ಮಾತು ಸಾಧನೆ ಆಗಬಾರದು ಸಾಧನೆ ಮಾತಾಗಬೇಕು. ಎಂದು ಮತ ಪ್ರಚಾರ ಆರ್ ವಿ ದೇಶಪಾಂಡೆ.
Published By: ರಮೇಶ್ ವಿ ಯದುನಿ
Last Updated Date: 02-May-2023
ಕ್ಷೇತ್ರದ ಜನತೆಯ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ, ಬೆಂಬಲಕ್ಕೆ ಬೆಲೆ ಕಟ್ಟಲಾಗದು.ಹಳಿಯಾಳ ವಿಧಾನಸಭಾ ಕ್ಷೇತ್ರದ ಬಿ.ಕೆ. ಹಳ್ಳಿ,ತತ್ವಣಗಿ,ಚಿಬ್ಬಲಗೇರಿ ಹಾಗೂ ಸಾಂಬ್ರಾಣಿ ಗ್ರಾ ಮದ ಜನತೆಯೊಂದಿಗೆ ಆರ್ ವಿ ದೇಶಪಾಂಡೆಯವರು ಚುನಾವಣಾ ಪ್ರಚಾರ ಸಭೆಯನ್ನು ನಡೆಸಿ ಮತಯಾಚನೆ ಮಾಡಿದರು. ಮಾತು ಸಾಧನೆ ಆಗಬಾರದು ಸಾಧನೆ ಮಾತಾಗಬೇಕು,ಸಾಧನೆ ಮಾಡಿದವರು ಜನಮಾನಸದಲ್ಲಿ ಉಳಿಯುತ್ತಾರೆ ಎನ್ನುವ ಉದ್ದೇಶದಿಂದ ಕಳೆದ 5 ವರ್ಷಗಳಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಕೆಲಸಗಳ ಮೂಲಕ ಮುನ್ನೆಡಿಸಿ, ಜನಮಾನಸದಲ್ಲಿ ಉಳಿಯವ ತರಹ ನನ್ನ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಗಳನ್ನು ಕೈಗೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ,ಬೆಂಬಲ ಯಾವತ್ತಿಗೂ ಕಾಂಗ್ರೆಸ್ ಪಕ್ಷ ಹಾಗೂ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.