ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ನಲ್ಲೂ ಟೀಂ ಇಂಡಿಯಾ ಗೆದ್ದು ಬೀಗಿದೆ.
Published By: Police World News
Last Updated Date: 14-Mar-2022
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ನಲ್ಲೂ ಟೀಂ ಇಂಡಿಯಾ ಗೆದ್ದು ಬೀಗಿದೆ. ಸುಮಾರು 238 ರನ್ಗಳ ಅಂತರದಿಂದ ಶ್ರೀಲಂಕಾ ತಂಡವನ್ನು ಭಾರತ ಸೋಲಿಸಿದೆ. ಈ ಮೂಲಕ ಟೆಸ್ಟ್ ಸರಣಿ ವೈಟ್ ವಾಶ್ ಮಾಡಿದೆ.
ಮೊದಲ ಟೆಸ್ಟ್ ಪಂದ್ಯದಲ್ಲೂ ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಗೆದ್ದು ಬೀಗಿತ್ತು.ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ಅಂತ್ಯಕ್ಕೆ ಭಾರತ ಶ್ರೀಲಂಕಾಗೆ 446 ರನ್ ಟಾರ್ಗೆಟ್ ನೀಡಿತ್ತು.
143 ರನ್ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ, ಉತ್ತಮ ಆರಂಭದಲ್ಲಿ ಪಡೆದುಕೊಳ್ಳಲಿಲ್ಲ. ತವರಿನಂಗಳದಲ್ಲಿ ಸಿಕ್ಕ 2ನೇ ಅವಕಾಶವನ್ನೂ ಕನ್ನಡಿಗ ಮಯಾಂಕ್ ಅಗರ್ವಾಲ್ ಕೈ ಚೆಲ್ಲಿದ್ರು. 22 ರನ್ಗಳಿಸಿ ಮಯಾಂಕ್ ಔಟಾದ್ರೆ, ನಾಯಕ ರೋಹಿತ್ ಶರ್ಮಾ ಅರ್ಧಶತಕದ ಅಂಚಿನಲ್ಲಿ ಎಡವಿದ್ರು. ಟೆಸ್ಟ್ ಸ್ಪೆಷಲಿಸ್ಟ್ ಹನುಮ ವಿಹಾರಿ ಆಟ 35 ರನ್ಗಳಿಗೆ ಅಂತ್ಯವಾಯ್ತು.
2ನೇ ತವರು ಬೆಂಗಳೂರಿನಲ್ಲೂ ವಿರಾಟ್ ಕೊಹ್ಲಿಯ ಶತಕದ ಬರ ನೀಗಲಿಲ್ಲ. 2ನೇ ಇನ್ನಿಂಗ್ಸ್ನಲ್ಲೂ 13 ರನ್ಗಳಿಸಿ ಔಟಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು. ಇನ್ನೊಂದೆಡೆ ಅಬ್ಬರದ ಆಟವಾಡಿದ ರಿಷಭ್ ಪಂತ್ ಅರ್ಧಶತಕ ಸಿಡಿಸಿದ್ರು. 31 ಎಸೆತಗಳಲ್ಲೇ 50 ರನ್ ಸಿಡಿಸಿ ಔಟಾದ್ರು. ಬಳಿಕ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಕೂಡ ಲಂಕಾ ಬೌಲರ್ಗಳ ಬೆವರಿಳಿಸಿ ಹಾಫ್ ಸೆಂಚುರಿ ಇನ್ನಿಂಗ್ಸ್ ಕಟ್ಟಿದ್ರು.
ಬಳಿಕ ಕಣಕ್ಕಿಳಿದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಅಲ್ಪ ಮೊತ್ತದ ಕಾಣಿಕೆ ನೀಡಿದ್ರು. ಅಕ್ಷರ್ ಪಟೇಲ್ ವಿಕೆಟ್ ಪತನದೊಂದಿಗೆ ಟೀಮ್ ಇಂಡಿಯಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ತು. 2ನೇ ಇನ್ನಿಂಗ್ಸ್ನಲ್ಲಿ 9 ವಿಕೆಟ್ ಕಳೆದು ಕೊಂಡು 303 ರನ್ಗಳಿಸಿದ ಭಾರತ, 446 ರನ್ಗಳ ಬೃಹತ್ ಟಾರ್ಗೆಟ್ ನೀಡಿತು. ಈ ರನ್ಗಳ ಬೆನ್ನತ್ತಿದ ಶ್ರೀಲಂಕಾ ಎರಡನೇ ಇನ್ನಿಂಗ್ಸ್ನಲ್ಲೂ 208ಕ್ಕೆ ಆಲ್ ಔಟ್ ಆಗಿದೆ.