ಜನೆವರಿ 26 ಕ್ರಾಂತಿಯ ಕಿಡಿ ಸಂಗೊಳ್ಳಿ ರಾಯಣ್ಣ ಜಯಂತಿ. ಸ್ವತಂತ್ರ ಹೋರಾಟಗಾರನ ದರ್ಶನ ಪಡೆಯಲು ಹರಿದು ಬಂದ ದೇಶಪ್ರೇಮಿಗಳು.
Published By: ಪರಶುರಾಮ ಕೋಲಕಾರ ಖಾನಾಪುರ ರಿಪೋರ್ಟರ್
Last Updated Date: 26-Jan-2023
ನಂದಗಡ - ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅತಿ ಸಮೀಪದಲ್ಲಿರುವ ನಂದಗಡ ಹೆಸರು ಕೇಳಿದರೆ ನೆನಪಾಗುವುದು ಹೆಮ್ಮೆಯ ಭಾರತ ಮಾತೆಯ ಕುವರ ಯುದ್ಧದಲ್ಲಿ ಪರಾಕ್ರಮಿ ಬ್ರಿಟಿಷರ ಹುಟ್ಟಡಗಿಸಿದ ವೀರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೆನಪಾಗುವುದು ಅಂತಹ ಮಹಾತ್ಮನನ್ನ ಇದೇ ದಿನ ಜನೆವರಿ 26ರಂದು ಗಲ್ಲಿಗೇರಿಸಿದ ದಿನ .ಬ್ರಿಟಿಷರ ವಿರುದ್ಧ ಕ್ರಾಂತಿಕಿಡಿ ಸಂಗೊಳ್ಳಿ ರಾಯಣ್ಣನನ್ನು ಎಪ್ರಿಲ 8- 1831 ರಂದು ಡೋರು ಕೊಳ್ಳದಲ್ಲಿ ಈಜಾಡುತಿದ್ಧ ರಾಯಣ್ಣನನ್ನು ಮೊಸದಿಂದ ಬ್ರಿಟಿಷರು ಸೆರೆಹಿಡಿದರು. ರಾಯಣ್ಣನ ಸಂಗಡಿಗರು ಆಂಗ್ಲರ ಮೋಸದಿಂದ ಬಂಧಿಸಲ್ಪಟ್ಟರು 1830 ರ ಡಿಸೆಂಬರ್ ಆಂಗ್ಲರ ಕಮಿಷನರ್ ಆಂಡರಸನ್ ನ್ಯಾಯಾಲಯ ದಲ್ಲಿ ರಾಯಣ್ಣನಿಗೆ ಗಲ್ಲು ಶಿಕ್ಷೆ ನಿಡುವಂತೆ ಆದೇಶ ನಿಡಿದರು. ಅಂತಹ ಮಹಾತ್ಮ ನ ಕೊನೆ ಆಸೆಯಂತೆ ತನ್ನನು ಹರಿಸಿ ಬೆಳಸಿ ಉಳಿಸಿಕೊಂಡು ಹೊರಾಡಲು ಅನುವು ಮಾಡಿಕೊಟ್ಟ ನಂದಗಡ ಜನರ ಋಣ ತೀರಿಸಲು ನಂದಗಡ ಗ್ರಾಮದಲ್ಲಿಯೇ ತನ್ನನು ನೇಣಿಗೇರಿಸಿ ಎಂದ ರಾಯಣ್ಣ ಕೊನೆಯ ಆಸೆಯಂತೆ. ಜನೆವರಿ 26/1831ರಂದು ರಾಯಣ್ಣನನ್ನು ಗಲ್ಲಿಗೇರಿಸಲಾಯಿತು.ನಾಡಿಗೆ ಇಂದು ತಿಳಿಯದೆ ಇರುವ ಸಂಗತಿಯೇಂದರೇ ದೇಶದಲ್ಲಿದ್ದ ಬ್ರಿಟಿಷರ ವಿರುದ್ಧ ಹೊರಾಡಿದ ಮೊದಲ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ. ಅಂದು ರಾಯಣ್ಣ ಹಚ್ಚಿದ ನಾಡಿನ ಹೊರಾಟದ ಕಿಚ್ಚು ಎಲ್ಲರಿಗೂ ಮಾದರಿಯಾಗಿದೆ. ಈ ಕ್ರಾಂತಿ ವೀರನ ಆಸೆಯಂತೆ ತನ್ನ ಊರಾದ ನಂದಗಡದಲ್ಲಿ ಆತನ ಸಮಾಧಿ ಕೂಡ ಮಾಡಲಾಗಿದೆ ಆ ಒಂದು ಸಮಾಧಿಗೆ ದರ್ಶನ ಪಡೆಯಲು ದೇಶ ಪ್ರೇಮಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿ ಬಳಗದವರು ದಿನ ನಿತ್ಯವೂ ಬರುತ್ತಾರೆ ಈ ಕ್ರಾಂತಿ ವೀರನಿನ ಧೈರ್ಯ ಸಾಹಸಕ್ಕೆ ಆತನು ನಮ್ಮ ದೇಶಕ್ಕೆ ಕೊಟ್ಟ ಅಮೋಘ ಕೊಡುಗೆಗೆ ನಮ್ಮ ಹೆಮ್ಮೆಯ ಪೊಲೀಸ್ ವರ್ಲ್ಡ್ ಸುದ್ದಿ ವಾಹಿನಿ ಮತ್ತು ಪತ್ರಿಕೆಯ ಕಡೆಯಿಂದ ಮಹಾನ್ ಸ್ವತಂತ್ರ ಹೋರಾಟಗಾರನಿಗೆ ನಮ್ಮ ಕಡೆಯಿಂದ ಶತ ಶತ ಕೋಟಿ ನಮನಗಳು.