"#ಚದುರಂಗ_ಮತ್ತು_ಕತ್ತೆ"
Published By: Police World News
Last Updated Date: 01-Jan-1970
ನಾಟಕ ಬೆಂಗಳೂರು ಈ ಆವೃತ್ತಿಯ ಹಲವು ನಾಟಕಗಳು ತನ್ನ ವಿಭಿನ್ನತೆಯಿಂದ ಗಮನ ಸೆಳೆದವು.
ಅದರಲ್ಲೂ ಯಾವುದೇ ರಂಗತಂಡ ಮತ್ತು ಕಲಾವಿದರಿಗೆ ಅತ್ಯಂತ ಸವಾಲೆನಿಸುವ
"#ಚದುರಂಗ_ಮತ್ತು_ಕತ್ತೆ" ನಾಟಕ ಈ ಬಾರಿಯ ನಾಟಕೋತ್ಸವದ ಹೈಲೈಟ್ ಎನ್ನಬಹುದು.
ಖ್ಯಾತ ನಾಟಕಕಾರ ಪ್ರೊ.ಡಿ.ಎಸ್.ಚೌಗಲೆ ಅವರ ಈ ಕೃತಿಯ ಮೂಲ ಮರಾಠಿಯ(ಚಂ.ಪ್ರ.ದೇಶಪಾಂಡೆ )
ಅನುವಾದಿತ ಕೃತಿಯಾದರೂ ಪಾತ್ರಧಾರಿಗಳ ಹೆಸರು(ಠಾಕೂರ್,ಜಗದೀಪ) ಹೊರತು ಪಡಿಸಿದರೆ
ಉಳಿದೆಲ್ಲವೂ ಈ ಮಣ್ಣಿನದೆ,ಭಾಷೆಯಂತೂ ಉತ್ತರ ಕರ್ನಾಟಕದ ಜವಾರಿ ಕನ್ನಡ.
ಪಂಚಮುಖಿ ನಟರ ಸಮೂಹ ಅಭಿನಯಿಸಿದ ಈ ನಾಟಕ ಬೆಳಕು, ನೆರಳಿನಾಟದ ಮೂಲಕ ಗಮನ ಸೆಳೆಯಿತು.
Human Instinct ಮತ್ತು Moral ನಡುವಿನ ಸೂಕ್ಷ್ಮ ಸಂವೇದನೆಗಳನ್ನು ಗ್ರಹಿಸಿದ ನಿರ್ದೇಶಕ ಅಭಿಮನ್ಯು ಭೂಪತಿ
ಮತ್ತು ಕಲಾವಿದರು ಆ ಮಟ್ಟಿಗೆ ಅಭಿನಯದ ಪ್ರಸ್ತುತಿಯಲ್ಲಿ ಯಶಸ್ಸು ಸಾಧಿಸಿದ್ದಾರೆ.
ಮನುಷ್ಯನ ಮನಸ್ಸುಗಳ ವೈರುಧ್ಯ ಗಳ ತಾಕಲಾಟ ಒಳಸುಳಿಗಳ ಅನಾವರಣದ ಮನೋ ವಿಶ್ಲೇಷಣಾತ್ಮಕ
ನಾಟಕ ಮರಾಠಿ ರಂಗಭೂಮಿಯಲ್ಲಿ ಕಾಣಸಿಗುವ ಬ್ಲಾಕ್ (ಡಾರ್ಕ್)ಕಾಮಿಡಿ ವಿಭಾಗಕ್ಕೆ ಸೇರುತ್ತದೆ.
ಮೊದಲ ಬಾರಿಗೆ ಇದನ್ನು ಪ್ರಯೋಗಿಸಿದ ಪಂಚಮುಖಿ ನಟರ ಸಮೂಹ ತಮ್ಮ ಮಿತಿಯಲ್ಲಿ ಭೇಷ್ ಎನಿಸಿಕೊಂಡಿತು.
ಜಗದೀಪನ ಪಾತ್ರಧಾರಿ ಆರಂಭದಲ್ಲಿಯೇ ಸಂಭಾಷಣೆಯಲ್ಲಿ ಮಾಡಿದ ಕೊಂಚ ಎಡವಟ್ಟಿನಿಂದಾಗಿ
ಕೆಲ ನಿಮಿಷಗಳ ನಾಟಕ ತುಂಡಾದರೂ ಅಭಾಸವೆನಿಸಲಿಲ್ಲ.
ಠಾಕೂರ್ ಪಾತ್ರಧಾರಿ ಸಹಜಾಭಿನಯದ ಮೂಲಕ ಗಮನೆಸಳೆದರು. ಭಾವನೆಗಳನ್ನು ವ್ಯಕ್ತಪಡಿಸುವಾಗ
ಅವರ ಮುಖಭಾವವಂತೂ ಎಕ್ಸಲೆಂಟ್!... ಇಡೀ ನಾಟಕದ ಹೈಲೈಟ್! ಬೆಳಕು ಸಂಭಾಷಣೆಗಳಿಲ್ಲದ ಸಮಯದಲ್ಲಿ
ಬೆಳಕು ಇಡೀ ನಾಟಕವನ್ನಾವರಿಸುವ ಮೂಲಕ ನೋಡುಗನ ಗಮನಸೆಳೆಯಿತು.
ಕೊನೆಯಲ್ಲಿ ರಂಗದ ಮೇಲೆ ಬಂದ ಪಾತ್ರಧಾರಿಗಳು ತಾವು ಮಾಡಿದ ತಪ್ಪನ್ನು ಒಪ್ಪಿ ಕ್ಷಮೆಯಾಚಿಸಿದರು.
ಮತ್ತೊಮ್ಮೆ ಇದನ್ನು ಅಭಿನಯಿಸುತ್ತೇವೆ ಬಂದು ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಈ ವಿನಮ್ರತೆ ಹಿಡಿಸಿತು.
ರಂಗಾಸಕ್ತರು ಖಂಡಿತ ಇದನ್ನು ನೋಡಲೇಬೇಕು ಯಾವುದೇ ನಿರ್ದೇಶಕ, ನಟರಿಗೆ ಈ ನಾಟಕ ಹಾಗೂ
ಇಲ್ಲಿನ ವಿಷಯ ವಸ್ತು ಅತ್ಯಂತ ಸವಾಲಿನದು. ಕನ್ನಡ ರಂಗಭೂಮಿಗಂತೂ ಅಪರೂಪ! ಹೀಗಾಗಿ
ಪಂಚಮುಖಿ ನಟರ ಸಮೂಹದ ಈ ಪ್ರಯತ್ನಕ್ಕೆ ಅಭಿನಂದಿಸಲೇಬೇಕು.ಮತ್ತು ಬೆಂಬಲ ಅಗತ್ಯವಾಗಿ ನೀಡಬೇಕು...
#ಆರ್_ಎಚ್_ನಟರಾಜ ಹೆಸರಾಂತ ಪತ್ರಕರ್ತರು,ಸಂಪಾದಕರು 'ಅಭಿಮನ್ಯು' ಪತ್ರಿಕೆ, ಬೆಂಗಳೂರು