47 ವರ್ಷಗಳ ಬಳಿಕ ಸಂತೋಷ್ ಟ್ರೋಫಿ ಫೈನಲ್‌ಗೆ ಕರ್ನಾಟಕ- ಫೈನಲ್ ಗೆಲ್ಲುವ ವಿಶ್ವಾಸ: ಸಚಿವ ಡಾ.ನಾರಾಯಣಗೌಡ.
Published By: ಆನಂದಕುಮಾರ ನಾಯಕ್ ಬಾಗಲಕೋಟ ತಾಲೂಕ ರಿಪೋರ್ಟ್
Last Updated Date: 04-Mar-2023
ಬೆಂಗಳೂರು - : ಹೀರೋ ಸಂತೋಷ್ ಟ್ರೋಫಿ' ಟೂರ್ನಿಯಲ್ಲಿ 47 ವರ್ಷಗಳ ನಂತರ ಫೈನಲ್ ಪ್ರವೇಶಿಸಿರುವ ಕರ್ನಾಟಕ ತಂಡಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ. 1975-76ರಲ್ಲಿ ನಡೆದ ಟೂರ್ನಿಯಲ್ಲಿ ಕರ್ನಾಟಕ ತಂಡ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಇದೀಗ ಮತ್ತೊಮ್ಮೆ ಫೈನಲ್ ಪ್ರವೇಶಿಸಿರುವ ಕರ್ನಾಟಕ ಪುಟ್ಬಾಲ್ ತಂಡ, ಮಾರ್ಚ್ 4 ರಂದು ಮೇಘಾಲಯ ವಿರುದ್ಧ ಟ್ರೋಫಿ ಗೆಲ್ಲುವ ವಿಶ್ವಾಸವಿದೆ. 1968-69 ರಲ್ಲಿ ನಡೆದ ಸಂತೋಷ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದ ಕರ್ನಾಟಕ ಪುಟ್ಬಾಲ್ ತಂಡ, ಮೇಘಾಲಯವನ್ನು ಮಣಿಸುವ 54 ವರ್ಷಗಳ ಕಾಯುವಿಕೆಯನ್ನು ದೂರವಾಗಿಸಿ ಮತ್ತೊಮ್ಮೆ ಟ್ರೋಫಿ ಗೆಲ್ಲಲಿ ಎಂದು ಸಚಿವ ಡಾ.ನಾರಾಯಣಗೌಡ ಅವರು ಕರ್ನಾಟಕ ತಂಡಕ್ಕೆ ಶುಭ ಹಾರೈಸಿದ್ದಾರೆ