದ್ರ ಜೈನ ಮುಂತಾದವರು ಉಪಸ್ಥಿತರಿದ್ದರು.

Apr 05, 2021 at 9:48 am

ಕ್ಯಾಂಪ್ಕೋದ ಸುವರ್ಣ ಮಹೋತ್ಸವಕ್ಕೆ ಚಾಲನೆ
ಮಂಗಳೂರು - : ಕೇಂದ್ರ ಅಡಿಕೆ ಮತ್ತು ಕುಕ್ಕು ಮಾರಾಟ ಹಾಗೂ ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ) ದ ಸುವರ್ಣ ಮಹೋತ್ಸವಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಶನಿವಾರ ಪುತ್ತೂರಿನ ತೆಂಗಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಚಾಲನೆ ನೀಡಿದರು. ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ, ಸಹಕಾರ ಸಚಿವ ಸೋಮಶೇಖರ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕರಾದ ಸಂಜೀವ ಮಠಂದೂರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಗಣ್ಯರು

Apr 05, 2021 at 9:48 am

ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ
ಬಾಗಲಕೋಟೆ: ಮಾರ್ಚ 21 (ಕರ್ನಾಟಕ ವಾರ್ತೆ) : ಮುಖ್ಯ ಮಂತ್ರಿಗಳ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 23773 ರೈತರ ಮಕ್ಕಳ ಬ್ಯಾಂಕ್ ಖಾತೆಗೆ ನೇರವಾಗಿ 5.86 ಕೋಟಿ ರೂ.ಗಳ ಹಣವನ್ನು ಜಮೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
           ಬಾದಾಮಿಯ ಖಾಸಗಿ ಹೋಟೆಲ್‍ನಲ್ಲಿಂದು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಪ್ರಪ್ರಥಮವಾಗಿ ರೂಪಿಸಲಾಗಿರುವ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 23773 ರೈತ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಗಿದೆ ಎಂದರು.
            ಜಿಲ್ಲೆಯಲ್ಲಿ ಒಟ್ಟು 219872 ಜನ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೊಂದಾಯಿಸಿದ್ದು, ಈವರೆಗೆ ಕೇಂದ್ರದಿಂದ ರೈತರ ಬ್ಯಾಂಕ್ ಖಾತೆಗಳಿಗೆ 300 ಕೋಟಿ ರೂ.ಗಿಂತ ಅಧಿಕ ಮೊತ್ತವನ್ನು ಜಮೆ ಮಾಡಲಾಗಿದೆ. ರೈತರು ಈ ಯೋಜನೆಯಡಿ ಮುಂದುವರೆಯಲು ಕೇಂದ್ರ ಸರ್ಕಾರದ ನಿರ್ದೇಶನದಂತೆ ಮಾರ್ಚ 31 ರೊಳಗಾಗಿ ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಲು ಕೋರಿದರು. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಬೆಳೆ ಪರಿಹಾರ ಮಂಜೂರಾದ ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆ ಹಾಗೂ ಎನ್‍ಪಿಸಿಐ ಲಿಂಕ್ ಮಾಡಿಸಿದಲ್ಲಿ ಅಂತಹವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗುತ್ತದೆ ಎಂದು ತಿಳಿಸಿದರು. 
           ಯಾವುದೇ ರೀತಿಯ ಕುಂದು ಕೊರತೆಗಳಿದ್ದಲ್ಲಿ ರೈತರು ತಮ್ಮ ತಾಲೂಕಿನ ಕೃಷಿ ಕಛೇರಿಗೆ ಭೇಟಿ ನೀಡಿ ಅಲ್ಲಿರುವ ವಿಮಾ ಸಂಸ್ಥೆಯವರೊಂದಿಗೆ ಸಮಾಲೋಚನೆ ಮಾಡಿಕೊಂಡು ಪರಿಹಾರ ಕಂಡುಕೊಳ್ಳಲು ತಿಳಿಸುತ್ತಾ ಈ ಬಗ್ಗೆ ಸೂಕ್ತ ವ್ಯವಸ್ಥೆಯನ್ನು ಮಾಡಲು ತಾಲೂಕಾಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತಿ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳನ್ನು ನಿಯೋಜಿಸಿದ್ದು, ನಿಯತಕಾಲಿಕವಾಗಿ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಬೆಳೆಯ ಬೆಳೆವಣಿಗೆ, ರೋಗ ಹಾಗೂ ಕೀಟದ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸಭೆಯಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.
           ರೈತರ ಬೇಡಿಕೆ ಅನುಸಾರ ಹೆಚ್ಚಿನ ಕಾರ್ಯಕ್ರಮದ ಅವಶ್ಯಕತೆ ಇದ್ದಲ್ಲಿ ಕೇಂದ್ರ ಕಛೇರಿಗೆ ಮನವಿ ಸಲ್ಲಿಸಲು ತಿಳಿಸುತ್ತಾ, ಸಮಗ್ರ ಪೊಷಕಾಂಶ ನಿರ್ವಹಣೆ, ಸಮಗ್ರ ಪೀಡೆ ನಿರ್ವಹಣೆ, ಯಾಂತ್ರಿಕರಣ ಹಾಗೂ ಸೂಕ್ಷ್ಮ ನೀರಾವರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖಾಂತರ ರೈತರಿಗೆ ನವೀನ ತಾಂತ್ರಿಕತೆ ಹಾಗೂ ಸುಧಾರಿತ ಬೇಸಾಯ ಕ್ರಮಗಳ ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತರಬೇತಿಗಳನ್ನು ಆಯೋಜಿಸಲು ಸಚಿವ ಪಾಟೀಲ ತಿಳಿಸಿದರು.
           ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತಮಾಡಿ ಮುಂಗಾರು ಹಂಗಾಮಿನಲ್ಲಿ 271989 ಹೆ, ಹಿಂಗಾರು ಹಂಗಾಮಿನಲ್ಲಿ 247448 ಹೆ ಹಾಗೂ ಬೇಸಿಗೆ ಹಂಗಾಮಿನಲ್ಲಿ 32113 ಹೆ. ಕ್ಷೇತ್ರದಲ್ಲಿ ವಿವಿಧ ಕೃಷಿ ಬೆಳೆಗಳು ಬಿತ್ತನೆಯಾಗಿರುವುದಾಗಿ ತಿಳಿಸಿದರು. ಮಾನ್ಯ ಕೃಷಿ ಸಚಿವರು ಜಿಲ್ಲೆಯ ಬೇಡಿಕೆ ಅನುಸಾರ ಈವರೆಗೆ ಯಾವುದೇ ಕೊರತೆಯಾಗದಂತೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ವ್ಯವಸ್ಥೆಯನ್ನು ಮಾಡಿದ್ದು, ಮುಂಗಾರು ಹಂಗಾಮಿನಲ್ಲಿ 112845 ಮೆ.ಟನ್ ರಷ್ಟು ಹಾಗೂ ಹಿಂಗಾರು /ಬೇಸಿಗೆ ಹಂಗಾಮಿನಲ್ಲಿ 58927 ಮೆ.ಟನ್ ನಷ್ಟು ವಿವಿಧ ರಸಗೊಬ್ಬರಗಳನ್ನು ಜಿಲ್ಲೆಗೆ ಸರಬರಾಜಾಗಿರುವುದಾಗಿ ಯಾವುದೇ ಕೊರತೆ ಇಲ್ಲವೆಂದು ತಿಳಿಸಿದರು.
           ನಕಲಿ ಹಾಗೂ ಕಳಪೆ ಕೃಷಿ ಪರಿಕರಗಳನ್ನು ಮಾರಾಟ ಮಾಡುತ್ತಿದ್ದಲ್ಲಿ ಅಂತಹವನ್ನು ಪತ್ತೆ ಹಚ್ಚಿ ನಿರ್ಧಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈವರೆಗೆ ಜಿಲ್ಲೆಯಲ್ಲಿ 17 ಪ್ರಕರಣಗಳಲ್ಲಿ ಸಂಶಯಾಸ್ಪದ, ಕಳಪೆ ಮತ್ತು ಕಾನೂನಿನ ಉಲ್ಲಂಘನೆ ಮಾಡಿರುವ ಬಗ್ಗೆ ಪರಿಕರ ಜಪ್ತು ಮಾಡಿ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು. ಒಂದು ವೇಳೆ ಅಧಿಕೃತ ಕೃಷಿ ಪರಿಕರ ವಿತರಕರು ಕಳಪೆ, ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ಅಂತವರ ಪರವಾನಿಗೆಯನ್ನು ಅಮಾನತ್ತು ಮಾಡಿ ಮುಂದಿನ ಕ್ರಮ ವಹಿಸಲಾಗುವುದೆಂದು ಎಚ್ಚರಿಸಿದರು.
         ಸಭೆಯಲ್ಲಿ ಕೃಷಿ ಉಪನಿರ್ದೇಶಕರಾದ ಎಸ್.ಬಿ.ಕೊಂಗವಾಡ, ಆರ್.ಜಿ.ನಾಗಣ್ಣವರ, ಜಾಗೃತಿ ದಳದ ಸಹಾಯಕ ನಿರ್ದೇಶಕ ಎಸ್.ಬಿ.ಹಳ್ಳೊಳ್ಳಿ, ಕೃಷಿ ಸಹಾಯಕ ನಿರ್ದೇಶಕರಾದ ಟಿ.ಪಿ.ಲಂಬಾಣಿ, ಅಶೋಕ ತಿರಕನ್ನವರ, ಸಿದ್ದಪ್ಪ ಪಟ್ಟಿಹಾಳ, ಸತೀಶ ಮಾವಿನಕೊಪ್ಪ, ಬಿ.ವಿ.ದಾಸರ, ಆರ್.ಬಿ.ಬಿದರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 
ಛಾಯಾಚಿತ್ರ ಲಗತ್ತಿಸಿದೆ. 4

*53 ವರ್ಷದ ಮಹಿಳೆ ಕಾಣೆ*
-------------------
ಬಾಗಲಕೋಟೆ: ಮಾರ್ಚ 21 (ಕರ್ನಾಟಕ ವಾರ್ತೆ) : ಮುಧೋಳ ತಾಲೂಕಿನ ಮಳಲಿ ಗ್ರಾಮದ ತೋಟದ ವಸ್ತಿ ಸಿದ್ದಪ್ಪ ನರಸಿಂಗ ಘೋರ್ಪಡೆ ಅವರ ತಾಯಿ ಬಂದವ್ವ ನರಸಿಂಗ ಘೋರ್ಪಡೆ (53) ಜುಲೈ 8, 2021 ರಂದು ಬೆಳಗಿನ ಜಾವ ತೋಟದ ಮನೆಯಿಂದ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
          ಕಾಣೆಯಾದ ಮಹಿಳೆ 5 ಅಡಿ ಎತ್ತರ, ಸಾದಗಪ್ಪು ಮೈಬಣ್ಣ, ಮೈಮೇಲೆ ಬೂದು ಬಣ್ಣದ ಸೀರೆ, ಕೆಂಪು ಜಂಪರ್ ಧರಿಸಿದ್ದು, ಹಣೆಯ ಮೇಲೆ ಹಣಚಿಬೊಟ್ಟು ಇರುತ್ತದೆ. ಕನ್ನಡ ಮತ್ತು ಮರಾಠಿ ಮಾತನಾಡುತ್ತಿದ್ದು, ಈ ಚಹರೆವುಳ್ಳ ಮಹಿಳೆ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಬಾಗಲಕೋಟೆ ಕಂಟ್ರೋಲ್ ರೂಮ್ (08354-235079, 9480803900) ಜಮಖಂಡಿ ಡಿಎಸ್‍ಪಿ ಕಾರ್ಯಾಲಯ (08353-220114, 9480803921), ವೃತ್ತ ನಿರೀಕ್ಷಕರ ಕಾರ್ಯಾಲಯ (08350-280103, 9480803936), ಮುಧೋಳ ಪೊಲೀಸ್ ಠಾಣೆ (08350-280133, 9480803960) ಕರೆ ಮಾಡುವಂತೆ ಮುಧೋಳ ಪೊಲೀಸ್ ಠಾಣೆಯ ಪಿಎಸ್‍ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಛಾಯಾಚಿತ್ರ ಲಗತ್ತಿಸಿದೆ. 5

Apr 05, 2021 at 9:48 am

ಬಸು ಚಟರ್ಜಿ On the birth anniversary of Basu Chatterjee
ಸಿನಿಮಾ ಎಂದರೆ ಆಡಂಭರ,  ಇಲ್ಲವೇ ಬಡತನದ ಬವಣೆ ಎಂಬ ಎರಡು ಚಿಂತನೆಗಳನ್ನೇ ಬಿಂಬಿಸುವವರ 
ಮಧ್ಯೆ ಮಧ್ಯಮ ವರ್ಗದ ಚೆಲುವು ಒಲವುಗಳನ್ನು ಚಲನಚಿತ್ರಗಳಲ್ಲಿ ತಂದು ಕೊಟ್ಟವರಲ್ಲಿ ಬಸು ಚಟರ್ಜಿ ಪ್ರಮುಖರು. 
ಬಸು ಚಟರ್ಜಿ 1930ರ ಜನವರಿ 10 ರಂದು ರಾಜಾಸ್ಥಾನದ ಅಜ್ಮೀರ್ ನಗರದಲ್ಲಿ ಜನಿಸಿದರು.
ಬಸು ಚಟರ್ಜಿ ಅವರು ಪ್ರಸಿದ್ಧ ಬ್ಲಿಟ್ಜ್ ಪತ್ರಿಕೆಯಲ್ಲಿನ ಕಥಾನಕಗಳ ಚಿತ್ರಕಾರರಾಗಿ ಮತ್ತು ವ್ಯಂಗ್ಯಚಿತ್ರಕಾರರಾಗಿ
ಹದಿನೆಂಟು ವರ್ಷಕಾಲ ಕೆಲಸಮಾಡಿದರು. ಆ ನಂತರದಲ್ಲಿ ಅವರು ಚಿತ್ರರಂಗದತ್ತ ಕಣ್ಣುಹಾಯಿಸಿದರು.
ಬಸು ಚಟರ್ಜಿ ರಾಜ್ ಕಫೂರ್ ಮತ್ತು ವಹೀದಾ ರಹಮಾನ್ ನಟಿಸಿದ ತೀಸ್ರೀ ಕಸಮ್ ಚಿತ್ರಕ್ಕೆ ಬಸು ಭಟ್ಟಾಚಾರ್ಯ
ಅವರಿಗೆ ಸಹಾಯಕರಾಗಿ ದುಡಿದರು. ಆ ಚಿತ್ರ ರಾಷ್ಟ್ರ ಪ್ರಶಸ್ತಿಗಳಿಸಿತು. 
1969 ರಲ್ಲಿ ಬಸು ಚಟರ್ಜಿ ಅವರು 'ಸಾರಾ ಆಕಾಶ್' ಚಿತ್ರಕಥೆ ಬರೆದು ನಿರ್ದೇಶಿಸಿದರು. ಇದು ಉತ್ತಮ ಚಿತ್ರಕಥೆಗಾಗಿ
  ಫಿಲಂಫೇರ್ ಪ್ರಶಸ್ತಿ ತಂದುಕೊಟ್ಟಿತು. ಬಸು ಚಟರ್ಜಿ ಅವರು ಅಮಿತಾಬ್ ಬಚ್ಚನ್ , ರಾಜೇಶ್ ಖನ್ನಾ,
ದೇವ್ ಆನಂದ್ ಮತ್ತು ಮಿಥುನ್ ಚಕ್ರವರ್ತಿ ಮುಂತಾದವರನ್ನು ಹೊಸ ರೀತಿಯ ಅವತಾರಗಳಲ್ಲಿ ಪ್ರಸ್ತುತಪಡಿಸಿದರು.
ಅಮೋಲ್ ಪಾಲೇಕರ್, ಅಶೋಕ್ ಕುಮಾರ್, ಉತ್ಪಲ್ ದತ್, ಅಸ್ರಾಣಿ, ವಿದ್ಯಾಸಿನ್ಹಾ, ಜರೀನಾ ವಾಹಾಬ್ ಮುಂತಾದ
ಅನೇಕ ಪ್ರತಿಭೆಗಳು ಇವರ ಚಿತ್ರಗಳಲ್ಲಿ ಬೆಳಗಿದ್ದು ಮರೆಯುವಂತೆಯೇ ಇಲ್ಲ.
ಚಿತ್ ಚೋರ್, ರಜನಿ, ಬಾತೋ ಬಾತೋ ಮೇ, ಉಸ್ ಪಾರ್, ಛೋಟಿ ಸಿ ಬಾತ್ , ಖಟ್ಟಾ-ಮೀಠಾ, ಪಿಯಾ ಕಾ ಘರ್,
ಚಕ್ರವ್ಯೋಹ, ಶೌಕೀನ್, ಏಕ್ ರುಕಾ ಹುವಾ ಫೈಸಲಾ, ಜೀನಾ ಯಹಾ, ಪ್ರಿಯತಂ, ಸ್ವಾಮೀ, ದುರ್ಗಾ, ಅಪ್ನೆ ಪರಾಯ,
ಕಮಲಾ ಕಿ ಮೌತ್, ಮನ ಪಸಂದ್, ಹಮಾರಿ ಬಹು ಅಲ್ಖಾ, ಚಮೇಲಿ ಕಿ ಶಾದಿ ಮುಂತಾದ ಸೊಬಗಿನ  ಚಿತ್ರಗಳನ್ನು
ಬಸು ದಾ ನಿರ್ದೇಶಿಸಿದ್ದರು.
ಐಫಾ ಜೀವಮಾನ ಸಾಧನೆ ಪ್ರಶಸ್ತಿ, ರಾಷ್ಟ್ರೀಯ ಉತ್ತಮ ಚಿತ್ರ ಪ್ರಶಸ್ತಿ (ದುರ್ಗಾ ಸಿನಿಮಾಕ್ಕೆ) , ಉತ್ತಮ ನಿರ್ದೇಶಕ ಪ್ರಶಸ್ತಿ
(ಕಮಲಾ ಕಿ ಮೌತಾ ಸಿನಿಮಾ) ಸೇರಿದಂತೆ ಹಲವಾರು ಗೌರವಗಳು ಬಸು ಚಟರ್ಜಿ ಅವರಿಗೆ ಸಂದಿದ್ದವು.
ಬಸು ಚಟರ್ಜಿ ಅವರು 2020ದ ಜೂನ್ 4ರಂದು ನಿಧನರಾದರು.  ಸರಳತೆಯಲ್ಲಿ ಸಾಮಾನ್ಯತೆಯನ್ನು ಬಿಂಬಿಸಿ
ಎಲ್ಲರ ಮನಮುಟ್ಟುವುದು ಸೂಕ್ಷ್ಮ ಸಂವೇದನೆಯುಳ್ಳ ಸೃಜನಶೀಲ ಮನಗಳಿಗೆ ಮಾತ್ರಾ ಸಾಧ್ಯ.  ಅಂತಹ ಅಪೂರ್ವ
ಚೇತನವಾಗಿ ಬಸು ಚಟರ್ಜಿ ನಮ್ಮ ಮನಗಳಲ್ಲಿ ಸವಿನೆನಪಾಗುಳಿದಿರುವವರು. 
(ನಮ್ಮ'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ
www.sallapa.comನಲ್ಲಿಯೂ ಲಭ್ಯ.  ನಮಸ್ಕಾರ).

-Tiru Sridhara

Apr 05, 2021 at 9:48 am

WWF-India
India is home to 70% of the world's tiger population. However, they face a multitude of threats such as habitat loss,
habitat fragmentation, poaching and illegal wildlife trade.
WWF India is working to protect and conserve tigers in India. Support us to save these precious species.
Let's ensure a safe future for them. Take our survey today and raise ₹20 to protect tigers in India!
Every rupee counts towards ensuring their survival.

ವಿಶ್ವದ ಹುಲಿ ಜನಸಂಖ್ಯೆಯ 70% ಭಾರತವು ನೆಲೆಯಾಗಿದೆ. ಆದಾಗ್ಯೂ, ಅವರು ಆವಾಸಸ್ಥಾನದ ನಷ್ಟ,
ಆವಾಸಸ್ಥಾನದ ವಿಘಟನೆ, ಬೇಟೆಯಾಡುವುದು ಮತ್ತು ಅಕ್ರಮ ವನ್ಯಜೀವಿ ವ್ಯಾಪಾರದಂತಹ
ಬಹುಸಂಖ್ಯೆಯ ಬೆದರಿಕೆಗಳನ್ನು ಎದುರಿಸುತ್ತಾರೆ.
WWF ಇಂಡಿಯಾ ಭಾರತದಲ್ಲಿ ಹುಲಿಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಕೆಲಸ ಮಾಡುತ್ತಿದೆ.
ಈ ಅಮೂಲ್ಯ ಜಾತಿಗಳನ್ನು ಉಳಿಸಲು ನಮಗೆ ಬೆಂಬಲ ನೀಡಿ.
ಅವರಿಗೆ ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸಿಕೊಳ್ಳೋಣ. ಇಂದು ನಮ್ಮ ಸಮೀಕ್ಷೆಯನ್ನು ತೆಗೆದುಕೊಳ್ಳಿ
ಮತ್ತು ಭಾರತದಲ್ಲಿ ಹುಲಿಗಳನ್ನು ರಕ್ಷಿಸಲು ₹20 ಸಂಗ್ರಹಿಸಿ! ಪ್ರತಿ ರೂಪಾಯಿಯು ಅವರ
ಬದುಕುಳಿಯುವಿಕೆಯನ್ನು ಖಚಿತಪಡಿಸಿಕೊಳ್ಳಲು ಎಣಿಕೆ ಮಾಡುತ್ತದೆ.

Courtesy: FB

Apr 05, 2021 at 9:48 am

Nature and Wildlife Photoshooters Rakshith Anand Rao Jakati
|| Red-Vented Bulbul ||

ಕಪ್ಪು ಕ್ರೆಸ್ಟ್ ಮತ್ತು ಬಿಳಿ ರಂಪ್ ಹೊಂದಿರುವ ಕಪ್ಪು, ನಯವಾದ, ಮಧ್ಯಮ ಗಾತ್ರದ ಹಕ್ಕಿ.
ಬಾಲದ ಕೆಳಗಿರುವ ಕೆಂಪು ಬಣ್ಣವನ್ನು ಸಾಮಾನ್ಯವಾಗಿ ನೋಡಲು ಕಷ್ಟವಾಗುತ್ತದೆ. ಹಣ್ಣು,
ಹೂವಿನ ಮೊಗ್ಗುಗಳು ಮತ್ತು ಕೀಟಗಳನ್ನು ತಿನ್ನುತ್ತದೆ. ಎದ್ದುಕಾಣುವ ಮತ್ತು
ಕೆಲವೊಮ್ಮೆ ಗ್ರೆಗೇರಿಯಸ್, ಸಾಮಾನ್ಯವಾಗಿ ಮರಗಳಲ್ಲಿ ಎತ್ತರದಲ್ಲಿ ಕಂಡುಬರುತ್ತದೆ
ಅಥವಾ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಂತಿಗಳ ಮೇಲೆ ಕುಳಿತಿರುತ್ತದೆ;
ಸಾಮಾನ್ಯವಾಗಿ ದಟ್ಟ ಅರಣ್ಯದ ಬದಲಿಗೆ ಕುರುಚಲು ಅಂಚಿನ ಆವಾಸಸ್ಥಾನಕ್ಕೆ ಆದ್ಯತೆ
ನೀಡುತ್ತದೆ. ಕರೆಗಳು ವಿವಿಧ ಚಿರ್ಪ್ಸ್ ಮತ್ತು ಸೀಟಿಗಳನ್ನು ಒಳಗೊಂಡಿರುತ್ತವೆ. ಸ್ಥಳೀಯ ದಕ್ಷಿಣ
ಮತ್ತು ಆಗ್ನೇಯ ಏಷ್ಯಾ. ಹವಾಯಿ ಸೇರಿದಂತೆ ಹಲವಾರು ಪಾಲಿನೇಷ್ಯನ್ ದ್ವೀಪಗಳು, ಕುವೈತ್,
ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಓಮನ್ ಮತ್ತು ಪಾಲಿನೇಷ್ಯನ್ ದ್ವೀಪಗಳಿಗೆ
ಪರಿಚಯಿಸಲಾಗಿದೆ.


ಸ್ಥಳ: ಹೊಸಪೇಟೆ, ಹಂಪಿ, ಕರ್ನಾಟಕ
DOP: ಡಿಸೆಂಬರ್-2021
ಪೋಸ್ಟ್ ದಿನಾಂಕ: 01 ಜನವರಿ 2022
NIKON Z 6_2
ನಿಕ್ಕೋರ್ 200-500mm F5.6 ಲೆನ್ಸ್
F5.6 1/640 s 500.00mm
ISO 2500
ವೈಟ್ ಬ್ಯಾಲೆನ್ಸ್ ಮ್ಯಾನುಯಲ್ ಫ್ಲ್ಯಾಷ್ ಇಲ್ಲ

Apr 05, 2021 at 9:48 am


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img