ನಾಡಿನ ಹಿರಿಯ ಕಲಾವಿದರಾದ ಚಿ ಸು ಕೃಷ್ಣ ಶೆಟ್ಟರ ( ವೆಂಕಟಪ್ಪ ಪ್ರಶಸ್ತಿ ಪುರಸೃತರು ) ಕಲಾಕೃತಿಗಳು "SUBLIMINAL EXCAVATIONS " ಎಂಬ ಹೆಸರಿನಲ್ಲಿ
Published By: Police World News
Last Updated Date: 03-Jan-2022
ನಮ್ಮ ನಾಡಿನ ಕಲಾವಿದರಾದ ಕೃಷ್ಣಶೆಟ್ಟರಿಗೀಗ 60ರ ಚಿರಯವ್ವನ. ಹಾಗೆಂದು ನಾನು ಹೇಳುತ್ತಿಲ್ಲ ಗೆಳೆಯರೇ,
ಅವರ ಕಲಾಕೃತಿಗಳನ್ನು ನೋಡಿದರೆ ನಿಮಗನ್ನಿಸಬಹುದು. ಹೌದು ಈ ಪ್ರದರ್ಶನ ಕಲಾವಿದನ ಅಸ್ಮಿತೆಯನ್ನು
ಹೆಚ್ಚಿಸಬಹುದು.
ನಾಡಿನ ಹಿರಿಯ ಕಲಾವಿದರಾದ ಚಿ ಸು ಕೃಷ್ಣ ಶೆಟ್ಟರ ( ವೆಂಕಟಪ್ಪ ಪ್ರಶಸ್ತಿ ಪುರಸೃತರು ) ಕಲಾಕೃತಿಗಳು
"SUBLIMINAL EXCAVATIONS " ಎಂಬ ಹೆಸರಿನಲ್ಲಿ ನಗರದ ಕಾಲೆಜ್ ಆಪ್ ಫೈನ್ ಆರ್ಟ ( ಹೊಸ ಚಿತ್ರಕಲಾಪರಿಷತ್ ),
ವಿಷ್ಣುವರ್ಧನ್ ರಸ್ತೆ, ಶ್ರೀನಿವಾಸಪುರ, ಬೆಂಗಳೂರು -60. ನಲ್ಲಿ ಪ್ರದರ್ಶನ ನಡೆಯುತ್ತಿದೆ.
ಪ್ರದರ್ಶನ ಜನವರಿ 4 - 22 ರವರೆಗೆ ಸಂಜೆ 6 ರವರೆಗೆ ನಡೆಯುತ್ತಿದೆ. ದಯವಿಟ್ಟು ಎಲ್ಲಾ ನನ್ನ ಸ್ನೇಹಿತರು
ಈ ಪ್ರದರ್ಶನವನ್ನು ಮಿಸ್ ಮಾಡದೆ ನೋಡಿ.
ನಾನು ಇಲ್ಲಿ ಶ್ರೀ ಯುತರನ್ನು 3 ಭಾಗಗಳಲ್ಲಿ ಸ್ವಲ್ಪ ಪರಿಚಮಾಡುತ್ತೆನೆ. ಕಲಾ ಪ್ರದರ್ಶನ ಅತಿ ಮುಖ್ಯವಾಗಿರುವುದರಿಂದ
ಹೊಸ ನೊಡುಗರಿಗೆ ತಿಳಿದಿರಲೆಂದು.
1) ಮೂರು ದಶಕದ ಕಾಲ ನೂರಾರು ಕಲಾವಿದರನ್ನು ತಮ್ಮ ವಿಮರ್ಶೆಯ ಮೂಲಕ ಕಲಾಜಗತ್ತಿಗೆ ಪರಿಚಯಿಸಿದವರು.
ಹೆಚ್ಚು ಕಲಾವಿದರು ಕಾಂಪಿಟೇಷನ್ ಷೋಗಳಲ್ಲಿ, ಗ್ರೂಪ್ ಷೋಗಳು ನಡೆಯುವಾಗ ಕೃಷ್ಣಶೆಟ್ಟರು ತಮ್ಮ ವಿಮರ್ಶೆಯ
ನುಡಿ ಯಾದ ನಂತರ ಬಿಡಿಬಿಡಿಯಾಗಿ ಇಂತಿಂತ ಕಲಾವಿದರ ಚಿತ್ರಗಳು ಹೊಸ ಚಿಂತನೆಗಳಿಂದ ಕಲಾಜಗತ್ತಿಗೆ ಹೊಸ
ಹೆಜ್ಜೆ ಇಡುತ್ತಿದ್ದಾರೆ ಎಂದು ಬರೆಯುತ್ತಿದ್ದರು, ಕಲಾವಿದರ ಅತ್ಮವಲೊಕನ ಮಾಡಲು ಮತ್ತು ಅಸ್ಮಿತೆಯನ್ನು
ಗುರುತಿಸಿಕೊಳ್ಳಲು ಸಹಾಯ ಮಾಡುತ್ತಿದ್ದರು. ಈಗ ಅವರುಗಳು ಹೆಸರಿಸಿದ ಅನೇಕ ಕಲಾವಿದರು ನಾಡಿನಲ್ಲಿ
ಬೆಳೆದು ನಿಂತಿದ್ದಾರೆ. ಮತ್ತು ಉಡಾಪೆಗೆಂದು ಗೀಚಿದ ಕಲಾವಿದರನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ. ತಮ್ಮ
ಬರಹದ ಮೂಲಕ ಅನೇಕ ಕಲಾವಿದರ ಪರಿಚಯ ಮಾಡಿದ್ದಾರೆ.
2) ಅವರ ಕಲಾವಲಯದ ಹೊರಾಟ: ಕರ್ನಾಟಕದ ಕಲಾವಿದರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಮುಲಾಜಿಲ್ಲದೆ
ಕಲಾವಿದರಿಗೆ ಕೊಡಿಸಿದ್ದಾರೆ. ನಿಸ್ಟುರವಗಿದ್ದಾರೆ, ಹಣ ಕಳೆದುಕೊಂಡಿದ್ದಾರೆ, ಆದರೆ ಅವರು ಮನಸ್ಸು ಬಹಳ ಸೂಕ್ಮ
ಎಂದು ಕೆಲವರಿಗೆ ಮಾತ್ರಗೊತ್ತು. 3 ದಶಕದ ಕಾಲ ವಿಮರ್ಶೆ, ನಂತರ ಕಲಾವಲಯದ ಹೋರಾಟಗಳಲ್ಲಿ ಸಕ್ರಿಯವಾಗಿ
ತೊಡಗಿಸಿಕೊಂಡು, ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು. ಅವರ
ಹೊರಾಟದ ಶಕ್ತಿಯ ಬಗ್ಗೆ ನಿಮಗೆ ಹೇಳಬೇಕೆಂದರೆ?, ಕಳೆದ ಒಂದು ದಶಕವನ್ನು ಗಮನಿಸಿದರೆ ಕರ್ನಾಟಕದ
ಕಲಾವಲಯದಮಟ್ಟಿಗೆ ಕೃಷ್ಣ ಶೆಟ್ಟರಿಲ್ಲದ ಆ ನಿಶಬ್ಧತೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹೊರಾಟ ಮತ್ತು
ಚಟುವಟಿಕೆಗಳನ್ನು ಗಮನಿಸಿದರೆ 60% ಕಲಾವಲಯದಲ್ಲಿ ಸದ್ದೇ ಇರುತ್ತಿರಲಿಲ್ಲ. ಯುವಕರನ್ನು ಉರಿದುಂಬಿಸಿ ಸಭೆ
ಸಮಾರಂಭಗಳಲ್ಲಿ ಚಟುವಟಿಕೆಯಿಂದ ನಡೆಸುವುದು ಅವರ ಸಕ್ರಿಯ ಕೆಲಸಗಳಲ್ಲಿ ತೊಡಗುವುದು, ತಮಗೆ ಕಂಡ
ಅವಕಾಶಗಳನ್ನು ಯುವಕರಿಗೆ ತಲುಪಿಸುವುದು ಅವರ ದಾರಿ. ನಿಷ್ಟೂರವಾಗುವುದು, ಮತ್ತೆ ಮುಂದೆ ನಡೆಯುವುದು ಅವರ ದಾರಿ.
3) ಅವರ ಕಲಾಕೃತಿಗಳ ರಚನೆ: ಅವರ ಕಾಲೆಜುನಂತರದ ದೆಹಲಿಯ ಗಡಿ ಎಂಬ ಕಲಾವಸತಿ ಕೆಂದ್ರದಲ್ಲಿ ಮಾಡಿದ
ಪ್ರಿಂಟ್ ಚಿತ್ರಗಳನ್ನು ಗಮನಿಸಿದರೆ ಅವರ ಸೃಜನಶೀಲ ರೆಂಡರಿಂಗ್ ಕೃತಿಗಳು ನೊಡುಗರನ್ನು ವಿಸ್ಮಯಗೊಳಿಸುತ್ತವೆ.
ಅಲ್ಲಿಂದ ಇಲ್ಲಿಯವರೆಗೆ ಅವರ ಕೃತಿಗಳು ಹೊರಾಟದ ಜೊತೆಗೆ ಕಲಾಸಂವೇದನೆಯನ್ನು ಉಳಿಕೊಂಡಿರುವ ಬಗೆ ನಮಗೆಲ್ಲ
ಮಾದರಿಯಾಗಿದೆ ಎನಿಸುತ್ತದೆ. ಇದಕ್ಕೆ ಅವರ ಇತ್ತಿಚಿನ ಕಲಾಕೃತಿಗಳನ್ನು ಗಮನಿಸಿದಾಗ ದಾವಂತ ಜಗತ್ತಿನೊಂದಿಗಿನ ಗೀಳು?,
ಹೊರಟ, ಎಲ್ಲವು ಸಿಂಹೊಲಂಘನದ ನಂತರ ದೊರೆಯುವ ತಾಧ್ಯಾತ್ಮ ತಮ್ಮನ್ನ ಬಹಳ ಸುಂದರವಾಗಿ ದುಡಿಸಿಕೊಂಡಿದೆ
ಎನಿಸುತ್ತದೆ. ಮತ್ತೆ ಯೌವ್ವನದ ಕಳೆ ಪ್ರಜ್ವಲಿಸುತ್ತಿದೆ. ಈ ಕಲಾಕೃತಿಗಳಲ್ಲಿನ ಕುಷಲತೆ, ವಿವಿದ ಬಗೆಯ ವರ್ಣಪ್ರಯೋಗಗಳ
ಸೂಕ್ಷತೆ, ಕಲಾವಿದನ ಅರಿವು, ಪ್ರಮಾಣಿಕತೆ ಸೊಗಸಾಗಿ ಕಲಾಕೃತಿಗಳಲ್ಲಿ ಕಂಡುಬರುತ್ತದೆ. ನವೋದಯಕಾಲದ
ಮನೋಧರ್ಮ, ಸಮಕಾಲಿನ ದಾವಂತ ಸ್ಥಿತಿ ಗತಿಗಳ ವಿಷಯಗಳೇ ಈ ಕೃತಿಗಳಲ್ಲಿವೆ ಎನಿಸುತ್ತದೆ. ಈ ಪ್ರಯಾಣವನ್ನು
ಕರ್ನಾಟಕದ ಕಲಾವಿದರು ಪ್ರತಿಯೊಬ್ಬರು ನೋಡಲೇ ಬೇಕಾದ ಪ್ರದರ್ಶನವಿದು. ವಿಮರ್ಶಕರು ಕೆ ವಿ ಸುಬ್ರಹ್ಮಣ್ಯಮ್
ಹೇಳಿದಂತೆ ಇದೊಂದು ಮಹತ್ವಾಕಾಂಕ್ಷೆಯ ಪ್ರದರ್ಶನ.
ಕೇವಲ ಕಲಾವಿದರಲ್ಲದೆ, ಸಾಹಿತಿಗಳು, ನಾಟಕಕಾರರು, ಸಂಗೀತಗಾರರು ತಮ್ಮ ಶಿಷ್ಯವರ್ಗವನ್ನು ಕರೆತಂದು
ಕಲಾವಿದನ ಸಹಾನುಭೂತಿ ಯನ್ನು ಪರಿಚಯಮಾಡಿಸಲು ಇದೊಂದು ಉತ್ತಮವಾದ ಕಲಾಪ್ರದರ್ಶನ.