ಮಹಿಳಾ ಪ್ರೀಮಿಯರ್ ಲೀಗ್ | RCB ತಂಡದ ಸಲಹೆಗಾರರಾಗಿ ಸಾನಿಯಾ ಮಿರ್ಜಾ ನೇಮಕ.
Published By: ಆನಂದಕುಮಾರ ನಾಯಕ್ ಬಾಗಲಕೋಟ ತಾಲೂಕ ರಿಪೋರ್ಟ್
Last Updated Date: 16-Feb-2023
ನವದೆಹಲಿ - : ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಲಹೆಗಾರರಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ನೇಮಕಗೊಂಡಿದ್ದಾರೆ.ಈ ಕುರಿತು RCB (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಸಾನಿಯಾ ಜೊತೆಗಿನ ಸಂದರ್ಶನವನ್ನೂ ಕೂಡ ಟ್ವೀಟ್ ನಲ್ಲಿ RCB ಹಂಚಿಕೊಂಡಿದೆ. ಮಂಗಳವಾರ ನಡೆದ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಆರ್’ಸಿಬಿ ಅತ್ಯುತ್ತಮ ಆಟಗಾರರನ್ನು ತನ್ನದಾಗಿಸಿಕೊಂಡಿದೆ. ಭಾರತ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಅವರನ್ನು RCB ತಂಡ ಹರಾಜಿನಲ್ಲಿ 3.40 ಕೋಟಿಗೆ ಖರೀದಿಸಿದೆ. ಸ್ಮೃತಿ ಅವರದ್ದು ಹರಾಜಿನಲ್ಲಿ ಆಟಗಾರ್ತಿಯೊಬ್ಬರು ಪಡೆದ ಅತಿ ಹೆಚ್ಚಿನ ಮೊತ್ತವಾಗಿದೆ.