ನಮೀಬಿಯಾದಿಂದ ಮಧ್ಯಪ್ರದೇಶಕ್ಕೆ ಬಂದ 12 ಚಿರತೆಗಳು.
Published By: ಆನಂದಕುಮಾರ ನಾಯಕ್ ಬಾಗಲಕೋಟ ತಾಲೂಕ ರಿಪೋರ್ಟ್
Last Updated Date: 19-Feb-2023
ನವದೆಹಲಿ - : ಆಫ್ರಿಕಾದ ನಮೀಬಿಯಾದಿಂದ ತರಲಾದ 12 ಚಿರತೆಗಳು ವಿಶೇಷ ವಿಮಾನದಲ್ಲಿ ಶನಿವಾರ ದೆಹಲಿ ಮಾರ್ಗವಾಗಿ ಮಧ್ಯ ಪ್ರದೇಶದ ಗ್ವಾಲಿಯರ್ ತಲುಪಿದವು. ವಿಶೇಷ ವಾಯು ಪಡೆಗೆ ಸೇರಿದ ವಿಮಾನವು ಬೆಳಿಗ್ಗೆ 10 ಗಂಟೆಗೆ ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಚೀತಾಗಳನ್ನು ಹೆಲಿಕಾಪ್ಟರ್’ನಲ್ಲಿ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಒಯ್ಯಲಾಯಿತು. ಏಳು ಗಂಡು, ಮೂರು ಹೆಣ್ಣು ಚಿರತೆಗಳು ಇವುಗಳಲ್ಲಿ ಸೇರಿವೆ. ಅವುಗಳನ್ನು ಕುನೋ ರಾಷ್ಟ್ರೀಯ ಉದ್ಯಾನದ ಅವುಗಳ ಕ್ವಾರಂಟೈನ್ ಕೇಂದ್ರದಲ್ಲಿ ಬಿಡಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪರಿಸರ ಮಂತ್ರಿ ಭೂಪೇಂದರ್ ಯಾದವ್ ಹೇಳಿದ್ದಾರೆ. ಅಲ್ಲಿಂದ ಇಲ್ಲಿಗೆ 12 ಚೀತಾ- ಚಿಟ್ಟೆಹುಲಿ ತರುತ್ತಿರುವುದು ಇದೇ ಮೊದಲು. ಅವುಗಳಿಗಾಗಿ 10 ಕ್ವಾರಂಟೈನ್ ಕೇಂದ್ರಗಳನ್ನು ತಯಾರಿಸಲಾಗಿದೆ. ಇಲ್ಲಿನ ಕಾನೂನಿನಂತೆ ಬೇರೆ ದೇಶಗಳಿಂದ ತರಿಸಿದ ಪ್ರಾಣಿಗಳನ್ನು 30 ದಿನ ಪ್ರತ್ಯೇಕತೆಯಲ್ಲಿ ಇಡಬೇಕಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ನಮೀಬಿಯಾದಿಂದ ಎಂಟು ಚೀತಾಗಳನ್ನು ತರಿಸಲಾಗಿತ್ತು. ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿಯವರು ಅವುಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟಿದ್ದರು. ಈಗ ಆ ಎಂಟು ಚೀತಾಗಳು 6 ಚದರ ಕಿಲೋಮೀಟರ್ ಪ್ರದೇಶದಲ್ಲಿ ಕಣ್ಗಾವಲಿನಲ್ಲಿ ಇವೆ. ಸದ್ಯವೇ ಅವುಗಳನ್ನು ಕಾಡಿಗೆ ಬಿಡಲಾಗುತ್ತದೆ. ಭಾರತದಲ್ಲಿನ ಚೀತಾಗಳು ಎಲ್ಲ ಅಳಿದಿರುವುದರಿಂದ ಆಫ್ರಿಕಾದಿಂದ ಚೀತಾ ತರಿಸುವ ಯೋಜನೆ ಕಳೆದೊಂದು ದಶಕದಿಂದ ಹಂತ ಹಂತವಾಗಿ ನಿರ್ಣಯವಾಗಿದೆ. 1952ರಲ್ಲಿ ಭಾರತದ ಕೊನೆಯ ಚಿರತೆ ಸತ್ತಿತು ಎಂದೂ, 1952ರಲ್ಲಿ ಅವನ್ನು ನಿರ್ವಂಶವಾದುದಾಗಿ ಘೋಷಿಸಲಾಯಿತು. ಆಫ್ರಿಕಾದ ಚಿರತೆಗಳು ಬೇರೆ ಪರಿಸರದವು. ಸೂಕ್ತ ಮರು ವಸತಿ ಬೇಕು ಎಂದು ಸುಪ್ರೀಂ ಕೋರ್ಟ್ 2020ರಲ್ಲಿ ಕೊನೆಗೂ ಅನುಮತಿ ನೀಡಿತು.