"ಕಲಬುರಗಿ ಆರ್ಟ್ ಸ್ಪೇಸ್ - 19"
Published By: Police World News
Last Updated Date: 10-Jan-2022
ಶ್ರೀ ರವಿಕುಮಾರ್ ಕಾಶಿ ರವರು 1968ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರು ತಮ್ಮ
BFA ಪದವಿಯನ್ನು 1988 ರಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ ನಿಂದ ಪೂರ್ಣ ಗೊಳಿಸಿ
MFA (ಮುದ್ರಣ ತಯಾರಿಕೆ) ಪದವಿಯನ್ನು ಪ್ರತಿಷ್ಠಿತ ಫೈನ್ಆರ್ಟ್ ಫ್ಯಾಕ್ಟಲ್ಟ್ MS ವಿಶ್ವ ವಿದ್ಯಾಲಯ
ಬರೋಡ ದಿಂದ ಪೂರ್ಣಗೊಳಿಸಿದರು. ನಂತರ 1995 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ
MA ಇಂಗ್ಲಿಷ್ ನಲ್ಲಿ ಪದವಿ ಪಡೆದ ಇವರು ಗ್ಲಾಸ್ ಗೋ ಸ್ಕೂಲ್ ಆಫ್ ಆರ್ಟ್ UK ಇಂದ
ಕೈ ಯಿಂದ ಮಾಡಿದ ಕಾಗದ ತಯಾರಿಕೆಯನ್ನು ಕಲಿತರು. ಅವರು ಕೊರಿಯಾದ ಜಂಗ್. ಜಿ. ಬ್ಯಾಂಗ್
ನಿಂದ ಸಾಂಪ್ರದಾಯಿಕ ಕೊರಿಯನ್ ಹಂಜಿ ಕಾಗದ ತಯಾರಿಕೆಯ ಅನುಭವವನ್ನು ಪಡೆದಿದ್ದಾರೆ.
ರವಿಕುಮಾರ್ ಕಾಶಿ ಅವರು ಪ್ರಯೋಗಶೀಲ ಕಲಾವಿದರಾಗಿ ಬಹಳ ಕ್ರಿಯಾಶೀಲತೆ ಯಿಂದ
ಕೆಲಸ ಮಾಡುತ್ತಿದ್ದಾರೆ.
ಚಿತ್ರಕಲೆ,ಶಿಲ್ಪಕಲೆ, ಛಾಯಾ ಗ್ರಹಣ,ಮತ್ತು ಪ್ರತಿಷ್ಟಾಪನ ಕಲೆಯಲ್ಲಿ ನಿರಂತರವಾಗಿ ಕೆಲಸ
ಮಾಡುತ್ತಾ ಇರುವ ಇವರು ಅನೇಕ ಕಲಾ ಬರಹಗಳನ್ನು ಬರೆದಿರುವ ಇವರು ಯುವ
ಕಲಾವಿದರಿಗೆ ಮಾರ್ಗದರ್ಶಕ ರಾಗಿದ್ದಾರೆ.
ಇಂದು ದಿನಾಂಕ:26/12/2021 ರಂದು ನಗರದ ಫೈನ್ ಆರ್ಟ್ ಕಾಲೇಜಿನಲ್ಲಿ ಇವರ ಕಲಾಕೃತಿಗಳು
ಕುರಿತು ಚರ್ಚೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಶೋಕ್.ಕೆ.ಸಿ.ಸಂಜಯ.ಕೆ. ಸೂರ್ಯಕಾಂತ್.
ನಂದೂರ.ರಾಮಗಿರಿ ಪೋಲೀಸ್ ಪಾಟೀಲ್.
ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.