logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಇಬ್ಬರ ಬಂದನ , ನಗದು ವಶಕ್ಕೆ.
Published By: ಕಿಶೋರಕುಮಾರ್ ಶೆಟ್ಟಿ ವಿರಾಜಪೇಟೆ ರಿಪೋರ್ಟರ್
Last Updated Date:  31-Mar-2023
ಕಲಾಸುದ್ದಿ

ವಿರಾಜಪೇಟೆ - : ಮಾ 31 : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇರ್ವರು ಯುವಕರನ್ನು ಬಂದಿಸುವಲ್ಲಿ ವಿರಾಜಪೇಟೆ ನಗರ ಠಾಣೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಇಂಜಿಲಗೆರೆ ಗ್ರಾಮದ ಕಲ್ಲುಕೊರೆ ನಿವಾಸಿ ಪ್ರವೀಣ ಪ್ರಾಯ ೩೧ ವರ್ಷ ಮತ್ತು ಇ ಹಿಂದೆ ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ಬಂದ ವಿರಾಜಪೇಟೆ ಗಾಂಧಿನಗರ ನಿವಾಸಿ ಇಮ್ರಾನ್ ಅಲಿಯಾಸ್ ಸೊನು ಪ್ರಾಯ ೨೨ ವರ್ಷ ಗಾಂಜಾ ಪ್ರಕರಣದಲ್ಲಿ ಬಂದಿತ ಆರೋಪಿಗಳು. ಘಟನೆಯ ವಿವರ: ಪ್ರಕರಣದ ಎರಡನೇ ಆರೋಪಿಯಾಗಿರುವ ಸೊನು ೨೦೨೦ ರಲ್ಲಿ ಗಾಂಜಾ ಪ್ರಕರಣದಲ್ಲಿ ಬಂದಿತನಾಗಿ ಜೈಲುವಾಸ ಅನುಭವಿಸಿ ಹಿಂದಿರುಗಿದ್ದಾನೆ. ಜೈಲುವಾಸ ಅನೇಕ ಮಂದಿ ಪರಿಚಯವು ಅಗಿದೆ. ಗಾಂಜಾ ಖರೀದಿ ಮತ್ತು ದೊರಕುವ ಸ್ಥಳದ ಬಗ್ಗೆ ಈತನಿಗೆ ಮಾಹಿತಿ ಇತ್ತು ಎನ್ನಲಾಗಿದೆ. ತನ್ನ ಸ್ನೇಹಿತನಾದ ಪ್ರವೀಣ್ ಗೂ ಮಾಹಿತಿ ತಿಳಿಸಿ ಹಣ ಹೊಂದಿಸಿಕೊಂಡು ಮೈಸೂರು ವಿಗೆ ತೆರಳಿದ್ದಾನೆ ಸೂನು. ದಿನಾಂಕ 30-03-2023 ರ ರಾತ್ರಿ ವೇಳೆಯಲ್ಲಿ ಮೈಸೂರು ಹೊರವಲದಲ್ಲಿ ಗಾಂಜಾ ಖರೀದಿ ಸಿ ವಿರಾಜಪೇಟೆ ನಗರಕ್ಕೆ ಆಗಮಿಸಿದ್ದಾನೆ. ಇಂದು ಬೆಳಿಗ್ಗೆ ಸುಮಾರು 11 ರ ವೇಳೆಯಲ್ಲಿ ಸೊನು ಮತ್ತು ಪ್ರಕರಣದ ಪ್ರಥಮ ಆರೋಪಿ ಪ್ರವೀಣ ತಮ್ಮ ಬಳಿಯಿದ್ದ ಗಾಂಜಾವನ್ನು ಮಾರಾಟ ಮಾಡಲು ಗಿರಾಕಿಗಳಿಗೆ ಹೊಂಚು ಹಾಕಿಕೊಂಡಿದ್ದರು. ಪೊಲೀಸ್ ಸಿಬ್ಬಂದಿಗೆ ಬಂದ ನಿಖರ ಮಾಹಿತಿ ಅನ್ವಯ ನಗರದ ಕೆ.ಎಸ್.ಅರ್.ಟಿ.ಸಿ. ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಸಂಶಯಾಸ್ಪದ ರೀತಿಯಲ್ಲಿ ವರ್ತನೆ ಮಾಡುತಿದ್ದ ಯುವಕರ ಮೇಲೆ ಧಾಳಿ ನಡೆಸಿದ್ದಾರೆ. ಇ ವೇಳೆ ಸೋನು ಮತ್ತು ಪ್ರವೀಣನ ಬಳಿಯಿದ್ದ ಪ್ಲಾಸ್ಟಿಕ್ ಕೈಚೀಲ ಒಂದರಲ್ಲಿ ಮಾರಾಟಕ್ಕೆ ಸಿದ್ದಗೊಂಡಿದ್ದ 01. ಕೆ.ಜಿ. 222 ಗ್ರಾಂ ಗಾಂಜಾ ಮತ್ತು 770 ರೂ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆಯಲಾಗಿರುವ ಗಾಂಜಾ ಮಾರುಕಟ್ಟೆಯಲ್ಲಿ 30,000 ರೂಗಳು ಅಂದಾಜು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂದಿಸಿದಂತೆ ಇರ್ವರು ಯುವಕರ ಮೇಲೆ ವಿರಾಜಪೇಟೆ ನಗರ ಠಾಣೆಯಲ್ಲಿ ಎನ್.ಡಿ.ಪಿ.ಎಸ್ 20/B ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್,ಸಹ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಮತ್ತು ವಿರಾಜಪೇಟೆ ಉಪ ವಿಭಾಗ ಡಿ.ವೈಎಸ್ಪಿ ಮೋಹನ್ ಕುಮಾರ್ ಅವರುಗಳ ಮಾರ್ಗದರ್ಶನದಲ್ಲಿ ವಿರಾಜಪೇಟೆ ನಗರ ವೃತ ನಿರೀಕ್ಷಕರಾದ ಶಿವರುದ್ರ ನಿರ್ದೇಶನದ ಮೇರೆಗೆ ವಿರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿ ಮಧನ್ ಕುಮಾರ್ ಎ.ಎಸ್.ಐ. ಮೊಹಮ್ಮದ್ ಎಂ.ಎಂ. ಸಿಬ್ಬಂದಿಗಳಾದ ಗಿರೀಶ್, ಮಲ್ಲಿಕಾರ್ಜುನ, ಧರ್ಮ ಮತ್ತು ಸತೀಶ್ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img