ಸರಕಾರ ಮತ್ತು ರೈತರ ನಡುವಿನ ಕೊಂಡಿಯಾಗಿ ಭಾರತೀಯ ಕಿಸಾನ್ ಸಂಘ ಉತ್ತಮವಾಗಿ ಕಾರ್ಯನಿರ್ವಹಣೆ , ಸಚಿವ ವಿ. ಸುನಿಲ್ ಕುಮಾರ್
Published By: ಆನಂದ್ ರಾಠೋಡ ಬಾಗಲಕೋಟ ತಾಲೂಕ ರಿಪೋರ್ಟ್
Last Updated Date: 12-Feb-2023

ಉಡುಪಿ - : ಸರ್ಕಾರ ಮತ್ತು ರೈತರ ನಡುವೆ ಕೊಂಡಿಯಾಗಿ ಭಾರತೀಯ ಕಿಸಾನ್ ಸಂಘ ಕೆಲಸ ಮಾಡುತ್ತಿದೆ. ಸರ್ಕಾರದ ಯಾವುದೇ ಯೋಜನೆಯನ್ನು ರೈತರ ತನಕ ತಲುಪಿಸುವ ಕಾರ್ಯ ಮಾಡಿ ರೈತರಿಗೆ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.ಈಗ ಆಯೋಜಿಸಿದ ಕಾರ್ಯ ಕ್ರಮ ರೈತರ ಬೆಳೆ ಬಗ್ಗೆ ಅಲ್ಲದೆ ಕರಕುಶಲ ವಸ್ತುಗಳ, ಕಾಡುತ್ಪನ್ನ ಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಹಾಗೂ ರೈತರಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತದೆ ಎಂದು ಇಂಧನ ಸಂಸ್ಕ್ರತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು. ಅವರು ಭಾರತೀಯ ಕಿಸಾನ್ ಸಂಘ,ಕರ್ನಾಟಕ ಪ್ರದೇಶ ಉಡುಪಿ ಜಿಲ್ಲೆ ವತಿಯಿಂದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಶ್ರೀಮತಿ ಶಾಲಿನಿ ಜಿ ಶಂಕರ್ ತೆರೆದ ಸಭಾಂಗಣದಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ರೈತ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಮಾತನಾಡಿ ನಮ್ಮ ರೈತರು ದೇಶದ ಬೆನ್ನೆಲುಬು ಎನ್ನುವುದರಲ್ಲಿ ಎರಡು ಮಾತಿಲ್ಲ ಮಾತ್ರವಲ್ಲದೆ ಮಾನವನ ಜೀವನಕ್ಕೆ ಅತ್ಯಗತ್ಯ ವಾದ ಉತ್ಪನ್ನಗಳ ಉತ್ಪಾದಕರು. ದ.ಕ ಜಿಲ್ಲೆಯ ಹಲವು ಕಡೆ ಅಡಿಕೆ ಬೆಳೆ ಕೊರೊನಾ ನಂತರ ಇಳಿಮುಖವಾಗಿದೆ ಎಂದರು. ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ,ಸೀತಾರಾಮ ಗಾಣಿಗ ವಾಸುದೇವ ಭಟ್ ರಾಮಾಚಂದ್ರ ಶ್ರೀಮತಿ ನಿರ್ಮಲ ನವೀನ್ ಚಂದ್ರ ಜೈನ ಮುಂತಾದವರು ಉಪಸ್ಥಿತರಿದ್ದರು.
