ಹಾವೇರಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಲಂಚ ಸ್ವೀಕಾರ ಹಾವೇರಿ ಜಿಲ್ಲಾ ಆಸ್ಪತ್ರೆಯ ವೈದ್ಯ ಹಾಗೂ ಆಶಾ ಕಾರ್ಯಕರ್ತೆಯರ ಬಂಧನ.
Published By: ನಾಗರಾಜ್ ಮಡಿವಾಳರ್
Last Updated Date: 09-Apr-2023

ಹಾವೇರಿ -: ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಹಾವೇರಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಲಂಚ ಸ್ವೀಕಾರ ಹಾವೇರಿ ಜಿಲ್ಲಾ ಆಸ್ಪತ್ರೆಯ ವೈದ್ಯ ಹಾಗೂ ಆಶಾ ಕಾರ್ಯಕರ್ತೆಯರ ಬಂಧನ. ಮಹಿಳೆಯರಿಬ್ಬರ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಆಸ್ಪತ್ರೆ ವೈದ್ಯ ಮತ್ತು ಆಶಾ ಕಾರ್ಯಕರ್ತೆಯ ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಗುರುವಾರ ನಡೆದಿದೆ ...ಡಾಕ್ಟರ್ ಉಮೇಶ್. ಎಂ. ಕೆಳಗಿನಮನಿ ಮತ್ತು ಆಶಾ ಕಾರ್ಯಕರ್ತೆ ದ್ರಾಕ್ಷಾಯಿಣಿ ಪಿ ಚಿಕ್ಕನಂದಿ ಬಂಧನಕೊಳಗಾದವರು . ಮಹಿಳೆಯ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ತಲಾ 2000 ಗಳಂತೆ 4000 ಲಂಚ ಕೇಳಿದ್ದರು 2000 ಸಾವಿರ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕ ಬಿದ್ದಿದ್ದಾರೆ ಪೊಲೀಸ್ ಬಂಧಿಸಿದ್ದಾರೆ ಹೊಸರಿತ್ತಿ ಗ್ರಾಮದಲ್ಲಿರುವ ವೈದ್ಯರ ಮನೆಯನ್ನು ಶೋಧಿಸಲಾಗಿದೆ ಮತ್ತು ತನಿಖೆಗೆ ಮುಂದುವರಿಸಲಾಗಿದೆ .
