logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮುದ್ರಣ ಬಿನಾಲೆ.
Published By: Police World News
Last Updated Date:  08-Jan-2022
ಕಲಾಸುದ್ದಿ

  ಬೆಂಗಳೂರಿನ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಮುದ್ರಣ ಬಿನಾಲೆಯನ್ನು
ಕೇಂದ್ರ ಲಲಿತಕಲಾ ಅಕಾಡೆಮಿ ಏರ್ಪಡಿಸಿದೆ. ಜನವರಿ 10 ರಿಂದ 23 ರ ವರೆಗೆ ನಡೆಯುವ ಈ ಪ್ರದರ್ಶನವನ್ನು
ಲಲಿತ ಕಲಾ ಅಕಾಡೆಮಿಯು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಹಯೋಗದೊಂದಿಗೆ ಕುಮಾರಕೃಪಾ
ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ನ ಹಳೆಯ ಕ್ಯಾಂಪಸ್ ನಲ್ಲಿ ನಡೆಸುತ್ತಿದೆ. ಲಲಿತ ಕಲೆಯ ಒಂದು
ಪ್ರಮುಖ ಮಾಧ್ಯಮವಾಗಿರುವ ಪ್ರಿಂಟ್ ಮೇಕಿಂಗ್ ನ ಈ ಪ್ರದರ್ಶನದಲ್ಲಿ ಭಾರತವೂ ಸೇರಿದಂತೆ ಜರ್ಮನಿ,
ರಷ್ಯಾ, ನೆದರ್ ಲ್ಯಾಂಡ್ಸ್, ಮೆಕ್ಸಿಕೋ, ಬಾಂಗ್ಲಾದೇಶ, ಅಮೆರಿಕ, ಫ್ರಾನ್ಸ್, ಅರ್ಜೆಂಟೈನಾ, ಪೋಲೆಂಡ್,
ಕ್ರೋಏಷಿಯಾ, ಇಸ್ರೇಲ್, ಪೆರು ಹಾಗೂ ನೇಪಾಳ ಇತ್ಯಾದಿ 14 ದೇಶಗಳ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.
ಇದರಲ್ಲಿ ಅಂತಾರಾಷ್ಟ್ರೀಯ ವಿಭಾಗದಲ್ಲಿ 28, ಆಹ್ವಾನಿತ ಕಲಾವಿದರಲ್ಲಿ 33 ಹಾಗೂ ರಾಷ್ಟ್ರಮಟ್ಟದ
121 ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ನಮ್ಮ ದೇಶದ ಅತ್ಯಂತ ಪ್ರಸಿದ್ಧ ಮುದ್ರಣ ಕಲಾವಿದರಾಗಿದ್ದ
ಶಾಂತಿನಿಕೇತನದ ಶ್ರೀ ಸೋಮನಾಥ ಹೋರೆ ಅವರ ಜನ್ಮಶತಾಬ್ದಿಯ ನೆನಪಿನಲ್ಲಿ ವಿಶೇಷ ವಿಭಾಗವನ್ನು
ತೆರೆಯಲಾಗಿದೆ. 14 ದಿನಗಳು ನಡೆಯುವ ಈ ಕಲಾಪ್ರದರ್ಶನದ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಮುದ್ರಣ
ಶಿಬಿರವೊಂದನ್ನು ಕೂಡಾ ಲಲಿತ ಕಲಾ ಅಕಾಡೆಮಿ ಆಯೋಜಿಸುತ್ತಿದೆ. ಈ ಅದ್ವಿತೀಯ ಕಲಾಪ್ರದರ್ಶನವನ್ನು
ಕರ್ನಾಟಕ ಚಿತ್ರಕಲಾ ಪರಿಷತ್ ನ ಅಧ್ಯಕ್ಷರಾದ ಶ್ರೀ ಬಿ. ಎಲ್. ಶಂಕರ್ ಅವರು ಕೇಂದ್ರ ಲಲಿತಕಲಾ ಅಕಾಡೆಮಿಯ
ಉಪಾಧ್ಯಕ್ಷರಾದ ಡಾ. ನಂದಲಾಲ್ ಠಾಕೂರ್ ಅವರ ಸಮ್ಮುಖದಲ್ಲಿ ಜನವರಿ 10 ರಂದು ಬೆಳಿಗ್ಗೆ 11.30 ಕ್ಕೆ ನೆರವೇರಿಸಲಿದ್ದಾರೆ.
    ಅತ್ಯಂತ ಅಪರೂಪದ ಈ ವಿಶಿಷ್ಟ ಕಲಾಕೃತಿಗಳ ಪ್ರದರ್ಶನವನ್ನು ಕಲಾವಿದರು ಹಾಗೂ ಕಲಾಸಕ್ತರು
ಕೋವಿಡ್ ನಿಯಮವನ್ನು ಪಾಲಿಸುವ ಮೂಲಕ ವೀಕ್ಷಿಸಬೇಕಾಗಿ  ಈ ಅಂತಾರಾಷ್ಟ್ರೀಯ ಮುದ್ರಣ ಬಿನಾಲೆಯ
ಸಂಯೋಜಕರೂ ಹಾಗೂ ಕೇಂದ್ರ ಲಲಿತಕಲಾ ಅಕಾಡೆಮಿಯ ನಿಕಟಪೂರ್ವ ಆಡಳಿತಾಧಿಕಾರಿ
ಶ್ರೀ ಚಿ.ಸು. ಕೃಷ್ಣಸೆಟ್ಟಿಯವರು ಈ ಪತ್ರಿಕಾ ಹೇಳಿಕೆಯ ಮೂಲಕ ವಿನಂತಿಸಿದ್ದಾರೆ. 



-- Ganesh Dhareshwar 


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img