logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಹಿರಿಯ ಕಲಾವಿದರಾದ ಶ್ರೀ ಬಿ. ಮಾರುತಿ ಇವರ ಚಿತ್ರಕಲಾ ಪ್ರದರ್ಶನವು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.
Published By: Police World News
Last Updated Date:  08-Jan-2022
ಕಲಾಸುದ್ದಿ

ಸರಕಾರಿ ಆರ್ಟ್ ಗ್ಯಾಲರಿ, ಧಾರವಾಡದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಧನಸಹಾಯದೊಂದಿಗೆ ಧಾರವಾಡದ ಹಿರಿಯ ಕಲಾವಿದರಾದ ಶ್ರೀ ಬಿ. ಮಾರುತಿ ಇವರ ಚಿತ್ರಕಲಾ ಪ್ರದರ್ಶನವು ದಿನಾಂಕ : 05-01-2022ರಂದು ಬೆಳಿಗ್ಗೆ 11.00 ಗಂಟೆಗೆ ಉದ್ಘಾಟನೆಯಾಯಿತು. ಕಲಾಭಿಮಾನಿಗಳ ಅಪೇಕ್ಷೆಮೇರಿಗೆ ಚಿತ್ರಕಲಾ ಪ್ರದರ್ಶನವನ್ನು ದಿನಾಂಕ : 10-01-2022 ರಿಂದ 16-01-2022ರವರೆಗೆ ವಿಸ್ತರಿಸಲಾಗಿದೆ. 
 ಚಿತ್ರಕಲಾ ಪ್ರದರ್ಶನವನ್ನು ಧಾರವಾಡ ರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯಾದರ್ಶಿಗಳಾದ ಶ್ರೀ ಶಂಕರ ಹಲಗತ್ತಿ ಅವರು ಕ್ಯಾನ್ವಾಸ್ ಮೇಲೆ ಚಿತ್ರ ಬಿಡಿಸುವುದರ ಮೂಲಕ ಉದ್ಘಾಟಸಿ ಮಾತನಾಡಿದ, ಕಲೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಮಾರುತಿಯವರು ಕೋವಿಡ್ ಸಮಯದಲ್ಲಿ ಲಾಕ್ ಡೌನ್ ಸಮಯವನ್ನು ಅತ್ಯಂತ ಯೋಗ್ಯ ರೀತಿಯಲ್ಲಿ ಉಪಯೋಗಿಸಿಕೊಂಡು, ಉತ್ತಮ ಕಲಾಕೃತಿಗಳನ್ನು ರಚಿಸಿ ಕಲಾಭಿಮಾನಿಗಳಿಗೆ ನೀಡಿದ್ದಾರೆ. ಧಾರವಾಡದಲ್ಲಿ ನೂರಾರು ಜನ ಚಿತ್ರಕಲಾವಿದರಿದ್ದು ಅವರಿಗೆ ಸುಸಜ್ಜಿತವಾದ ಕಲಾಗ್ಯಾಲರಿಯ ಕೊರೆತಿಯಿದೆ, ಆದ್ದರಿಂದ ವಿದ್ಯಾವರ್ಧಕ ಸಂಘದಲ್ಲಿ ಚಿತ್ರಕಲಾಕೃತಿಗಳನ್ನು ಪ್ರದರ್ಶಿಸಲು ಸುಸಜಿತವಾದ ಗ್ಯಾಲರಿ ನಿರ್ಮಿಸಿಸಲಾಗುವುದೆಂದು ತಿಳಿಸಿದರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಬಾಳಣ್ಣ ಶೀಗೀಹಳ್ಳಿಯವರು ಮಾತನಾಡುತ್ತಾ ಮಾರುತಿಯವರ ಕಲಾಕೃತಿಗಳಲ್ಲಿ ಪರಿಸರದ ಮಹತ್ವ, ಕಾಳಜಿ ವಿಶೇಷವಾಗಿದ್ದು ಬಣ್ಣ, ರೇಖೆಗಳು ಮೌನವಾಗಿದ್ದರೂ ಸೃಜನಶೀಲತೆಯ ಮೂಲಕ ಅಭಿವ್ಯಕ್ತಗೊಂಡಿರುವುದು ಸಂತೋಷ ನೀಡುತ್ತವೆ ಎಂದರು. 


 ಇನ್ನೂೀರ್ವ ಅತಿಥಿಗಳಾದ ಶ್ರೀ ಶಶಿಧರ ತೋಡಕರ ಪ್ರಾಚಾರ್ಯರು ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಧಾರವಾಡ ಇವರು ಮಾತನಾಡುತ್ತಾ ಚಿತ್ರಕಲಾಕೃತಿಗಳಲ್ಲಿ ಮಾರುತಿಯವರ ನೋವು-ನಲಿವು, ಸಂತೋಷ, ಭಾವ-ಅನುಭಾವಗಳ ಅಭಿವ್ಯಕ್ತಿ ಇದ್ದು ನೋಡುಗರನ್ನು ತನ್ನಡೆ ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ ಎಂದರು. ಮತ್ತೋರ್ವ ಅತಿಥಿಗಳಾದ ಶ್ರೀಮತಿ ಮಂಜುಳಾ ಯಲಿಗಾರ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಇವರು ಮಾತನಾಡುತ್ತಾ ಕಲೆಯು ಒಂದು ಮಾಧ್ಯಮವಾಗಿದ್ದು ಅನೇಕ ವಿಷಯಗಳನ್ನು ಒಳಗೊಂಡಿದ್ದು ಅನೇಕ ಅರ್ಥಗಳನ್ನು ಸೂಚಿಸುತ್ತವೆ ಆದರೇ ಆಸ್ವಾಧಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.


 ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಉಪಾಧ್ಯಕ್ಷರು, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಇವರು ಧಾರವಾಡವು ಸಾಂಸ್ಕೃತಿಕ ನಗರವಾಗಿದ್ದು ಧಾರವಾಡದಲ್ಲಿರುವ ಕಲಾಭವನ ಕಲಾವಿದರಿಗೆ ಲಭ್ಯವಾಗುವುದು ಯಾವಾಗ ಅದು ಧಾರವಾಡ ಮಹಾನಗರ ಪಾಲಿಕೆಗೆ ಸೀಮಿತವಾಗಿದ್ದು ಕಲಾಭವನದ ಉದ್ದೇಶ ಸಾರ್ಥಕವಾಗಬೇಕಾದರೆ ಧಾರವಾಡದ ಕಲಾವಿದರು ಎಚ್ಚೆತ್ತುಕೊಳ್ಳುವುದು ಅವಶ್ಯವಿದೆ ಎಂದರು. ಮಾರುತಿಯವರು ಅನೇಕ ಉತ್ತಮ ಕಲಾಕೃತಿಗಳನ್ನು ನಿರ್ಮಿಸಿ ಕಲಾವಲಯವನ್ನು ಸಮೃದ್ದ ಗೊಳಿಸಿದ್ದಾರೆ. ಅವರು ಇನ್ನು ಹೆಚ್ಚು ಕಲಾಕೃತಿಗಳನ್ನು ರಚಿಸಿ ಕಲಾರಸಿಕರಿಗೆ ನೀಡಲೆಂದು ಹಾರೈಸಿದರು. 


 ಈ ಸಂದರ್ಭದಲ್ಲಿ ಕಲಾವಿದರಾದ ಬಿ. ಮಾರುತಿಯವರು ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು, ಡಾ. ಬಸವರಾಜ ಕುರಿಯವರು ಕಾರ್ಯಕ್ರಮ ನಿರ್ವಹಿಸಿದರು, ಶ್ರೀ ಎಸ್. ಕೆ. ಪತ್ತಾರವರು ವಂದಿಸಿದರು.
 ಕಾರ್ಯಕ್ರಮಕ್ಕೆ ಶ್ರೀ ನಿಂಗಣ್ಣ ಕುಂಟಿ, ಎಮ್.ಎಮ್. ಚಿಕ್ಕಮಠ, ಡಾ. ದುರ್ಗಾದಾಸ್‍ಯವರು, ಡಾ. ಆನಂದ ಪಾಟೀಲ, ಶ್ರೀ ಶಿವಾನಂದ ಭಾವಿಕಟ್ಟಿ, ಡಾ. ಡಿ. ಬಿ. ಕರಡೋಣಿಯವರು, ಕಲಾವಿದರಾದ ಶ್ರೀ ಎನ್.ಎಂ. ದಾಟನಾಳ, ಶ್ರೀ ಡಿ.ಕೆ. ಕಾಮಕರ, ಶ್ರೀ ಕುಮಾರ ಕಾಟೇನಹಳ್ಳಿ, ಶ್ರೀ ಜಿ.ಸಿ. ಕೋಟೂರ ಹಾಗೂ ಮಾರುತಿಯವರ ಕುಟುಂಬದ ಸದಸ್ಯರಾದ ಶ್ರೀಮತಿ ಸುಜಾತ ರಾಮಣ್ಣ, ದೀಪಕ್ ಬಿ., ನಂದಕುಮಾರ ಬಿ. ಕಿರಣ ಕೆ. ಕುರ್ಲೆ ಹಾಗೂ ನೂರಾರು ಕಲಾ ವಿದ್ಯಾರ್ಥಿಗಳು ಹಾಜರಿದ್ದರು.


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img