ಬಡತನದಲ್ಲಿ ಅರಳಿದ ಅಬ್ದುಲ್ ಮೂರ್ತುಜಸಾಬ್ ತೆಗ್ಗಿನಮನಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 99.04% ಮುದ್ದೇಬಿಹಾಳ ತಾಲೂಕಿಗೆ ದ್ವಿತೀಯ ಸ್ಥಾನ.
Published By: ಅಶೋಕ ಗುಂಡಿನಮನಿ.ನಿಡಗುಂದಿ ತಾಲೂಕ ರಿಪೋರ್ಟರ್
Last Updated Date: 08-May-2023

ವಿಜಯಪುರ -: ಮುದ್ದೇಬಿಹಾಳ ತಾಲೂಕಿನ 2022-23 ನೇ ಸಾಲಿನ ಬ್ರಿಲಿಯಂಟ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಮೈಲೇಸೂರ ಶಾಲೆಗೆ ದ್ವಿತೀಯ ಸ್ಥಾನ ಪಡೆದು 619 (99.04%) ಅಬ್ದುಲ ಮುರ್ತುಜಸಾಬ ತೆಗ್ಗಿನಮನಿ ಮುದ್ದೇಬಿಹಾಳ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕಿನ ಮತ್ತು ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾನೆ ತಂದೆ ಮುಂಜಾನೆಯಿಂದ ಸಂಜೆವರೆಗೂ ಪೇಂಟಿಂಗ್ ಕೆಲಸ ತಾಯಿ ಖಾಸಗಿ ಶಾಲೆ ಒಂದರಲ್ಲಿ ಕೆಲಸ ಮಾಡಿ ಮಗನ ವಿದ್ಯಾಭ್ಯಾಸಕ್ಕೆ ಯಾವುದೇ ಕುಂದು ಕೊರತೆ ಆಗದ ಹಾಗೆ ನೋಡಿಕೊಂಡು ಮಗನ ಸಾಧನೆಗೆ ಪ್ರೋತ್ಸಾಹ ನೀಡಿದ ತಂದೆ ತಾಯಿಗಳ ಸಾಧನೆ ಅತ್ಯಂತ ಅರ್ಥಪೂರ್ಣವಾಗಿರುವುದು. ಈ ವಿದ್ಯಾರ್ಥಿ ಬಿಡುವಿನ ವೇಳೆಯಲ್ಲಿ ಮೂಡ್ಕ ಅಂಗಡಿಗೆ ಮತ್ತು ಪೈಂಟಿಂಗ್ ಅಂಗಡಿಯಲ್ಲಿ ಕೆಲಸಕ್ಕೆ ಹೋಗಿ ತನ್ನ ವಿದ್ಯಾಭ್ಯಾಸದಲ್ಲಿ ಯಶಸ್ಸು ಕೊಂಡು ಸಾಧನೆ ಮಾಡಿದ್ದಾರೆ 1 ರಿಂದ 5 ನೇ ತರಗತಿಯವರಿಗೆ ನವ ಚೇತನ ಪಬ್ಲಿಕ್ ಸ್ಕೂಲ್ ನಿಡಗುಂದಿಯ ಶ್ರೀ ಅಶೋಕ ವಡ್ಡರ ಶಿಕ್ಷಕರ ರ್ಮಾರ್ಗದರ್ಶನದಲ್ಲಿ ಬೆಳೆದ ವಿದ್ಯಾರ್ಥಿ ತಾಲೂಕಿಗೆ ಉತ್ತಮ ಸಾಧನೆ ಮಾಡಿರುವ ಕೀರ್ತಿ ಅವರ ತಂದೆ ತಾಯಿ ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ಸಂತಸ ತಂದುಕೊಟ್ಟಿದೆ.
