logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

"ಕಲೆಯನ್ನುವುದೊಂದು ವಿಸ್ಮಯ: ಕೆ. ವಿ. ಸುಬ್ರಮಣ್ಯಂ"
Published By: Police World News
Last Updated Date:  04-Jan-2022
ಕಲಾಸುದ್ದಿ

ಬೆಳಗಾವಿ 3- ತಾನು ಕಂಡ ದೃಶ್ಯವನ್ನು ಗ್ರಹಿಸಿ ತನ್ನ ಕಲ್ಪನೆಯನ್ನು ಸೇರಿಸಿ ಜನರೊಂದಿಗೆ
ಹಂಚಿಕೊಳ್ಳುವವ ಕಲಾವಿದ ಆದರೆ ಕ್ಷಣಾರ್ಧದಲ್ಲಿ ಇದ್ದುದನ್ನು ಇದ್ದಂತೆ ತೋರಿಸುವುದು ಕ್ಯಾಮರಾ. 
ಛಾಯಾಗ್ರಾಹಕ ಹಾಗೂ ಚಿತ್ರಕಲಾವಿದ ಇಬ್ಬರೂ ಒಬ್ಬರೇಯಾದಾಗ ಏನನ್ನಾದರು ಹೊಸತನ್ನು
ಸಾಧಿಸಲು ಸಾಧ್ಯ. ಇದರಂತೆ ಇಂದಿನ ಕಲಾಪ್ರದರ್ಶನದ ಕಲಾವಿದ ಶ್ರೀಶೈಲ ಮ. ಆನದಿನ್ನಿಯವರು
ಪೋಟೋಗ್ರಾಫಿಯ ಹಿನ್ನಲೆಯನ್ನು ಹೊಂದಿರುವುದರಿಂದ ಇವರು ಏನನ್ನಾದರೂ ಹೊಸತನ್ನು
ಸಾಧಿಸಬಹುದು.   ಸುಂದರವಾಗಿರುವುದು ಮಾತ್ರ ಕಲೆಯಲ್ಲ ಎಲ್ಲದರಲ್ಲಿ ಕಲೆ ಅಡಗಿರುತ್ತದೆ.
ಕಲೆಯನ್ನುವುದೊಂದು ವಿಸ್ಮಯ ಎಂದು  ಖ್ಯಾತ ಕಲಾ ಇತಿಹಾಸ ತಜ್ಞರು, ಕಲಾವಿಮರ್ಶಕರು
ಹಾಗೂ ಕಲಾವಿದರಾದ ಕೆ. ವಿ. ಸುಬ್ರಮಣ್ಯಂ ಇಂದಿಲ್ಲಿ ಹೇಳಿದರು.
ದಿ. 1 ಶನಿವಾರದಂದು ನಗರದ ತಿಲಕವಾಟಿಯಲ್ಲಿರುವ  ಕೆ. ಬಿ. ಕುಲಕರ್ಣಿ ಆರ್ಟಗ್ಯಾಲರಿ,
ವರೆರಕರ್ ನಾಟ್ಯ ಗೃಹದಲ್ಲಿ ಮುಧೋಳದ ಕಲಾವಿದ ಶ್ರೀಶೈಲ ಮ. ಆನದಿನ್ನಿಯವರ 
ಚಿತ್ರಕಲಾಕೃತಿಗಳ  ಪ್ರದರ್ಶನವನ್ನು  ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ
ಧನಸಹಾಯದೊಂದಿಗೆ ಹಮ್ಮಿಕೊಳ್ಳಲಾಗಿತ್ತು.  ಈ ಸಂದರ್ಭದಲ್ಲಿ ದೀಪ ಬೆಳಗಿ ಕಾರ್ಯಕ್ರಮವನ್ನು
ಉದ್ಘಾಟಿಸಿದ ಸುಬ್ರಮಣ್ಯಂ ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಆರ್ಟ ಅಫೇರ್ಸ ಆಂಗ್ಲ ಪತ್ರಿಕೆ ಸಂಪಾದಕರಾದ ವಿಶ್ವನಾಥ ಗುಗ್ಗರಿಯವರು
ಮಾತನಾಡುತ್ತ  ಫೋಟೋಗ್ರಾಫಿ ಹಿನ್ನಲೆಯಿಂದ ಬಂದವರು ಅಮೂರ್ತ ಚಿತ್ರಗಳನ್ನು ಬಿಡಿಸುವುದು
ತುಂಬ ಕಷ್ಟದ ಕೆಲಸ ಆದರೆ ಫೋಟೋಗ್ರಾಫರರಾದ ಶ್ರೀಶೈಲ ಆನದಿನ್ನಿಯವರು ಅಮೂರ್ತ ಕಲೆ
ಸಾಧಿಸಿರುವುದೊಂದು ವಿಶೇಷವೆಂದು ಹೇಳಿದರು.
ಇನ್ನೋರ್ವ ಅತಿಥಿ ಖ್ಯಾತ ಚಿತ್ರಕಲಾವಿದರಾದ ಬಾಳು ಸದಲಗಿ, ಕಲಾವಿದನ ಸಾಧನೆಗೆ ಕೊನೆಯೆಂಬುದಿಲ್ಲ.
ಜೀವನದ ಕೊನೆಯುಸಿರುವವರೆಗೂ ಅವನು ಕಲೆಯ ವಿದ್ಯಾರ್ಥಿಯಾಗೇ ಇರುತ್ತಾನೆ ಎಂದು ಹೇಳಿದರು. 
ಸುನಿಲ ಮಠದ ಕಾರ್ಯಕ್ರಮ ನಿರೂಪಿಸಿದರು. 


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img