logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

Advanced Search

ಕಿತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಬಾಬಾಸಾಹೇಬ ಪಾಟೀಲ ಹುಟ್ಟುಹಬ್ಬದ ನಿಮಿತ್ಯ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಹಂಚಲಾಯಿತು.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕಿತ್ತೂರು ಶಾಸಕರಾದ ಶ್ರೀ ಬಾಬಾಸಾಹೇಬ್ ಪಾಟೀಲ ಅವರ ಹುಟ್ಟು ಹಬ್ಬದ ನಿಮಿತ್ಯ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲಗಳ  ಕಿಟ್ಗಳನ್ನ  ಹಂಚಲಾಯಿತು.ಈ ಸಂದರ್ಭದಲ್ಲಿ ಹುಣಸಿಕಟ್ಟಿ ಗ್ರಾಮ ಪಂಚಾಯತಿ ಸದಸ್ಯರಾದ ಕಲ್ಮೇಶ ನಾಡಗೌಡರು, ಸಚಿನ್ ಯರಗೊಪ್ಪ, ಹಾಗೂ ಗ್ರಾಮದ ಮುಖಂಡರಾದ ಮೆಹಬೂಬ್ ಗಡಾದ ಹಾಗೂ ಗ್ರಾಮದ ಪ್ರಮುಖರು ಯುವಕರು ಮತ್ತಿತರು ಉಪಸ್ಥಿತರಿದ್ದರು.

Apr 05, 2021 at 9:48 am

ಆಸರೆ ಫೌಂಡೇಶನ ಹಾಗೂ ACF ಕರ್ನಾಟಕ ವತಿಯಿಂದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಲನಚಿತ್ರ ನಟ ಅಕ್ಷಯ ಚಂದ್ರಶೇಖರ್ ಇವರಿಂದ ಚಾಲನೆ ನೀಡಲಾಯಿತು.
ದಿನಾಂಕ 18.06.2023 ರಂದು ಆಸರೆ ಫೌಂಡೇಶನ್ ಇಂದ ಕೆಕೆ ಕೊಪ್ಪ ಧರ್ಮಪುರ ಗೋಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾದ ಚಲನಚಿತ್ರ ನಟ ಅಕ್ಷಯ್ ಚಂದ್ರಶೇಖರ್ ಅವರು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಅವರ ಜೊತೆಗೆ ಫಿಟ್ ಕರ್ನಾಟಕ ಮಿಷಿನ್ ಅಧ್ಯಕ್ಷರಾದ ಪೂಜಾ ಗಣೇಶ್, ಎ ಸಿ ಎಫ್ ಅಧ್ಯಕ್ಷರಾದ ಬಿ ಎಚ್ ಜಮಾದಾರ್, ಸಂಗೊಳ್ಳಿ ರಾಯಣ್ಣ ಕಾಲೇಜ್ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕೆಎಲ್ಇ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗ್ರಾಮದ ಮುಖಂಡರು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಜೊತೆಗೆ ಪರಿಸರ ಬಗ್ಗೆ ಜಾಗೃತಿ ಹಾಗೂ ಮರದ ಮಹತ್ವ ಕಾರ್ಯಕ್ರಮದಲ್ಲಿ ವಿವರಣೆ ಮಾಡಲಾಯಿತು. ಆಸರೆ ಫೌಂಡೇಶನ್ ಅಧ್ಯಕ್ಷರಾದ ಆಕಾಶ್ ಚಂದ್ರಶೇಖರ್, ಉಪಾಧ್ಯಕ್ಷರಾದ ರಾಜೇಂದ್ರ ಪಾಟೀಲ್ ಹಾಗೂ ಸದಸ್ಯರು ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Apr 05, 2021 at 9:48 am

ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸ್ಲೆನ್ಸ್ ಶಾಲೆಯ ಸ್ಕೇಟಿಂಗ್ ಮಕ್ಕಳಿಂದ ಸಾಮಾಜಿಕ ಜಾಗೃತಿ ರ‍್ಯಾಲಿ.
ಹಳಿಯಾಳ -: ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟನ್ ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಸುಮಾರು ೨೫ ಶಿಕ್ಷಿತ ಸ್ಕೇಟಿಂಗ್ ಮಕ್ಕಳಿಂದ ಹಳಿಯಾಳ ಪಟ್ಟಣದಲ್ಲಿ ದಿನಾಂಕ ೧೮ ಮೇ ೨೦೨೩ ರಂದು ಸಾಮಾಜಿಕ ಕಳಕಳಿಯ ನಿಮಿತ್ಯ ಪರಿಸರ ಸಂರಕ್ಷಣೆ ಮತ್ತು ನೀರಿನ ಮಿತವ್ಯಯದ ಕುರಿತಾಗಿ ಜಾಗೃತಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಯಿತು. ಸ್ಕೇಟಿಂಗ್ ಮಕ್ಕಳ ರ‍್ಯಾಲಿಯು ಕೈ ಫಲಕಗಳೊಂದಿಗೆ ಮತ್ತು ಸ್ಥಳೀಯ ಆರಕ್ಷಕ ದಳದ ನೆರವಿನೊಂದಿಗೆ ಸಂಸ್ಥೆಯಿಂದ ಪ್ರಾರಂಭಗೊಂಡು ಯಲ್ಲಾಪೂರ ನಾಕಾ, ಶಿವಾಜಿ ವೃತ್ತ ಮತ್ತು ಸಂತೆಬೀದಿ ಮುಖೇನ ಹಾಯ್ದು ಮರಳಿ ಶಿವಾಜಿ ವೃತ್ತದಲ್ಲಿ ಕೊನೆಗೊಂಡಿತು. ಈ ರ‍್ಯಾಲಿಯಲ್ಲಿ ಸ್ಥಳೀಯರು,ಪಾಲಕ ವೃಂದ ಶ್ರೀ ವಿ.ಆರ್.ಡಿ.ಎಮ್.ಟ್ರಸ್ಟ್ನ ಆಡಳಿತಾಧಿಕಾರಿಗಳಾದ ಶ್ರೀ ಪ್ರಕಾಶ ಪ್ರಭು, ಶಾಲೆಯ ಪ್ರಾಂಶುಪಾಲರಾದ ಡಾ||ಸಿ.ಬಿ.ಪಾಟೀಲ ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಪಾಲ್ಗೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯ ರೋಲರ್ ಸ್ಕೇಟಿಂಗ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದಿಲೀಪ ಹಣಬರ, ಶ್ರೀ ಸಂಕೇತ ಮತ್ತು ಇನ್ನಿತರರು ಶಾಲೆಯ ಮಕ್ಕಳನ್ನು ತರಬೇತುಗೊಳಿಸಿದ್ದರು. ಪೊಲೀಸ್ ವರ್ಲ್ಡ್ ಸುದ್ದಿ ವಾಹಿನಿ. ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸ್ಲೆನ್ಸ್ ಶಾಲೆಯ ಸ್ಕೇಟಿಂಗ್ ಮಕ್ಕಳಿಂದ ಸಾಮಾಜಿಕ ಜಾಗೃತಿ ರ‍್ಯಾಲಿ ಹಳಿಯಾಳದ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟನ್ ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಸುಮಾರು ೨೫ ಶಿಕ್ಷಿತ ಸ್ಕೇಟಿಂಗ್ ಮಕ್ಕಳಿಂದ ಹಳಿಯಾಳ ಪಟ್ಟಣದಲ್ಲಿ ದಿನಾಂಕ ೧೮ ಮೇ ೨೦೨೩ ರಂದು ಸಾಮಾಜಿಕ ಕಳಕಳಿಯ ನಿಮಿತ್ಯ ಪರಿಸರ ಸಂರಕ್ಷಣೆ ಮತ್ತು ನೀರಿನ ಮಿತವ್ಯಯದ ಕುರಿತಾಗಿ ಜಾಗೃತಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಯಿತು. ಸ್ಕೇಟಿಂಗ್ ಮಕ್ಕಳ ರ‍್ಯಾಲಿಯು ಕೈ ಫಲಕಗಳೊಂದಿಗೆ ಮತ್ತು ಸ್ಥಳೀಯ ಆರಕ್ಷಕ ದಳದ ನೆರವಿನೊಂದಿಗೆ ಸಂಸ್ಥೆಯಿಂದ ಪ್ರಾರಂಭಗೊಂಡು ಯಲ್ಲಾಪೂರ ನಾಕಾ, ಶಿವಾಜಿ ವೃತ್ತ ಮತ್ತು ಸಂತೆಬೀದಿ ಮುಖೇನ ಹಾಯ್ದು ಮರಳಿ ಶಿವಾಜಿ ವೃತ್ತದಲ್ಲಿ ಕೊನೆಗೊಂಡಿತು. ಈ ರ‍್ಯಾಲಿಯಲ್ಲಿ ಸ್ಥಳೀಯರು,ಪಾಲಕ ವೃಂದ ಶ್ರೀ ವಿ.ಆರ್.ಡಿ.ಎಮ್.ಟ್ರಸ್ಟ್ನ ಆಡಳಿತಾಧಿಕಾರಿಗಳಾದ ಶ್ರೀ ಪ್ರಕಾಶ ಪ್ರಭು, ಶಾಲೆಯ ಪ್ರಾಂಶುಪಾಲರಾದ ಡಾ||ಸಿ.ಬಿ.ಪಾಟೀಲ ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಪಾಲ್ಗೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯ ರೋಲರ್ ಸ್ಕೇಟಿಂಗ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದಿಲೀಪ ಹಣಬರ, ಶ್ರೀ ಸಂಕೇತ ಮತ್ತು ಇನ್ನಿತರರು ಶಾಲೆಯ ಮಕ್ಕಳನ್ನು ತರಬೇತುಗೊಳಿಸಿದ್ದರು.

Apr 05, 2021 at 9:48 am

ಹಳಿಯಾಳ ಪೊಲೀಸ್ ಠಾಣಾ ಪ್ರಕಟಣೆ.
ಹಳಿಯಾಳ -: ಕರ್ನಾಟಕ ವಿಧಾನಸಭೆ ಚುನಾವಣೆ-2023ರ್ ಮತ ಎಣಿಕೆಯು ದಿನಾಂಕ 13.05.2023 ರಂದು ನಡೆಯಲಿದ್ದು. ಈ ವೇಳೆ ಹಳಿಯಾಳ ಪೊಲೀಸ್ ಠಾಣೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಮತ ಎಣಿಕೆಯ ದಿನನೆಂದು ಜಿಲ್ಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿರುತ್ತದೆ. ದಿನಾಂಕ.13/05/2023ರ್ ಬೆಳಿಗ್ಗೆ 05.00 ಗಂಟೆಯಿಂದ ಆ ದಿನ ಮಧ್ಯರಾತ್ರಿ12.00 ರವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ. 05 ಕಿಂತ ಹೆಚ್ಚು ಜನರು ಒಂದೇ ಜಾಗದಲ್ಲಿ ಗುಂಪು ಸೇರುವುದು. ಮೆರವಣಿಗೆ. ಸಾರ್ವಜನಿಕ ಸಭೆ ಸಮಾರಂಭ. ವಿಜಯೋತ್ಸವ ಆಚರಣೆ. ಬಹಿರಂಗ ಘೋಷಣೆ. ಕೂಗುವುದು. ಪಟಾಕಿ ಸಿಡಿಸುವುದು ಹಾಗೂ ಯಾವುದೇ ಪ್ರತಿಭಟನೆಗಳಿಗೆ ಅವಕಾಶವಿರುವುದಿಲ್ಲ. ನಿಷೇಧಾಜ್ಞೆಯ್ ಅವಧಿಯಲ್ಲಿ ಯಾವುದೇ ಆಯುಧಗಳು. ದೇಹಕ್ಕೆ ಅಪಾಯವುಂಟು ಮಾಡುವ ಬಡಿಗೆ. ಲಾರಿ. ಖಡ್ಗ. ಚೂರಿ. ಸಹಿತ ಯಾವುದೇ ಮಾರಕಾಸ್ತ್ರಗಳು. ಸ್ಪೋಟಕ ವಸ್ತುಗಳು ಸಾರ್ವಜನಿಕರು ಇಟ್ಟುಕೊಳ್ಳುವುದು ಅಪಹಾಧವಾಗಿರುತ್ತದೆ ಹಾಗೂ ನಿಷೇಧಾಜ್ಞೆಯ ಅವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಮಧ್ಯ ಮಾರಾಟಕ್ಕೆ ಅವಕಾಶವಿರುವುದಿಲ್ಲ. ಇಂದು ಹಳಿಯಾಳ ಪೊಲೀಸ್ ಠಾಣೆಯ ಪ್ರಕಟಣೆಯಾಗಿದೆ.

Apr 05, 2021 at 9:48 am

ಮಾತು ಸಾಧನೆ ಆಗಬಾರದು ಸಾಧನೆ ಮಾತಾಗಬೇಕು. ಎಂದು ಮತ ಪ್ರಚಾರ ಆರ್ ವಿ ದೇಶಪಾಂಡೆ.
ಕ್ಷೇತ್ರದ ಜನತೆಯ ಪ್ರೀತಿ‌, ಪ್ರೋತ್ಸಾಹ, ಆಶೀರ್ವಾದ, ಬೆಂಬಲಕ್ಕೆ ಬೆಲೆ ಕಟ್ಟಲಾಗದು.ಹಳಿಯಾಳ ವಿಧಾನಸಭಾ ಕ್ಷೇತ್ರದ ಬಿ.ಕೆ. ಹಳ್ಳಿ,ತತ್ವಣಗಿ,ಚಿಬ್ಬಲಗೇರಿ ಹಾಗೂ ಸಾಂಬ್ರಾಣಿ ಗ್ರಾ ಮದ ಜನತೆಯೊಂದಿಗೆ ಆರ್ ವಿ ದೇಶಪಾಂಡೆಯವರು ಚುನಾವಣಾ ಪ್ರಚಾರ ಸಭೆಯನ್ನು ನಡೆಸಿ ಮತಯಾಚನೆ ಮಾಡಿದರು. ಮಾತು ಸಾಧನೆ ಆಗಬಾರದು ಸಾಧನೆ ಮಾತಾಗಬೇಕು,ಸಾಧನೆ ಮಾಡಿದವರು ಜನಮಾನಸದಲ್ಲಿ ಉಳಿಯುತ್ತಾರೆ ಎನ್ನುವ ಉದ್ದೇಶದಿಂದ ಕಳೆದ 5 ವರ್ಷಗಳಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಕೆಲಸಗಳ ಮೂಲಕ ಮುನ್ನೆಡಿಸಿ, ಜನಮಾನಸದಲ್ಲಿ ಉಳಿಯವ ತರಹ ನನ್ನ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಗಳನ್ನು‌ ಕೈಗೊಂಡಿದ್ದೇನೆ. ನಿಮ್ಮೆಲ್ಲರ‌ ಪ್ರೀತಿ, ಪ್ರೋತ್ಸಾಹ,ಬೆಂಬಲ ಯಾವತ್ತಿಗೂ ಕಾಂಗ್ರೆಸ್ ಪಕ್ಷ ಹಾಗೂ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Apr 05, 2021 at 9:48 am

ರೈತರ ಸಾಲ ತುಂಬುವುದು ಎರಡು ತಿಂಗಳು ಮುಂದೊಡಿಕೆ ಮಾಡಿ ಎಂದು ಸರ್ಕಾರಕ್ಕೆ ಮನವಿ.
ರೈತರ ಸಾಲ ತುಂಬುವುದು ಎರಡು ತಿಂಗಳು ಮುಂದೊಡಿಕೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ ಎಂದು ಆರ್ ವಿ ದೇಶಪಾಂಡೆ ಇವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ . ಹೌದು ವೀಕ್ಷಕರೇ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ್ ಆರ್ ವಿ ದೇಶಪಾಂಡೆ ಇವರ ಗೃಹ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಇವರು ಅಲ್ಲಿನ ಸುತ್ತಮುತ್ತಲಿನ ರೈತರ ಸಮಸ್ಯೆಯನ್ನ ನೋಡಿ ಹಾಗೂ ಅನೇಕ ಊರುಗಳಲ್ಲಿ ಜಾತ್ರಾ ಮಹೋತ್ಸವ ಇಟ್ಕೊಂಡಿರುವ ರೈತರು. ಅವರ ಕಷ್ಟ ದುಃಖಗಳನ್ನು ನೋಡಿ ಸರ್ಕಾರಕ್ಕೆ ಎರಡು ತಿಂಗಳ ಕಾಲ ಅವರು ತೆಗೆದುಕೊಂಡ ಸಾಲವನ್ನು ತೀರಿಸಲು ಆರ್ ವಿ ದೇಶಪಾಂಡೆ ಇವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Apr 05, 2021 at 9:48 am

ಕುಡಿದ ನಿಶೆಯಲ್ಲಿ ವ್ಯಾಮೋಹಕ್ಕೆ ಒಳಗಾಗಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ .
ರಾಮದುರ್ಗ -: ತಾಲೂಕಿನ ಸುನ್ನಾಳ ಗ್ರಾಮದಲ್ಲಿ ಒಬ್ಬ ವ್ಯಕ್ತಿಯು ಮೇಲೆ ಹಲ್ಲೆ ನಡೆಸಿದ್ದಾನೆ . ಅಸ್ಲಾಂ ಮುಲ್ಲಾ. ವಯಸ್ಸು (30) ಇತನು ಮೂಲತಃ ರಾಮದುರ್ಗ ನಗರದ ನಿವಾಸಿಯಾಗಿದ್ದು. ಸುನ್ನಾಳ ಗ್ರಾಮದಲ್ಲಿ ನೀರಿನ ಟ್ಯಾಂಕಿನ ಕೆಲಸವನ್ನು ಮಾಡುತ್ತಿದ್ದನು. ಈಗ ಎರಡು ಮೂರು ದಿನಗಳಿಂದ ಅಲ್ಲಿರುವ ಸಿಮೆಂಟನ್ನು ಯಾರಿಗೂ ತಿಳಿಯದ ಹಾಗೆ ಮಾರಾಟ ಮಾಡುತ್ತಿದ್ದನು ಮತ್ತು ಇಂದು ಮುಂಜಾನೆ 12:30 ಗಂಟೆಗೆ ಒರ್ವ ವಿದ್ಯಾರ್ಥಿನಿಯ ಮೇಲೆ ಹಲ್ಲೇಯನ್ನು ನಡೆಸಿದ್ದಾನೆ. ಸುನ್ನಾಳ ಗ್ರಾಮದ ವಿದ್ಯಾರ್ಥಿನಿಯು ತನ್ನ ಶಾಲಾ ವೇಳೆ ಮುಗಿಸಿಕೊಂಡು ಮರಳಿ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಹೋಗುವ ದಾರಿಯಲ್ಲಿ ಇತನು ಮಧ್ಯಪಾನವನ್ನು ಸೇವಿಸಿ ಆ ವಿದ್ಯಾರ್ಥಿಯನ್ನು ಕಂಡು ಕೂಡಲೇ ವ್ಯಾಮೋಹದಿಂದ ಆ ವಿದ್ಯಾರ್ಥಿನಿಯ ಕೈಯನ್ನು ಹಿಡಿದು ಹಿಂಸಾತ್ಮಕವಾಗಿ ವರ್ತಿಸಿದ್ದಾನೆ. ಅದನ್ನು ಕಂಡು ವಿದ್ಯಾರ್ಥಿನಿಯು ಹೆದರಿ ಗಾಬರಿಯಿಂದ ಊರಿನೊಳಗಡೆ ಓಡಿಬಂದು ಅಲ್ಲಿನ ಜನರಿಗೆ ತಿಳಿಸಿದಳು. ನಂತರ ಊರಿನ ಜನರು ಅವನನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗ ತಳಿಸಿದರು. ನಂತರ ಕಡಕೋಳ ಪೊಲೀಸ್ ಠಾಣೆ, ಪೊಲೀಸ್ ಸಿಬ್ಬಂದಿಯು ಆ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆಯನ್ನು ನಡೆಸಿದರು. ನಂತರ ಅವನನ್ನು ಕಡಕೋಳ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋದರು.

Apr 05, 2021 at 9:48 am

ಜನೆವರಿ 26 ಕ್ರಾಂತಿಯ ಕಿಡಿ ಸಂಗೊಳ್ಳಿ ರಾಯಣ್ಣ ಜಯಂತಿ. ಸ್ವತಂತ್ರ ಹೋರಾಟಗಾರನ ದರ್ಶನ ಪಡೆಯಲು ಹರಿದು ಬಂದ ದೇಶಪ್ರೇಮಿಗಳು.
ನಂದಗಡ - ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅತಿ ಸಮೀಪದಲ್ಲಿರುವ ನಂದಗಡ ಹೆಸರು ಕೇಳಿದರೆ ನೆನಪಾಗುವುದು ಹೆಮ್ಮೆಯ ಭಾರತ ಮಾತೆಯ ಕುವರ ಯುದ್ಧದಲ್ಲಿ ಪರಾಕ್ರಮಿ ಬ್ರಿಟಿಷರ ಹುಟ್ಟಡಗಿಸಿದ ವೀರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೆನಪಾಗುವುದು ಅಂತಹ ಮಹಾತ್ಮನನ್ನ ಇದೇ ದಿನ ಜನೆವರಿ 26ರಂದು ಗಲ್ಲಿಗೇರಿಸಿದ ದಿನ .ಬ್ರಿಟಿಷರ ವಿರುದ್ಧ ಕ್ರಾಂತಿಕಿಡಿ ಸಂಗೊಳ್ಳಿ ರಾಯಣ್ಣನನ್ನು ಎಪ್ರಿಲ 8- 1831 ರಂದು ಡೋರು ಕೊಳ್ಳದಲ್ಲಿ ಈಜಾಡುತಿದ್ಧ ರಾಯಣ್ಣನನ್ನು ಮೊಸದಿಂದ ಬ್ರಿಟಿಷರು ಸೆರೆಹಿಡಿದರು. ರಾಯಣ್ಣನ ಸಂಗಡಿಗರು ಆಂಗ್ಲರ ಮೋಸದಿಂದ ಬಂಧಿಸಲ್ಪಟ್ಟರು 1830 ರ ಡಿಸೆಂಬರ್ ಆಂಗ್ಲರ ಕಮಿಷನರ್ ಆಂಡರಸನ್ ನ್ಯಾಯಾಲಯ ದಲ್ಲಿ ರಾಯಣ್ಣನಿಗೆ ಗಲ್ಲು ಶಿಕ್ಷೆ ನಿಡುವಂತೆ ಆದೇಶ ನಿಡಿದರು. ಅಂತಹ ಮಹಾತ್ಮ ನ ಕೊನೆ ಆಸೆಯಂತೆ ತನ್ನನು ಹರಿಸಿ ಬೆಳಸಿ ಉಳಿಸಿಕೊಂಡು ಹೊರಾಡಲು ಅನುವು ಮಾಡಿಕೊಟ್ಟ ನಂದಗಡ ಜನರ ಋಣ ತೀರಿಸಲು ನಂದಗಡ ಗ್ರಾಮದಲ್ಲಿಯೇ ತನ್ನನು ನೇಣಿಗೇರಿಸಿ ಎಂದ ರಾಯಣ್ಣ ಕೊನೆಯ ಆಸೆಯಂತೆ. ಜನೆವರಿ 26/1831ರಂದು ರಾಯಣ್ಣನನ್ನು ಗಲ್ಲಿಗೇರಿಸಲಾಯಿತು.ನಾಡಿಗೆ ಇಂದು ತಿಳಿಯದೆ ಇರುವ ಸಂಗತಿಯೇಂದರೇ ದೇಶದಲ್ಲಿದ್ದ ಬ್ರಿಟಿಷರ ವಿರುದ್ಧ ಹೊರಾಡಿದ ಮೊದಲ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ. ಅಂದು ರಾಯಣ್ಣ ಹಚ್ಚಿದ ನಾಡಿನ ಹೊರಾಟದ ಕಿಚ್ಚು ಎಲ್ಲರಿಗೂ ಮಾದರಿಯಾಗಿದೆ. ಈ ಕ್ರಾಂತಿ ವೀರನ‌ ಆಸೆಯಂತೆ ತನ್ನ ಊರಾದ ನಂದಗಡದಲ್ಲಿ ಆತನ ಸಮಾಧಿ ಕೂಡ ಮಾಡಲಾಗಿದೆ ಆ ಒಂದು ಸಮಾಧಿಗೆ ದರ್ಶನ ಪಡೆಯಲು ದೇಶ ಪ್ರೇಮಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿ ಬಳಗದವರು ದಿನ ನಿತ್ಯವೂ ಬರುತ್ತಾರೆ ಈ ಕ್ರಾಂತಿ ವೀರನಿನ ಧೈರ್ಯ ಸಾಹಸಕ್ಕೆ ಆತನು ನಮ್ಮ ದೇಶಕ್ಕೆ ಕೊಟ್ಟ ಅಮೋಘ ಕೊಡುಗೆಗೆ ನಮ್ಮ ಹೆಮ್ಮೆಯ ಪೊಲೀಸ್ ವರ್ಲ್ಡ್ ಸುದ್ದಿ ವಾಹಿನಿ ಮತ್ತು ಪತ್ರಿಕೆಯ ಕಡೆಯಿಂದ ಮಹಾನ್ ಸ್ವತಂತ್ರ ಹೋರಾಟಗಾರನಿಗೆ ನಮ್ಮ ಕಡೆಯಿಂದ ಶತ ಶತ ಕೋಟಿ ನಮನಗಳು.

Apr 05, 2021 at 9:48 am

ಕರ್ನಾಟಕ ಪೊಲೀಸ್ ಮಹಾ ಸಂಘದ ಅಧಿಕೃತ ವೆಬ್ಸೈಟ್ ಲೋಕಾರ್ಪಣೆ ಸಮಾರಂಭ. ಕರ್ನಾಟಕ ಪೊಲೀಸ್ ಮಹಾ ಸಂಘದ ರಾಜ್ಯದ್ಯಕ್ಷರಾದ ಶ್ರೀ ವಿ . ಶಶಿಧರ್ ಅವರಿಂದ ಲೋಕಾರ್ಪಣೆ .
ಬೆಳಗಾವಿ : ಜ-18 ಬೆಳಗಾವಿಯಲ್ಲಿ ಇಂದು ನಡೆದ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧಿಕೃತ ವೆಬ್ಸೈಟ್ ಅನ್ನು ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ  ಲೋಕಾರ್ಪಣೆ ಮಾಡಲಾಯಿತು .ಈ ಕಾರ್ಯಕ್ರಮದ ಉದ್ಘಾಟಕರಾಗಿ ಕರ್ನಾಟಕ ಪೊಲೀಸ್ ಮಹಾ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ  ವಿ ಶಶಿಧರ ಅವರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು  .ಈ ಸಂದರ್ಭದಲ್ಲಿ  ಶ್ರೀ ವಿ ಶಶಿಧರ್ ಅವರು ಮಾತನಾಡಿ. ಕರ್ನಾಟಕ ಪೊಲೀಸ್ ಮಹಾ ಸಂಘದ ವೆಬ್ಸೈಟ್ ಅನ್ನು  ಲೋಕಾರ್ಪಣೆ ಮಾಡಿರುವ ಮುಖ್ಯ ಉದ್ದೇಶ ಏನೆಂದರೆ  ದೇಶದ ಜನತೆಗೆ ಸಂಘದ ಸಂಪೂರ್ಣ ಮಾಹಿತಿ ಒದಗಿಸಲು .ಕರ್ನಾಟಕ ಪೊಲೀಸ್ ಮಹಾಸಂಘ ಮಾಡುತ್ತಿರುವ ಕಾರ್ಯವೈಕರಿಗಳನ್ನು ತಿಳಿಸಲು ಮತ್ತು ಜನತೆಯ ಕುಂದು ಕೊರತೆಗಳನ್ನು ಹಂಚಿಕೊಳ್ಳಲು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಬಗ್ಗು ಬಡಿಯಲು ಈ ವೆಬ್ಸೈಟ್ ಅನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು . ನಮ್ಮ ಮಹಾಸಂಘವು ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದೆ .ಈ ಹಿನ್ನೆಲೆಯಲ್ಲಿ  ಇಂದು ಕರ್ನಾಟಕ ಪೊಲೀಸ್ ಮಹಾ ಸಂಘದ ವೆಬ್ಸೈಟ್ ಲೋಕಾರ್ಪಣೆ ಮಾಡಲಾಗಿದೆ .ಮತ್ತು  ಶೀಘ್ರದಲ್ಲಿ ಕರ್ನಾಟಕ ಪೊಲೀಸ್ ಮಹಾಸಂಘ ದಿಂದ ನಾಡಿನ ಜನತೆಗೆ .ರೈತರಿಗೆ .ಬಡವರಿಗೆ .ಕೂಲಿ ಕಾರ್ಮಿಕರಿಗೆ .ಮಹಿಳಾ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ .ವಿವಿಧ ಆರ್ಥಿಕ ಸಾಮಾಜಿಕ ಜನಪರ ಯೋಜನೆಗಳನ್ನು ನಾಡಿನ ಜನರ ಮನೆ ತಲುಪುಲಿವೆ ಎಂದು  ಮಾತನಾಡಿದರು .ಹಾಗೆ ಈ ಕಾರ್ಯಕ್ರಮದಲ್ಲಿ ಪೊಲೀಸ್ ವರ್ಲ್ಡ್ ಸುದ್ದಿ ವಾಹಿನಿ ಮತ್ತು ಪತ್ರಿಕೆಯ ಸಿ ಇಓ ಹಾಗೂ ಕರ್ನಾಟಕ ಪೊಲೀಸ್ ಮಹಾ ಸಂಘದ ರಾಜ್ಯ ಆಡಳಿತ ಅಧಿಕಾರಿಗಳು  ಶ್ರೀ   ಬಿ .ಎಚ್. ಜಮಾದಾರ.ಬೆಳಗಾವಿಯ ಕಾರ್ಯದರ್ಶಿ ಕೃಷ್ಣಕುಮಾರ.ಪುರೋಹಿತ. ಮಲ್ಲಿಕ್.ನದಾಫ್ .ಸುನಂದ .ಹಂಪಣ್ಣವರ. ಬಾಬುಲಾಲ್ .ಮೇಹೆಂತಾ. ಅಬ್ದುಲ್. ಯಾದವಾಡ. ಯಶವಂತ. ರಾಠೋಡ.ಮುತ್ತಣ್ಣ .ಕರಾಲೆ.ಗದಗ ವರದಿಗಾರ ಬಸವರಾಜ. ಆರ್. ಪಾಟೀಲ.ಮಹಿಬೂಬಸಾಬ. ನದಾಫ್ .ಹಾಗೂ ಕರ್ನಾಟಕ ಪೊಲೀಸ್ ಮಹಾ ಸಂಘದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು .ಇನ್ನಿತರ ಉಪಸ್ಥಿತರಿದ್ದರು .

Apr 05, 2021 at 9:48 am

ಮೂಡಲಗಿ ತಾಲೂಕಿನ ಯಾದವಾಡದ ಬಳಿ ನಿಂತ ಕಬ್ಬಿನ ಟ್ಯಾಕ್ಟರ್ ಟೈಲರ್ ಗೆ ಬೈಕ್ ಡಿಕ್ಕಿ ಸ್ಥಳದಲ್ಲಿ ಬೈಕ್ ಸವಾರ ಸಾವು .ಕೂಲಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು .
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಬಳಿ ನಿನ್ನೆ ತಡರಾತ್ರಿ 10 ಗಂಟೆ ಸುಮಾರಿಗೆ ನಿಂತ ಟ್ರಾಕ್ಟರ್ ಟೈಲರಗೆ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಟೈಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಮೂಡಲಗಿ ತಾಲೂಕಿನ ಯಾದವಾಡ ರಸ್ತೆಯ ಮಾರ್ಗದಲ್ಲಿ ನಡೆದಿದೆ .ಮೃತಪಟ್ಟ ವ್ಯಕ್ತಿಯು ಮಲ್ಲಪ್ಪ .ಶಂಕ್ರಪ್ಪ .ಕಂಕಣವಾಡಿ .ಇವರು ಯಾದವಾಡದ ನಿವಾಸಿಯಾಗಿದ್ದು ವಯಸ್ಸು (45) ಎಂದು ತಿಳಿದು ಬಂದಿದೆ .ಈತ ತಮ್ಮದೇ ಆದ ಸದಕಿನ ಮಿಲ್ಲನ್ನು ನಡೆಸುತ್ತಿದ್ದರು .ನಿನ್ನೆ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ತಿರುಳುತ್ತಿರುವ ಸಂದರ್ಭದಲ್ಲಿ ಬೈಕ್ ನ ನಿಯಂತ್ರಣ ತಪ್ಪಿ ಕಬ್ಬು ತುಂಬಿ ನಿಂತಿರುವ ಟ್ಯಾಕ್ಟರ್ ಟೈಲರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಅಮೃತಪಟ್ಟಿರುವ ಘಟನೆ ನಡೆದಿದೆ .ಈ ಪ್ರಕರಣ ಕೂಲಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದೆ.

Apr 05, 2021 at 9:48 am


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img