ಬಾಗಲಕೋಟೆ:- ನಗರದಲ್ಲಿ ಸಕ್ರಿ ಪ್ರೆಂಡ್ಸ್ ಕ್ಲಬ್ ತಂಡದಿಂದ ಆಯೋಜನೆಯಾಗಿದ್ದ ಕ್ರಿಕೆಟ್
ಬಾಗಲಕೋಟೆಯ ಸಕ್ರಿ ಫೆಂಡ್ಸ್ ಕ್ರಿಕೆಟ್ ತಂಡಕ್ಕೆ ಗೆಲುವು. ರನ್ನರ್ ಅಪ್ ಆದ ಇಲಕಲ್ ತಂಡ
Published By: ಕಾಶಿನಾಥ ಬಾಗಲಕೋಟ ತಾಲೂಕ ವರದಿಗಾರ
Last Updated Date: 18-Mar-2022
ಬಾಗಲಕೋಟೆ:- ನಗರದಲ್ಲಿ ಸಕ್ರಿ ಪ್ರೆಂಡ್ಸ್ ಕ್ಲಬ್ ತಂಡದಿಂದ ಆಯೋಜನೆಯಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಾಯಕ ಮಲ್ಲು ಹೊಸಮನಿ ಅವರ ನೇತೃತ್ವದ ಸಕ್ರಿ ಪ್ರೆಂಡ್ಸ್ ಕ್ರಿಕೆಟ್ ತಂಡ ಮೊದಲ ಸ್ಥಾನ ಗಳಿಸುವ ಮೂಲಕ ಟ್ರೋಫಿ ತನ್ನದಾಗಿಸಿಕೊಂಡರೆ, ಇತ್ತ ರನ್ನರ್ ಅಪ್ ಆಗಿ ಇಲಕಲ್ ಕ್ರಿಕೆಟ್ ತಂಡ ಹೊರ ಹೊಮ್ಮಿತು.
ನಗರದ ಸಕ್ರಿ ಮೈದಾನದಲ್ಲಿ ನಿರಂತರ 6 ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ 16 ಟೀಮ್ ಗಳು ಪಾಲ್ಗೊಂಡಿದ್ದವು. ಇದರಲ್ಲಿ ಒಂದು ಟೀಮ್ ನಲ್ಲಿ ಒಂದೇ ತಾಲೂಕಿನ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಮುದ್ದೇಬಿಹಾಳ, ಬಸವನ ಬಾಗೇವಾಡಿ, ಗುಳೇದಗುಡ್ಡ, ಇಲಕಲ್, ಬೇವಿನಮಟ್ಟಿ, ಶಿರಗುಂಪಿ, ನವನಗರ, ಬಾಗಲಕೋಟೆ, ಬೀಳಗಿ ಸೇರಿದಂತೆ 16 ತಂಡಗಳು ಭಾಗವಹಿಸಿದ್ದವು. ಸಕ್ರಿ ಕ್ರಿಕೆಟ್ ಟೂನ೯ಮೆಂಟ್ ಆಯೋಜನೆ ಮಾಡಿದ ಪ್ರಮುಖರಾದ ಸಂಗಮೇಶ ಕೋಮಾರ, ಮುತ್ತು ಅರಗಿನಿಶೆಟ್ಟಿ, ರಾಜು ಬಂಡಿ, ಯಲ್ಲಪ್ಪ ಕುರಕಳ್ಳಿ, ಸುಶೀಲ ರಟ್ಟಿಹಳ್ಳಿ, ಅಮೀರ ಭೋವಿ, ಗಿರೀಶ ರಾಠೋಡ, ಬಳ್ಳೇಶ, ಭರತ ಚವ್ಹಾಣ, ಮಹಾಂತೇಶ ರಾಠೋಡ ಇವರ ನೇತೃತ್ವದಲ್ಲಿ 6 ದಿನಗಳ ಕಾಲ ಕ್ರಿಕೆಟ್ ಯಶಸ್ವಿಯಾಯಿತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೈನಲ್ ಪಂದ್ಯದಲ್ಲಿ ಮ್ಯಾನ ಆಫ್ ದಿ ಮ್ಯಾಚ್ ಮುತ್ತು ಬೇವಿನಮಟ್ಟಿ ಪಡೆದರೆ, ಮ್ಯಾನ್ ಆಫ್ ದಿ ಸಿರೀಸ್ ಇಲಕಲ್ ತಂಡದ ಹರೀಶ ಅವರ ಪಾಲಾಯಿತು.