ಮೂಡಲಗಿ ತಾಲೂಕಿನ ಯಾದವಾಡದ ಬಳಿ ನಿಂತ ಕಬ್ಬಿನ ಟ್ಯಾಕ್ಟರ್ ಟೈಲರ್ ಗೆ ಬೈಕ್ ಡಿಕ್ಕಿ ಸ್ಥಳದಲ್ಲಿ ಬೈಕ್ ಸವಾರ ಸಾವು .ಕೂಲಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು .
Published By: ಹಸನ್ ನದಾಫ್ ಯರಗಟ್ಟಿ ತಾಲೂಕ ರಿಪೋರ್ಟರ್
Last Updated Date: 16-Jan-2023
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಬಳಿ ನಿನ್ನೆ ತಡರಾತ್ರಿ 10 ಗಂಟೆ ಸುಮಾರಿಗೆ ನಿಂತ ಟ್ರಾಕ್ಟರ್ ಟೈಲರಗೆ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಟೈಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಮೂಡಲಗಿ ತಾಲೂಕಿನ ಯಾದವಾಡ ರಸ್ತೆಯ ಮಾರ್ಗದಲ್ಲಿ ನಡೆದಿದೆ .ಮೃತಪಟ್ಟ ವ್ಯಕ್ತಿಯು ಮಲ್ಲಪ್ಪ .ಶಂಕ್ರಪ್ಪ .ಕಂಕಣವಾಡಿ .ಇವರು ಯಾದವಾಡದ ನಿವಾಸಿಯಾಗಿದ್ದು ವಯಸ್ಸು (45) ಎಂದು ತಿಳಿದು ಬಂದಿದೆ .ಈತ ತಮ್ಮದೇ ಆದ ಸದಕಿನ ಮಿಲ್ಲನ್ನು ನಡೆಸುತ್ತಿದ್ದರು .ನಿನ್ನೆ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ತಿರುಳುತ್ತಿರುವ ಸಂದರ್ಭದಲ್ಲಿ ಬೈಕ್ ನ ನಿಯಂತ್ರಣ ತಪ್ಪಿ ಕಬ್ಬು ತುಂಬಿ ನಿಂತಿರುವ ಟ್ಯಾಕ್ಟರ್ ಟೈಲರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಅಮೃತಪಟ್ಟಿರುವ ಘಟನೆ ನಡೆದಿದೆ .ಈ ಪ್ರಕರಣ ಕೂಲಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದೆ.