logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಭಾವನೆಗಳ ಅಭಿವ್ಯಕ್ತಿಯಲ್ಲಿ ತನ್ಮಯಗೊಳ್ಳುವ ಕಲಾವಿದ
Published By: Police World News
Last Updated Date:  08-Jan-2022
ಕಲಾಸುದ್ದಿ

ಕಲಾವಿದ ತನ್ನ ವ್ಯಕ್ತಿತ್ವದ ಭಾವನೆಗಳನ್ನು ವಿವಿಧ ಮಾಧ್ಯಮಗಳ ಮೂಲಕ ಅಭಿವ್ಯಕ್ತಿ ಪಡಿಸುವಾಗ

ತನ್ಮಯತೆಗೆ ಒಳಗಾಗುತ್ತಾನೆ. ತನ್ನನ್ನೇ ತಾನು ಮೈಮರೆತು ಆನಂದಿಸುತ್ತಾನೆ .ಇದು ಚಿತ್ರಕಲೆಗೆ ಇರುವ

ಮಹಾಶಕ್ತಿ ಅನಾದಿಕಾಲದಿಂದಲೂ ಚಿತ್ರಕಲೆಮೇರು ಸ್ಥಾನವನ್ನು ಹೊಂದಿದೆ .ಕಲಾವಿದ ತನ್ನ

ಇರುವಿಕೆಯನ್ನು ಅವರು ರಚಿಸುವ ಕಲಾಕೃತಿಗಳಿಂದ ದೃಢಪಡಿಸುತ್ತಾರೆ .

ಎಂದು ಹಿರಿಯ ಕಲಾವಿದ ಆರ್ ಎಲ್ ಜಾಧವ್ ಅಭಿಪ್ರಾಯ ವ್ಯಕ್ತಪಡಿಸಿದರು ನಗರದ ಕಂಟೋನ್ಮೆಂಟ್

ನಲ್ಲಿರುವ ಶ್ರೀ ಭವಾನಿ ಮಹಾವಿದ್ಯಾಲಯದಲ್ಲಿ ಕಲಾವಿದ ಹನುಮಂತಪ್ಪ ಅವರ ಏಕವ್ಯಕ್ತಿಚಿತ್ರಕಲಾ

ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು ಮುಖ್ಯ ಅತಿಥಿಗಳನುಡಿಯಲ್ಲಿ ಕನಾ೯ಟಕ ರಾಜ್ಯ

ಚಿತ್ರಕಲಾಶಿಕ್ಷಕರಸಂಘದನಿದೇ೯ಶಕರುಹಾಗೂ ಬಳ್ಳಾರಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ

ಅಧ್ಯಕ್ಷರಾದ ಯು ರಮೇಶ್ ಮಾತನಾಡಿ ಕಲಾವಿದರಲ್ಲಿ ಸೃಜನಾತ್ಮಕತೆ ಇದ್ದಲ್ಲಿ ಅದ್ಭುತವಾದ

ಕಲಾಕೃತಿಗಳು ಒಡಮೂಡುತ್ತವೆ ರೇಖೆಗಳ ಏಕತಾನತೆ ವರ್ಣಸಂಯೋಜನೆಯ ನಿಖರತೆ ಅದ್ಭುತ

ಕಲಾ ಕೃತಿಗೆ ಸಾಕ್ಷಿಯಾಗುತ್ತದೆ ಪರಿಪೂರ್ಣ ಕಲಾವಿದನಾಗಬೇಕಾದರೆ ಸಾಕಷ್ಟು ಪರಿಶ್ರಮ ಅಗತ್ಯ

ಹನುಮಂತು ಅವರ ಕಲಾಕೃತಿಗಳಲ್ಲಿ ಸೃಜನಶೀಲತೆ ಒಳಗೊಂಡಿದ್ದು ಪ್ರಾಣಿ ಪಶುಪಕ್ಷಿಗಳ ಸಂರಕ್ಷಿಸುವ

ಹೊಣೆಗಾರಿಕೆ ನಮ್ಮೆಲ್ಲರಿಗೂ ಸೇರಿದ್ದು ಎಂಬ ಸಂದೇಶ ಒಳಗೊಂಡಿವೆ ಕಲಾವಿದರ ಜ್ಞಾಪಕಶಕ್ತಿ

ಸೃಜನಾತ್ಮಕ ವಾಗಿರುತ್ತದೆ ಜ್ಞಾಪಕಶಕ್ತಿ ಯಿಂದಾಗಿ ನೈಜವಾದ ಕಲಾತ್ಮಕ ಆಕೃತಿಯ ಆಲೋಚನೆ ನೀಡುತ್ತದೆ.


ಕಲಾವಿದ ಹನುಮಂತು ತನ್ನೆಲ್ಲ ಪರಿಶ್ರಮವನ್ನು ಈ ದಿಸೆಯಲ್ಲಿ ದೃಢಪಡಿಸಿದ್ದಾರೆ ಎಂದರುಲಲಿತ

ಅಕಾಡೆಮಿಯ ನಿಕಟಪೂರ್ವ ಸದಸ್ಯರಾದ ನಿಹಾಲ್ ವಿಕ್ರಂ ರಾಜು ಮಾತನಾಡಿ ಒಬ್ಬ ಕಲಾವಿದ ತಾನು

ಚಿತ್ರಿಸಿದ ಚಿತ್ರಗಳ ಪ್ರದರ್ಶನಕ್ಕೆ ಸ್ಥಳದ ಅಭಾವ ತಲೆದೋರುವುದು ಸಹಜ ಮುಂಬೈ ದೆಹಲಿ ಯಂತಹ

ಸ್ಥಳಗಳಲ್ಲಿ ಪ್ರದರ್ಶನ ಮಾಡುವುದೆಂದರೆ ದೊಡ್ಡ ಸಾಹಸವೇ ಸರಿ ಜಹಂಗೀರ್ ಮ್ಯೂಸಿಯಂನಲ್ಲಿ

ಪ್ರದರ್ಶನ ಬಯಸಿದಲ್ಲಿ ಹನ್ನೆರಡು ವರ್ಷಗಳವರೆಗೆ ಕಾದಲ್ಲಿ ಕೇವಲ ಅರ್ಜಿ ಸಲ್ಲಿಸಲು ಮಾತ್ರ

ಅನುಮತಿ ಸಿಗುತ್ತದೆ ಆನಂತರ ಪ್ರದರ್ಶನದ ಮಾತು ಎಂದು ತಿಳಿಸಿದರಲ್ಲದೆ ಹನುಮಂತು ಅವರ

ಕಲಾಕೃತಿಗಳಲ್ಲಿ ಜೀವಂತಿಕೆಯು ಮೈದಾಳಿದ್ದು ನೋಡುಗರಿಗೆ ಆನಂದ ನೀಡುವಲ್ಲಿ ಯಶಸ್ವಿಯಾಗಿವೆ

ಕಲಾಕೃತಿಗಳು ಪ್ರದರ್ಶನ ಗೊಂಡರಷ್ಬೇ ಸಾಲದು ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಕಲಾ

ಪ್ರದರ್ಶನವನ್ನು ವೀಕ್ಷಿಸುವಂತಾಗಬೇಕುಮತ್ತು ಮಾರಾಟವಾಗು ವಂತಾಗಬೇಕು ಎಂದು ನುಡಿದರು

ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳಲ್ಲಿ ನಿವೃತ್ತ ಚಿತ್ರಕಲಾ ಶಿಕ್ಷಕರು ಹಾಗೂ ಬಳ್ಳಾರಿ ಜಿಲ್ಲಾ

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ ಬಿ ಸಿದ್ದಲಿಂಗಪ್ಪ ಮಾತನಾಡಿ ಪ್ರದರ್ಶನದ ಪೂರ್ವ

ತಯಾರಿಯಲ್ಲಿ ಸಾಕಷ್ಟು ಜಾಗ್ರತಿಯನ್ನು ವಹಿಸಿದಲ್ಲಿ ಕಲಾಪ್ರದರ್ಶನಗಳು ಯಶಸ್ವಿಯಾಗುತ್ತವೆ

ಆಧುನಿಕ ಕಲೆಗಳ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆಗಳು ಕಡೆಗಣನೆ ಗೊಳ್ಳುತ್ತಿರುವುದು ತುಂಬಾ

ವಿಷಾದನೀಯ ಯುವ ಕಲಾವಿದರು ಸಾಮಾಜಿಕ ಸಂದೇಶ ಸಾರುವ ಕಲಾಕೃತಿಗಳ ರಚನೆಗೆ ಹೆಚ್ಚಿನ ಗಮನ

ನೀಡುವುದು ಇಂದಿನ ದಿನಗಳಲ್ಲಿ ಅವಶ್ಯಕತೆ ಇದೆ ಎಂದರು ಈ ದೇಶದ ಅನೇಕ ರಾಜಮಹಾರಾಜರು

ಕಲಾವಿದರಿಗೆ ರಾಜಾಶ್ರಯ ನೀಡಿ ಕಲೆ ಸಾಹಿತ್ಯ ಸಂಸ್ಕೃತಿಯ ಉಳಿವಿಗೆ ಶ್ರಮಿಸಿ ದ್ದಾರೆ ಈಗ ಸರ್ಕಾರಗಳೇ

ವಿವಿಧ ಇಲಾಖೆಗಳ ಮೂಲಕ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತಿವೆ

ಕಲಾವಿದರ ಜೀವಚೈತನ್ಯಕ್ಕೆ ಪ್ರೋತ್ಸಾಹದ ಅಗತ್ಯತೆ ಇದೆ ಎಂದರು ಕಲಾವಿದ ಹನುಮಂತು ಮಾತನಾಡಿ

ವಿದ್ಯಾರ್ಥಿ ದಿಸೆಯಲ್ಲಿ ಜಲವರ್ಣ ಕಲಾಕೃತಿಗಳ ರಚನೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನನಗೆ

ಕಾಲಾಂತರದಲ್ಲಿ ಆಕ್ರಲಿಕ್ ಮಾಧ್ಯಮಕ್ಕೆ ನನ್ನನ್ನು ತೊಡಗಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು

ಕ್ರಮೇಣ ಅದರಲ್ಲಿ ಹಿಡಿತ ಸಾಧಿಸಿ ಕಲಾಕೃತಿಗಳ ರಚನೆಗೆ ಸಿದ್ಧನಾದೆ ನನ್ನ ಕಲಾಕೃತಿಗಳಲ್ಲಿ

ನನ್ನದೇ ಛಾಪು ಮೂಡಿಸುವ ಪ್ರಯತ್ನದಲ್ಲಿ ಸಾಗಿದ್ದೇನೆ ಕಲಾವಿದ ಸದಾ ವಿದ್ಯಾರ್ಥಿಯಾಗಿದ್ದಲ್ಲಿ

ಉತ್ತಮ ರೀತಿಯ ಕಲಾಕೃತಿಗಳನ್ನು ರಚಿಸಲು ಸಾಧ್ಯ ಕಲಿಕೆಗೆ ಕೊನೆಯಿಲ್ಲ ಕಲಾವಿದನಿಗೆ ಸಾವಿಲ್ಲ

ಎಂಬ ಧ್ಯೇಯದೊಂದಿಗೆ ಚಿತ್ರರಚನೆಯಲ್ಲಿ ಸಾಗಿದ್ದೇನೆ ಎಂದರು ನಿರೂಪಣೆಯನ್ನು ಕಲಾ ಶಿಕ್ಷಕ

ನಾಗೇಶ್ವರರಾವ್ ನಿರ್ವಹಿಸಿದರೆ ಕಲಾ ಶಿಕ್ಷಕ ನರಸಿಂಹಮೂರ್ತಿ ವಂದಿಸಿದರು .

ಪ್ರದರ್ಶನವು 3ದಿನಗಳ ಕಾಲ ಕಲಾ ಮಂದಿರದಲ್ಲಿ ಜರುಗಲಿದೆ .


-ವರದಿ ಯು ರಮೇಶ್


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img