ಚಡಚಣ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ಮೌಲ್ಯದ ಚಿನ್ನ, ಹಣ ಜಪ್ತಿ...
Published By: ಆನಂದ ಅಗರಖೇಡ ಇಂಡಿ ತಾಲ್ಲೂಕು ರಿಪೋರ್ಟರ್
Last Updated Date: 31-Mar-2023
ಚಡಚಣ : ದಾಖಲಾತಿ ಇಲ್ಲದೇ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 480 ಗ್ರಾಂ ಚಿನ್ನಾಭರಣ 6 ಲಕ್ಷ ನಗದನ್ನು ಪೊಲೀಸರು ಜಪ್ತಿಗೈದಿರುವ ಘಟನೆ ತಾಲೂಕಿನ ದೇವರನಿಂಬರಗಿ ಕ್ರಾಸ್ ಬಳಿ ಗುರುವಾರ ನಡೆದಿದೆ. MH 13- AZ 4201 ನಂಬರಿನ ಕಾರಿನಲ್ಲಿ ವಸ್ತುಗಳನ್ನು ಜಪ್ತಿಗೈದಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿ ವಿಜಯ ಪಡೋಳಕರ ವಶಕ್ಕೆ ಪಡೆಯಲಾಗಿದೆ. ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ನೇತೃತ್ವದಲ್ಲಿ ಜಪ್ತಿಗೈದಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ