ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚಗೆ 2023 ಅದೃಷ್ಟದ ವರ್ಷ.
Published By: ಸತೀಶ್ ನಾರಾಯಣ್ ಕೊಡಗು ರಿಪೋರ್ಟರ್
Last Updated Date: 08-Feb-2023

ಮಡಿಕೇರಿ - : ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಹೆಸರು ಮಾಡಿರುವ ನಟಿ ಕೊಡಗಿನವರಾದ ಹರ್ಷಿಕಾ ಪೂಣಚ್ಚ ಅವರಿಗೆ ಈ ವರ್ಷ ವಿಶೇಷ ವರ್ಷವಾಗಲಿದೆ. ಇವರು ನಟಿಸಿರುವ ಹಲವಾರು ಚಿತ್ರಗಳು ಈ ಬಾರಿ ತೆರೆಗೆ ಬರಲಿದ್ದು, ಹಲವು ನಿರೀಕ್ಷೆಗಳಲ್ಲಿ ಹರ್ಷಿಕಾ ಇದ್ದಾರೆ. ಇದೀಗ ಹೆಸರು ಮಾಡುತ್ತಿರುವ ಕನ್ನಡ ಚಿತ್ರ ವಿಜಯ್ ರಾಘವೇಂದ್ರ - ಜತೆ ನಟಿಸಿರುವ 'ಕಾಸಿನ ಸರ'ದ ಆಡಿಯೋ ರಿಲೀಸ್ ಸಮಾರಂಭ ಮೊನ್ನೆ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಮಾರಂಭದಲ್ಲಿ ಕೊಡ ವ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಹರ್ಷಿಕಾ ತಮ್ಮ ಮಾತಿನ ನಡುವೆ ಒಂದೆರಡು ಈ ವರ್ಷಗಳ ಹಿಂದೆ ಕಣ್ಮರೆಯಾದ ತಮ್ಮ ವು ತ೦ದೆಯನ್ನು ನೆನೆ ದು ಭಾವುಕರಾಗಿದ್ದು, ಈ ಸಂದರ್ಭ ನಟ ವ ವಿಜಯ್ ರಾಘವೇಂದ್ರ ಅವರನ್ನು ಈ ಸಂತೈಸಿದ ಪ್ರಸಂಗವೂ ನಡೆಯಿತು. ಚುರುಕು ಮಾತಿನ ಯುವನಟಿ ಪ್ರಸ್ತುತ ಸುಮಾರು 12 ಚಿತ್ರಗಳಲ್ಲಿ ಈ ಕಾಣಿಸಿಕೊಂಡಿದ್ದು, ಸದ್ಯದಲ್ಲಿ ಒಂದೊಂದಾಗಿ ತೆರೆಗೆ ಬರಲಿದೆ. ಕಾಸಿನ ಸರ ಇದೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಇದು ಸೇರಿದಂತೆ 9 ಕನ್ನಡ, 2 ಭೋಜ್ ಪುರಿ ಹಾಗೂ ಮಲೆಯಾಳಂ 5 ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. - ಕನ್ನಡದಲ್ಲಿ ಲಯಾಕೋಕಿಲಾ – ನಿರ್ದೇಶನದ ತಾಯ್ತ ಸೇರಿದಂತೆ, - ಮಾರಕಾಸ್ತ್ರ, ಹಗ್ಗ, ಕಟ್ಟೆ, ಸ್ತಬ್ಧ, ಸೂಪರಾಗಿದೆ ಲೈಫು, ಕಾಳನಾಗಿಣಿ, ಬೋಜ್ ಪುರಿಯಲ್ಲಿ ಸುಜನ್ ರೇ. ಝಾಟ್ ಮತ್ ಬೋಲೋ, ಸನಮ್ ಟಿ ಮೇರೆ ಹಮ್ರಾಜ್ ಹಾಗೂ ಮಲೆಯಾಳಂನಲ್ಲಿ ಮತ್ತೊಂದು ಚಿತ್ರ ಬಿಡುಗಡೆಯ ಹಾದಿಯಲ್ಲಿದೆ. ಒಂದೆರಡು ವರ್ಷದಿಂದ ಭೋಜ್ ಪುರಿ ಸಿನಿಮಾದಲ್ಲಿ ಬಿಜಿಯಾಗಿದ್ದರಿಂದ ಹರ್ಷಿಕಾ ಕನ್ನಡ ಚಿತ್ರರಂಗದಿಂದ ದೂರಾಗಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ನಾನು ಎಂಟು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದರೂ ಕರ್ನಾಟಕವೇ ನನ್ನ ಮನೆ... ಯಾವತ್ತೂ ನಾನು ಕನ್ನಡದವಳೇ. ಎಂದು ಹರ್ಷಿಕಾ ಹೇಳುತ್ತಾರೆ. ಒಟ್ಟು 13 ಚಿತ್ರಗಳ ಮೂಲಕ 2023 ಹರ್ಷಿಕಾರಿಗೆ ವಿಶೇಷ ವರ್ಷವಾಗಲಿದೆ. ಇತ್ತೀಚಿಗೆ ಕಾಸಿನಸರ ಚಿತ್ರದ ಆಡಿಯೋ ರಿಲೀಸ್ ಮಾಡಿದ ಸಿ.ಎಂ.
