"ದಾವಣಗೆರೆ ವಿ.ವಿ ದೃಶ್ಯ ಕಲಾ ಮಹಾವಿದ್ಯಾಲಯಕ್ಕೆ ಚಿತ್ರಕಲಾವಿದ ವಿಜಯ್ ಸಿಂಧೂರ ಭೇಟಿ"
Published By: Police World News
Last Updated Date: 05-Jan-2022
ಇದೇ ದಿನಾಂಕ ೦3.೦1.2022 ರಂದು ಕರ್ನಾಟಕದ ಪ್ರಸಿದ್ಧ ಚಿತ್ರ ಕಲಾವಿದ ಶ್ರೀ ಯುತ ವಿಜಯ್ ಸಿಂಧೂರ
ರವರುದಾವಣಗೆರೆ ಯಲ್ಲಿ ಇರುವ ದಾವಣಗೆರೆ ವಿ ವಿಯ ದೃಶ್ಯ ಕಲಾ ಮಹಾವಿದ್ಯಾಲಯಕ್ಕೆ
ಭೇಟಿ ನೀಡಿದರು&ಅಲ್ಲಿನ ಪೇಂಟಿಂಗ್ ವಿಭಾಗದ ಬಿ.ವಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳು
ಹಾಗೂ ಎಂ.ವಿ.ಎ(ಪೇಂಟಿಂಗ್ ವಿಭಾಗ)ದ ವಿದ್ಯಾರ್ಥಿಗಳ ಜೊತೆ ಕಲಾ ಸಂವಾದ ನಡೆಸಿ,
ರೇಖಾಚಿತ್ರ ಪ್ರಾತ್ಯಕ್ಷಿಕೆ ನೀಡಿದುದು ವಿಶೇಷ. ವಿದ್ಯಾರ್ಥಿಗಳ ಜೊತೆಯಲ್ಲಿ ತಮ್ಮ ಕಲಾನುಭವಗಳನ್ನು
ಈ ಹಿರಿಯ ಕಲಾವಿದರು ಹಂಚಿಕೊಂಡರಲ್ಲದೆ,'ನೀವು ಯಾವುದೇ ಊರಿಗೆ ಪ್ರಯಾಣ ಬೆಳೆಸಿದರೂ
ನಿಮ್ಮೊಟ್ಟಿಗೆ ಸ್ಕೆಚ್ ಪ್ಯಾಡ್, ಪೆನ್, ಪೆನ್ಸಿಲ್, ಬಣ್ಣ ಪ್ಯಾಲೇಟ್ ಇವೆಲ್ಲವನ್ನೂ ಮರೆಯದೇ
ಕೊಂಡೊಯ್ದಿರಬೇಕು.ಆ ಊರುಗಳಲ್ಲಿನ ವಿಶೇಷ ತಾಣ/ಸಂಸ್ಕೃತಿ/ಆಚರಣೆ ಇವೆಲ್ಲವನ್ನು
ಬೆರಗುಗಣ್ಣಿನಿಂದ ಆಸ್ವದಿಸುವುದಷ್ಟೇ ಅಲ್ಲ, ಚಿತ್ರ ಗಳಲ್ಲಿ ಅವುಗಳನ್ನು ಅಭಿವ್ಯಕ್ತಿಸುವ ರೂಢಿ
ಬೆಳೆಸಿಕೊಳ್ಳಬೇಕು. ಚಿತ್ರಗಳು ಮುಗಿದ ಕೂಡಲೇ ಅವುಗಳ ಕೆಳಭಾಗದಲ್ಲಿ ನಿಮ್ಮ ಸಹಿ,
ರಚಿಸಿದ ದಿನಾಂಕ,ತಿಂಗಳು, ವರ್ಷವನ್ನು ಸರಿಯಾಗಿ ನಮೂದಿಸಬೇಕು. ನಿಮ್ಮ
ಬಿಡುವಿನ ವೇಳೆಯಲ್ಲಿ ಅವುಗಳನ್ನು ಆಸಕ್ತಿಯಿಂದ ಅವಲೋಕಿಸುತ್ತಿರಬೇಕು.
ಆದರೆ ಮತ್ತೊಮ್ಮೆ ಅದೇ ಚಿತ್ರವನ್ನು ತಿದ್ದುವ ಗೋಜಿಗೆ ಹೋಗಬಾರದು. ಹಾಗೆ
ಮಾಡುವ ಅಭ್ಯಾಸ ರೂಢಿಸಿಕೊಂಡರೆ ಹಿಂದೆ ಮಾಡಿದ ಚಿತ್ರಗಳೇ ನಿಮಗೆ ಮಾರ್ಗದರ್ಶಿಗಳಾಗುತ್ತವೆ.
ಚಿತ್ರ ರಚನೆಯಲ್ಲಿ ನಿಮ್ಮ ಭೌತಿಕ ಇರುವಿಕೆಯನ್ನು ನೀವು ಮರೆತಿರೆಂದಾದರೆ ನೀವು
ಚಿತ್ರಕಲಾ ತಪಸ್ವಿ ಆದಿರಿ ಎಂದರ್ಥ.ಜನ ನಿಮ್ಮ ಕಲಾಕೃತಿಗಳನ್ನು ಗುರ್ತಿಸಿ 'ಕಲಾವಿದ'
ಎಂಬುದಾಗಿ ಯಾವಾಗಿನಿಂದ ಗೌವಿಸತೊಡಗುತ್ತಾರೋ ಆವಾಗ ನೀವು ಕಲಾವಿದ/ದೆ ಎನಿಸುತ್ತೀರಿ'
ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿಗಳಾದ
ಡಾ.ಸತೀಶ ಕುಮಾರ್ ಪಿ.ವಲ್ಲೇಪುರೆ, ಪ್ಯಾಷನ್ ಡಿಸೈನ್ ವಿಭಾಗದ ಸಂಯೋಜನಾಧಿಕಾರಿ
ಡಾ.ಜೈರಾಜ್ ಚಿಕ್ಕ ಪಾಟೀಲ್, ಬೋಧನಾ ಸಹಾಯಕರುಗಳಾದ ಡಾ.ಸಂತೋಷ ಕುಮಾರ್ ಕುಲಕರ್ಣಿ,
ದತ್ತಾತ್ರೇಯ ಎನ್. ಭಟ್, ಶಿವಶಂಕರ್ ಸುತಾರ್ ಮೊದಲಾದವರು ಉಪಸ್ಥಿತರಿದ್ದರು.
ಕಲಾವಿದ ವಿಜಯ್ ಸಿಂಧೂರರವರನ್ನು ಶಾಲು-ಹಾರದೊಂದಿಗೆ ಸನ್ಮಾನಿಸಲಾಯಿತು.
ಶ್ರೀ ಯುತ ವಿಜಯ್ ಸಿಂಧೂರ ರವರ ಕಿರು ಪರಿಚಯ:----83ವಸಂತಗಳನ್ನು ಪೂರೈಸಿರುವ
ಇವರು ವಿಜಯಪುರ ಜಿಲ್ಲೆಯ ಜಮಖಂಡಿಯಲ್ಲಿ ನೆಲೆಸಿ,ಕಲಾಕೃತಿಗಳನ್ನು ನಿರ್ಮಿಸುತ್ತಿದ್ದಾರೆ.
ಇವರು ಚಿತ್ರಕಲಾ ಶಿಕ್ಷಣ ಪಡೆದಿದ್ದು ಮುಂಬೈದಲ್ಲಿರುವ ಜೆ.ಜೆ ಕಲಾಶಾಲೆಯಲ್ಲಿ,
ಫಲ್ಸೀಕರ್ ರಂತಹ ಶ್ರೇಷ್ಠ ಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ. ತೈಲವರ್ಣ,
ಜಲವರ್ಣ ದಂತಹ ದೃಶ್ಯ ಕಲಾ ವಲಯದ ಬಗೆ ಬಗೆಯ ಮಾಧ್ಯಮಗಳಲ್ಲಿ ಒಳ್ಳೆಯ
ಹಿಡಿತ ಸಾಧಿಸಿರುವ ವಿಜಯ್ ಸಿಂಧೂರರು ತಮ್ಮ ಕಲಾ ಸಾಧನೆಗಾಗಿ
-ಕರ್ನಾಟಕ ಲಲಿತಕಲಾ ಅಕಾಡೆಮಿ ಕೊಡಮಾಡುವ ಗೌರವ ಪ್ರಶಸ್ತಿ,
ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ
ಮೊದಲಾದ ಗೌರವಗಳಿಗೆ, ಪುರಸ್ಕಾರಗಳಿಗೆ ಭಾಜನರಾದವರು. ಇವರ ಕಲಾಕೃತಿಗಳಲ್ಲಿ
ಆಕಾರಗಳು ನೈಜದ ಸೆಳಕಿನಿಂದ ಕೂಡಿರುವವಾದರೂ ಸೃಜನಶೀಲ ಆಯಾಮದೊಂದಿಗೆ
ನಿರ್ವಹಿಸಲ್ಪಟ್ಟಿರುತ್ತವೆ.ವರ್ಣಮೇಳ ನೋಟಕ್ಕೆ ಹಿತವಾದುದಾಗಿಯೂ,
ಸಮತೋಲನಯುಕ್ತವಾಗಿಯೂ,ಲಯಬಧ್ಧವಾಗಿಯೂ ಇರುವುದು ವಿಶೇಷ.
ಬಯಲು ಸೀಮೆಯ ಜನಪದೀಯ ಆಚರಣೆ, ಸಂಸ್ಕೃತಿ ಇವರ ಅನೇಕ ಕಲಾಕೃತಿಗಳ
ವಸ್ತು ವಿಷಯಗಳು.ಭಾವಚಿತ್ರ&ವ್ಯಕ್ತಿ ಚಿತ್ರ ಗಳಲ್ಲೂ ಸಹ ಸಿದ್ಧಹಸ್ತರಿವರು.
ಲೇಖನ----ದತ್ತಾತ್ರೇಯ ಎನ್. ಭಟ್, ದಾವಣಗೆರೆ